ಬೆಂಗಳೂರು: ತೇರಾಪಂಥ 10ನೇ ಜೈನ ಆಚಾರ್ಯ ಶ್ರೀ ಮಹಾ ಪ್ರಜ್ಞಾಜೀ ಅವರ 13 ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಶ್ರೀ ತುಳಸಿಮ ಸೇವಾ ಕೇಂದ್ರ ಚಾರಿಟೇಬಲ್ ಚಾರಿಟೇಬಲ್ ಟ್ರಸ್ಟ್ ನಿಂದ ಬೆಂಗಳೂರಿನ ಮೈಸೂರು ರಸ್ತೆಯ ಕುಂಬಳಗೋಡು ಆಚಾರ್ಯ ಶ್ರೀ ತುಳಸಿ ಮಹಾಪ್ರಜ್ಞಾ ಸೇವಾ ಕೇಂದ್ರದಲ್ಲಿ ನಡೆಯಿತು. ಆಚಾರ್ಯ ಶ್ರೀ ಅರ್ಹತ್ ಕುಮಾರ್ ಜೀ ಆದಿ ಠಾಣಾ 3 ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಚಾರ್ಯ ಶ್ರೀ ತುಳಸಿ ಮಹಾಪ್ರಜ್ಞಾ ಸೇವಾ ಕೇಂದ್ರ ಅಧ್ಯಕ್ಷರಾದ ಅಮಿತ್ ನಾಟಿ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ತೇರಾ ಪಂತ್ ಸಭಾ ಉಪಾಧ್ಯಕ್ಷ, ಉದ್ಯಮಿ ಕನ್ಯಲಾಲ್ ಗಿರಿಯಾ, ತೆರಪಂತ್ ಸಭಾ ಬೆಂಗಳೂರು ಉಪಾಧ್ಯಕ್ಷರಾದ ಬಹದ್ದೂರ್ ಸೇಠಿಯಾ, ಬೆಂಗಳೂರು ಜೈನ್ ಸಂಘದ ಅಧ್ಯಕ್ಷ ಸುರೇಶಧಕ್ , ಸೇವಾಕೇಂದ್ರ ಉಪಾಧ್ಯಕ್ಷ ಮದನ್ ಲಾಲ್ ಬರೋಚ ಭಾಗವಹಿಸಿದ್ದರು.