ಬೆಂಗಳೂರು: ಕೆಂಗೇರಿ ಬಳಿ ಇರುವ ಜ್ಞಾನ ಬೋಧನಿ ಶಾಲೆಯ 1996-97 ನೇ ಬ್ಯಾಚ್ ವಿದ್ಯಾರ್ಥಿಗಳು ಒಟ್ಟುಗೂಡಿ ಸಂಭ್ರಮದಿಂದ ಸ್ನೇಹಿತರ ದಿನ ಅಚರಿಸಿದರು.
ಕುಂಬಳಗೋಡು ಬಳಿ ಇರುವ ಗಾರ್ಡನ್ ಏಷ್ಯಾ ರೆಸಾರ್ಟ್ಸ್ ನಲ್ಲಿ ಇಡೀ ದಿನ ಸ್ನೇಹಿತರು ಸಮಾವೇಶಗೊಂಡು ಸಂಭ್ರಮಿಸಿದರು. ನಂತರ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪುಸ್ತಕ ಒಳಗೊಂಡಂತೆ ಬೋಧನಾ ಪರಿಕರ ವಿತರಿಸಿ ಸಾರ್ಥಕತೆ ಮೆರೆದರು.
ದೇಶ – ವಿದೇಶಗಳಲ್ಲಿ ನೆಲೆಸಿರುವ ರಾಜೇಶ್ ಚಾವತ್, ಸತ್ಯ, ವಿನೋದ್, ಪ್ರಮೀಳಾ, ದೀಪ್ತಿ ದೀಪಕ್, ದಿವ್ಯ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಮ್ಯೂಸಿಕಲ್ ಚೇರ್, ಚೇರ್ ಬೆಲೂನ್ ರೇಸ್, ಲೆಮನ್ ಅಂಡ್ ಸ್ಪೂನ್ ಇತ್ಯಾದಿ ಕ್ರೀಡೆಗಳಲ್ಲಿ ತೊಡಗಿಕೊಂಡರು.
Facebook
Twitter
LinkedIn
WhatsApp
Email
Print
Telegram