ಜಿಂದಾಲ್ ಕೈಗಾರಿಕ ಅಪಘಾತಗಳನ್ನು ತಡೆಯಲು (ಸುರಕ್ಷತೆಗಾಗಿ) ಮತ್ತು ಮೃತ ಕಾರ್ಮಿಕ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ

ಅರ್ಧ ಶತಮಾನದ ಹಿಂದೆ ಈ ಭಾಗದ ಜನರ ಬವಣೆ, ಕಷ್ಟ-ನಷ್ಟಗಳನ್ನು ಪರಿಹರಿಸಲೆಂದು ವಿಜಯನಗರ ಉಕ್ಕಿನ ಕಾರ್ಖಾನೆ ಪ್ರಾರಂಭಿಸಲಾಗಯಿತು ಈ ಭಾಗದ ರೈತರ ಜೀವನಾಧಾರದ ಕೃಷಿ ಭೂಮಿಯ ಮೇಲೆ ಕಾರ್ಖಾನೆಯೊಂದನ್ನು ಸ್ಥಾಪಿಸಲಾಗಿತ್ತು ಭಾರತ ಒಕ್ಕೂಟ ಸರ್ಕಾರ ಬೃಹತ್ ಪ್ರಮಾಣದ ವಿಜಯನಗರ ಉಕ್ಕಿನ ಕಾರ್ಖಾನೆ, ವಿವಿಧೋದ್ದೇಶ ಯೋಜನೆಯ ಕೈಗಾರಿಕೆಗಳು ಒಂದೇ ಸ್ಥಳದಲ್ಲಿರಲು ತೋರಣಗಲ್ಲು ಬಳಿ ನಿರ್ಮಿಸಿತು. 

1973 ಅಕ್ಟೋಬರ್ 14 ರಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಅಮೃತ ಹಸ್ತದಿಂದ ಭೂಮಿ ಪೂಜೆಮಾಡಿ ಉದ್ಘಾಟಿಸಿದರು. ಈ ಭಾಗದ ಜನರು ಅದೃಷ್ಟ ಬದಲಾಯಿಸಿ ಮನೆ-ಮನೆಗೆ ಉದ್ಯೋಗ ಒದಗಿಸುವ ಭರವಸೆಯನ್ನು ಮೂಡಿಸಿತು. ಆದರೆ ಅನೇಕ ವರ್ಷ ಕಳೆದರೂ ಕೈಗಾರಿಕೆ ಪ್ರಾರಂಭಿಸಲಿಲ್ಲ. ಯುವಜನ ಸಂಘಟನೆ DYFI ನೇತೃತ್ವದಲ್ಲಿ ‘ವಿಜಯನಗರ ಉಕು, ಕರ್ನಾಟಕದ ಹಕ್ಕು’ ಎಂಬ ಘೋಷಣೆಯೊಂದಿಗೆ ಪ್ರಬಲವಾದ ಐಕ್ಯ ಹೋರಾಟ ನಡೆಸಬೇಕಾಯಿತು. ನಂತರದ ದಿನಗಳಲ್ಲಿ ಖಾಸಗಿವಲಯದಲ್ಲಿ ಸ್ಥಾಪನೆಗೊಂಡು, ಶ್ರೇಷ್ಠ ಗುಣಮಟ್ಟದ ಅಪಾರ ಪ್ರಮಾಣದಲ್ಲಿ ಶೇಖರವಾಗಿರುವ ಕಬ್ಬಿಣದ ಅದಿರಿನ ನಿಕ್ಷೇಪವನ್ನು ವ್ಯಾಪಕವಾಗಿ ಬಳಸಿಕೊಂಡು ಕೈಗಾರಿಕೋದ್ಯಮಗಳು ಬೆಳೆದು ನಿಂತರು ಈ ಭಾಗದ ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸುತ್ತವೆ ಎಂಬ ಕನಸು ಮಾತ್ರ ಕನಸಾಗಿಯೇ ಉಳಿಯಿತು. 

ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆ ಜೊತೆಗೆ ಇತರ ಕೈಗಾರಿಕೆಗಳು ತಲೆ ಎತ್ತಿ ನಿಂತಿವೆ. ಪರಿಸರದ ಮತ್ತು ಜನರ ಆರೋಗ್ಯದ ಮಳೆ ತೀವ್ರ ಪರಿಣಾಮ ಬೀರುತ್ತಿದೆ. ದೇಶದ ಅತೀದೊಡ್ಡ ಕೇಂದ್ರಿಕೃತ ಉಕ್ಕು ತಯಾರಿಕೆ ಕೈಗಾರಿಕಾ ಪ್ರದೇಶ ಜಿಂದಾಲ್ ಸ್ಪೀಲ್ ಕೈಗಾರಿಕೆ ಇಂದು ಸಾವಿನ ಕೂಪವಾಗಿದೆ. ನಿರಂತರ ಅಪಘಾತಗಳಿಂದ ಕಾರ್ಮಿಕರ ಜೀವಕ್ಕೆ, ಬೆಲೆ ಇಲ್ಲದಂತಾಗಿದೆ ಗುತ್ತಿಗೆ, ವಲಸೆ ಕಾರ್ಮಿಕರಿಗೆ ಅಪಘಾತಗಳು ಬೆಳಕಿಗೆ ಬರುವುದಿಲ್ಲ. ಕಾರ್ಮಿಕರಿಗೆ ಸುರಕ್ಷತೆ ಇಲ್ಲದಾಗಿದೆ. ಜೀವ ಭಯದ ಅತಂಕದಲ್ಲಿರುವ ಕಾರ್ಮಿಕರಿಗೆ ಕಳೆದ ಗುರುವಾರ ಮೇ 09 2024ರಂದು ನಡೆದ ಭೀಕರ ಅಪಘಾತ ಜನರಲ್ಲಿ ಭಯ-ಭೀತಿಗೊಳಿಸಿದೆ ತೋರಣಗಲ್ಲು ನೀರು ಹರಿಸುವ ಪೈಪ್ ಲೈನ್ ದುರಸ್ತಿ ಕಾರ್ಯನಿರತ ಹೊಸಪೇಟೆ ತಾಲೂಕಿನ ಭುವನಹಳ್ಳಿ ಗ್ರಾಮದ ಗಂಟೆ ಜಡೆಪ್ಪ (31). ಚೆನ್ನೆನ ಶಿವ ಮಹದೇವ್ (22) ಬೆಂಗಳೂರಿನ ಸುಶಾಂತ್ ಕೃಷ್ಣ ನೈನಾರು (23), ಎಂಬ ಯುವ ನೌಕರರು ಮೃತರಾಗಿದ್ದಾರೆ.

ಕಾರ್ಮಿಕ ಸುರಕ್ಷತೆ ಕಾಯ್ದೆಗಳು ಹಾಗೂ ಕಾರ್ಖಾನೆಗಳ ಕಾಯ್ದೆ 1948 ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ಕೈಗಾರಿಕೆಗಳಲ್ಲಿನ ಕಾರ್ಮಿಕರ ಅಪಘಾತ ಸಾವುಗಳಿಗೆ ಕೈಗಾರಿಕಾ ಮಾಲೀಕರು ಮತ್ತು ಆಡಳಿತ ವರ್ಗದ ನಿರ್ಲಕ್ಷತೆ ಕಾರಣವಾಗಿದೆ ಜಿಲ್ಲಾ ಆಡಳಿತವು ಕಾರ್ಮಿಕರ ಸುರಕ್ಷತೆಯನ್ನು ಕಾಪಾಡಬೇಗುತ್ತದೆ. ಕಾರ್ಮಿಕ ಇಲಾಖೆ, ಕೈಗಾರಿಕೆ ಬಾಯರಗಳು ಕಾರ್ಮಿಕರ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಗಳು ಮಾಲೀಕರ ಒತ್ತಡಕ್ಕೆ ಒಳಗಾಗಿ ಸಂಪೂರ್ಣವಾಘಿ ಕಾರ್ಮಿಕರ ರಕ್ಷಣೆಯ ವಿಷಯದಲ್ಲಿ ನಿಷ್ಕ್ರಿಯವಾಗಿದೆ. ಸರ್ಕಾರವು ಕೈಗಾರಿಕೆಗಳ ಅಪಘಾತಗಳನ್ನು ತಡೆಯುವಲ್ಲಿ ಗಂಭೀರ, ಲೋಪ ಎಸಗಿದೆ. ಇದುವರೆಗೆ ನಡೆದ ಅಪಘಾತಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಸಂಬಂಧಿಸಿದಂತೆ ಇಳಾಖೆಯು ಮುಖ್ಯಸ್ಥರು ಹಾಗೂ ಕೈಗಾರಿಕೆ ಆಡಳಿತ ಮಂಡಳಿಯ ಅಧ್ಯಕ್ಷತೆ ಪಿ.ಕೆ ಮುರಘನ್, HR ಉಪಾಧ್ಯಕ್ಷ ಸಂಜಯ್ ಹೊಂಡರವರನ್ನು FIR ನಲ್ಲಿ ಸೇರಿಸಿ. ಕಾನೂನು ಕ್ರಮಗಳನ್ನು ಕೈಗೊಂಡು ತಪ್ಪಿಸ್ಸರನ್ನು ಶಿಕ್ಷಿಸಬೇಕು. ಅಪಘಾತದಿಂದ ಸಂತ್ರಸ್ವವಾಗಿರುವ ಕುಟುಂಬಗಳಿಗೆ ಉದ್ಯೋಗ, ಪರಿಹಾರ ನೀಡಲು ಒತ್ತಾಯಿಸುತ್ತೇವೆ. ಕಾರ್ಮಿಕರು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವAvÉ  ಬಳ್ಳಾರಿಯ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ಜಿಲ್ಲಾ ಸಮಿತಿ ಮನವಿ ಮಾಡಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top