ಬೆಂಗಳೂರ,ಜನವರಿ,೨೦: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ ೪೬ ವರ್ಷ ವಯಸ್ಸಾಗಿತ್ತು ಪತ್ನಿ ಇಬ್ಬರು ಪುತ್ರರು ಸೇರಿದಂತೆ ಕುಟುಂಬದ ಸದಸ್ಯರನ್ನು ಇಂದು ಅಗಲಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದ ಇವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು ನಂತರ ಬಹು ಅಂಗಾಂಗ ಸಮಸ್ಯೆಗೆ ತುತ್ತಾಗಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ.
ಇವರು ಮೂಲತ ಪಾಂಡಿಚೆರಿಯವರು, ಕಿರಾತಕ, ಬೆಂಗಳೂರು ೫೬೯೯೨೩, ಕಿಚ್ಚು, ಮಿಸ್ಟರ್ ೪೨೦, ಅಂಜದ ಗಂಡು, ರಜನಿಕಾಂತ ಚಿತ್ರಗಳನ್ನು ನಿರ್ದೇಶನ ಮಾಡಿದರು. ಇಂದು ಸಂಜೆ ಪಾಂಡಿಚೇರಿಯಲ್ಲಿ ಪ್ರದೀಪ್ ರಾಜ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.