ಚುನಾವಣಾ ಅಭ್ಯರ್ಥಿಗಳು ತಮ್ಮ ಖರ್ಚು ವೆಚ್ಚವನ್ನು ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಸಹಾಯಕ ವೆಚ್ಚ ವೀಕ್ಷಕರಿಂದ ಸಹಿ ಪಡೆದುಕೊಳ್ಳುವುದನ್ನು ಕಡ್ಡಾಯ

ಬೆಂಗಳೂರು:  ಚುನಾವಣಾ ಅಭ್ಯರ್ಥಿಗಳು ತಮ್ಮ ಖರ್ಚು ವೆಚ್ಚವನ್ನು ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಸಹಾಯಕ ವೆಚ್ಚ ವೀಕ್ಷಕರಿಂದ ಸಹಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

 

ಪ್ರಜಾಪ್ರತಿ ನಿಧಿ ಕಾಯ್ದೆ-1951ರ ಕಲಂ-77ರ ಪ್ರಕಾರ 2024ರ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳು ನಿಗದಿ ಪಡಿಸಿರುವ ಪ್ರತಿನಿಧಿಗಳು, ಚುನಾವಣಾ ವೆಚ್ಚವನ್ನು ಪ್ರತ್ಯೇಕವಾಗಿ ರಿಜಿಸ್ಟರ್‍ಗಳಲ್ಲಿ ( ಎ ಬಿ ಸಿ) ಗಳಲ್ಲಿ ನಿರ್ವಹಿಸಿ, ಚುನಾವಣಾ ವೆಚ್ಚ ವೀಕ್ಷಕರಿಗೆ ಮತ್ತು ಸಹಾಯಕ ವೆಚ್ಚ ವೀಕ್ಷಕರಿಂದ ಕನಿಷ್ಠ 3 ಬಾರಿ ಪರಿಶೀಲನೆಗೆ ಒಳಪಡಿಸಿ ಸಹಿ ಪಡೆಯುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.

ಆದ್ದರಿಂದ, ತಮಗೆ ಈ ಮೂಲಕ ತಿಳಿಯ ಪಡಿಸುವುದೇನೆಂದರೆ, ಚುನಾವಣಾ ವೆಚ್ಚದ ರಿಜಿಸ್ಟರ್‍ಗಳನ್ನು ಪರಿಶೀಲಿಸಲು ಈ ಕೆಳಕಂಡ ದಿನಾಂಕ, ಸಮಯ ಮತ್ತು ವಿಳಾಸದಲ್ಲಿ ತಪ್ಪದೇ ಹಾಜರಾಗತಕ್ಕದ್ದು ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ವೋಚರ್ ಅಥವಾ ಬಿಲ್ ಗಳೊಂದಿಗೆ ಚುನಾವಣಾ ಮೀಸಲು ಖಾತೆಯ ಬ್ಯಾಂಕ್ ಪಾಸ್ ಪುಸ್ತಕವನ್ನು ನಿಗದಿಪಡಿಸಿದ ಹಿಂದಿನ ದಿನಾಂಕಕ್ಕೆ ಇಂದೀಕರಿಸಿಕೊಂಡು ಪರಿಶೀಲನಾ ಸಮಯದಲ್ಲಿ ಹಾಜರು ಪಡಿಸಬೇಕಿದೆ.

 

ನಾಳೆ, ಏ.18 ಹಾಗೂ ಏ.24ರಂದು ಮೂರು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿರುವ ಅನೆಕ್ಸ್ 3 ರಲ್ಲಿರುವ ಕೊಠಡಿ ಸಂಖ್ಯೆ 201ರಲ್ಲಿ ಅಭ್ಯರ್ಥಿಗಳ ವೆಚ್ಚ ತಪಾಸಣೆ ನಡೆಯಲಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣಾ„ಕಾರಿ ಡಾ.ಕೆ.ಹರೀಶ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
LinkedIn
Telegram
WhatsApp
Email

Leave a Comment

Your email address will not be published. Required fields are marked *

Translate »
Scroll to Top