ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಸ್ರ‍್ಧಿಸುವುದು ಒಳ್ಳೆಯದು: ಪ್ರಿಯಾಂಕಾ ಗಾಂಧಿ ಮಾಜಿ ಆಪ್ತ ಆಚರ‍್ಯ ಪ್ರಮೋದ್ ಕೃಷ್ಣಂ ವ್ಯಂಗ್ಯ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ರ‍್ಧಿಸುತ್ತಿರುವ ಬಗ್ಗೆ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಾಜಿ ಆಪ್ತ ಆಚರ‍್ಯ ಪ್ರಮೋದ್ ಕೃಷ್ಣಂ ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ರಾಯ್ಬರೇಲಿಯಿಂದ ಚುನಾವಣೆಗೆ ಸ್ರ‍್ಧಿಸುವ ಬದಲು ಪಾಕಿಸ್ತಾನದ ರಾಹುಲ್ ರಾವಲ್ಪಿಂಡಿಯಿಂದ ಸ್ರ‍್ಧಿಸಬಹುದು. ಹೇಗೂ ಅಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ರಾಹುಲ್ ಗಾಂಧಿಯವರದ್ದು ಪಲಾಯನವಾದ ಎಂದೂ ಅವರು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಕುರಿತು ಕುಹಕವಾಡಿ ಆಚರ‍್ಯ ಪ್ರಮೋದ್ ಕೃಷ್ಣಂ ನೀಡಿರುವ ಹೇಳಿಕೆಯನ್ನು ಎ ಎನ್ಐ ಸುದ್ದಿ ಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.

ರಾಹುಲ್ ಗಾಂಧಿ ಅಮೇಠಿ ತೊರೆದಿರುವ ರೀತಿ ಕಾಂಗ್ರೆಸ್ ಕರ‍್ಯರ‍್ತರ ನೈತಿಕ ಸ್ಥರ‍್ಯ ಕುಸಿಯುವಂತೆ ಮಾಡಿದೆ. ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ರ‍್ಧಿಸುವುದಿಲ್ಲ, ಇದು ಈಗ ಅವರ ಬೆಂಬಲಿಗರ ಹೃದಯದಲ್ಲಿ ಜ್ವಾಲಾಮುಖಿಯ ಆಕಾರವನ್ನು ಪಡೆಯುತ್ತಿದೆ. ಅದು ಜೂನ್ ೪ ರ ನಂತರ ಸ್ಫೋಟಗೊಳ್ಳಲಿದೆ. ಕಾಂಗ್ರೆಸ್ ಮತ್ತೆ ಎರಡು ಬಣಗಳಾಗಿ ವಿಭಜನೆಯಾಗಲಿದೆ. ಒಂದು ರಾಹುಲ್ ಗಾಂಧಿ ಬಣ ಮತ್ತು ಇನ್ನೊಂದು ಪ್ರಿಯಾಂಕಾ ಗಾಂಧಿ ಬಣ ಆಗಲಿದೆ. ಪಾಕಿಸ್ತಾನದಲ್ಲಿ ಅವರ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಕಾರಣ ರಾಹುಲ್ ಗಾಂಧಿ ರಾಯ್‌ಬರೇಲಿ ಬದಲಿಗೆ ರಾವಲ್ಪಿಂಡಿಯಿಂದ ಸ್ರ‍್ಧಿಸುವುದು ಒಳ್ಳೆಯದು ಎಂಬುದಾಗಿ ಭಾವಿಸುತ್ತೇನೆ ಎಂದು ಆಚರ‍್ಯ ಪ್ರಮೋದ ಕೃಷ್ಣಂ ಹೇಳಿದ್ದಾರೆ.

 ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುವ ಮೂಲಕ ಆಚರ‍್ಯ ಪ್ರಮೋದ್ ಕೃಷ್ಣಂ ಸುದ್ದಿಯಾಗಿದ್ದರು. ಪಕ್ಷ ವಿರೋಧಿ ಹೇಳಿಕೆಗಳು ಹಾಗೂ ಚಟುವಟಿಕೆಗಳ ಕಾರಣ ನಂತರ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ನನ್ನನ್ನು ಉಚ್ಚಾಟನೆ ಮಾಡುವ ಮೂಲಕ ಕಾಂಗ್ರೆಸ್ ಒಳ್ಳೆ ಕೆಲಸ ಮಾಡಿದೆ. ಸಾಯುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಿಲ್ಲುತ್ತೇನೆ ಎಂದು ನಂತರ ಅವರು ಹೇಳಿಕೆ ನೀಡಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top