ಶೇ.೧೦೦ ರಷ್ಟು ಮತದಾನವಾಗಲು ಕೈಜೋಡಿಸಿ: ವೈ.ವನಜಾ

ಕಾರಟಗಿ: ತಾಪಂ ಕಾರ್ಯಲಯದಲ್ಲಿ MRM, URW ಹಾಗೂ VRW ಸಭೆ

 

ಸಾವ‍ತ್ರಿಕ ಲೋಕಸಭಾ ಚುನಾವಣೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ  ಶೇ.೧೦೦ ರಷ್ಟು ವಿಕಲಚೇತನರ ಮತದಾನವಾಗಲು ತಾವೆಲ್ಲರೂ ಕೈಜೋಡಿಸಬೇಕು ಎಂದು ತಾ.ಪಂ ಸಹಾಯಕ ನರ‍್ದೇಶಕರಾದ  ವೈ.ವನಜಾ ಅವರು ಹೇಳಿದರು.

ತಾಲೂಕು ಪಂಚಾಯತಿ ಕರ‍್ಯಾಲಯದಲ್ಲಿ ಆಯೋಜಿಸಿದ್ದ ತಾಲೂಕು ವಿವಿಧೋದ್ದ ಎಂ.ಆರ್.ಡಬ್ಲ್ಯೂ ಹಾಗೂ ವಿ.ಆರ್.ಡಬ್ಲ್ಯೂ ರವರ  ತಾಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದರು.

ಚುನಾವಣಾ ಆಯೋಗದಿಂದ ವಿಕಲಚೇತನರು ವ್ಯವಸ್ಥಿತ ರೀತಿಯಲ್ಲಿ ಮತ ಚಲಾಯಿಸಲು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ತಮ್ಮ ಮತಗಟ್ಟೆಗಳಲ್ಲಿ ಸುರಕ್ಷಿತವಾಗಿ ಮತದಾನ ಮಾಡಲು ಮೂಲಭೂತ ಸೌರ‍್ಯಗಳನ್ನು ಒದಗಿಸಲಾಗಿದ್ದು. ಈ ಅವಕಾಶವನ್ನು ಬಳಸಿಕೊಂಡು ಸದೃಢ ಭಾರತಕ್ಕಾಗಿ ತಪ್ಪದೇ ಮತ ಹಾಕಿ. ಯಾವುದೇ ಕಾರಣಕ್ಕೂ ವಿಶೇಷಚೇತನರು ಮತದಾನದಿಂದ ಹೊರಗುಳಿಯಬಾರದಂತೆ ಕ್ರಮವಹಿಸಲು ತಿಳಿಸಿದರು. 

ನಂತರ ಮತಗಟ್ಟೆಗಳಲ್ಲಿ ರ‍್ಯಾಂಪ್, ವಿಲ್ ಚೇರ್ ಇನ್ನಿತರ ಪರಿಕರಗಳು ಹಾಗೂ ಅಗತ್ಯ ಸೌರ‍್ಯಗಳ ಬಗ್ಗೆ ಸಭೆಯಲ್ಲಿ ರ‍್ಚಿಸಿದರು. ತಾ.ಪಂ ಐಇಸಿ ಸಂಯೋಜಕ ಸೋಮನಾಥ ಅವರು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ‌

ಈ ವೇಳೆ ತಾಲೂಕು ವಿವಿದ್ದೊದೇಶ ಪುರ‍್ವಸತಿ ಕರ‍್ಯರ‍್ತೆ ಮಂಜುಳಾ ಪುರಾಣಿಕ, ಗ್ರಾಮೀಣ ಪುರ‍್ವಸತಿ ಕರ‍್ಯರ‍್ತರಾದ ಸೋಮಶೇಖರ್, ಪಂಪಾಪತಿ, ಹುಲುಗಪ್ಪ, ವಿಜಯಲಕ್ಷ್ಮಿ, ಸಾವಿತ್ರಮ್ಮ, ನಾಗರಾಜ್, ಮೈಬೂ, ಲಿಂಗೇಶ್, ಶಿವಕುಮಾರ್ ಇದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top