ಡಾ.ಮಹದೇಪ್ಪ ಹಾಗೂ ಪ್ರಿಯಾಂಕ್‌ ಖರ್ಗೆ ಅವರಿಂದ ಜಂಟಿ ಸಭೆ : ರಾಷ್ಟ್ರೀಯ ಏಕತಾ ಸಮಾವೇಶ ಯಶಸ್ವಿಗೊಳಿಸಲು ನಿರ್ದೇಶನ

ಬೆಂಗಳೂರು : ಭಾರತದ ಸಂವಿಧಾನ ಜಾರಿಗೆ ಬಂದು  75 ವರ್ಷವಾಗಿರುವ ನೆನಪಿನಲ್ಲಿ  ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ʼಸಂವಿಧಾನ ಜಾಥʼ ರಾಜ್ಯದಾದ್ಯಂತ ಒಂದು ತಿಂಗಳ ಕಾಲ ಸಂಚರಿಸಿದ್ದು, ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಫೆ. 24-25ರಂದು ಎರಡು ದಿನಗಳ ಕಾಲ  ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಏಕತಾ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಉನ್ನತ ಅಧಿಕಾರಿಗಳೊಂದಿಗೆ ಸಭೆ  ನಡೆಸಿದರು. 

ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಿದ್ದು ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತಂತೆ ಪರಿಶೀಲನೆ ನಡೆಸಿದರಲ್ಲದೆ ಅಧಿಕಾರಿಗಳಿಗೆ ಹಲವಾರು ನಿರ್ದೇಶನಗಳನ್ನು ನೀಡಿ ಸಮಾವೇಶವನ್ನು ಯಶಸ್ವಿಗೊಳಿಸಲು ಸೂಚನೆಗಳನ್ನು ನೀಡಿದರು

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top