ಇಸ್ರೇಲ್ – ಇರಾನ್ ಯುದ್ಧ : ಟೆಹ್ರಾನ್ ನಲ್ಲಿ ಸಿಲುಕಿದ 9 ಕನ್ನಡಿಗರು ?

ಇಸ್ರೇಲ್ - ಇರಾನ್ ಯುದ್ಧ : ಟೆಹ್ರಾನ್ ನಲ್ಲಿ ಸಿಲುಕಿದ 9 ಕನ್ನಡಿಗರು ?

Kannada Nadu
ಇಸ್ರೇಲ್ – ಇರಾನ್ ಯುದ್ಧ : ಟೆಹ್ರಾನ್ ನಲ್ಲಿ ಸಿಲುಕಿದ 9 ಕನ್ನಡಿಗರು ?

 ಇಸ್ರೇಲ್ – ಇರಾನ್ ಯುದ್ಧ : ಟೆಹ್ರಾನ್ ನಲ್ಲಿ ಸಿಲುಕಿದ 9 ಕನ್ನಡಿಗರು ?

ಇಸ್ರೇಲ್ ಮತ್ತು ಇರಾನ್ ನಡುವೆ ರಣ ಭೀಕರ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದೇಶಗಳು ಪರಸ್ವರ ಮಿಸೈಲ್ ದಾಳಿಯನ್ನು ನಡೆಸುತ್ತಿವೆ. ಆದರೆ ಇರಾನ್ ಮತ್ತು ಇಸ್ರೇಲ್ ನಲ್ಲೂ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಇರಾನ್ ನಲ್ಲಿ 9 ಮಂದಿ ಕನ್ನಡಿಗ ವಿದ್ಯಾರ್ಥಿಗಳು ಸಿಲುಕಿಕೊಂಡು ಆತಂಕದಲ್ಲಿದ್ದಾರೆ. ಅವರ ರಕ್ಷಣೆ ಮಾಡಿ ದೇಶಕ್ಕೆ ಕರೆತರುವಂತೆ ಪೋಷಕರು ಮನವಿ ಮಾಡಿದ್ದಾರೆ. ಇದಕ್ಕೆ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ರವರು ಸ್ಪಂದಿಸಿದ್ದಾರೆ. ಕೂಡಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಹೈಲೆಟ್ಸ್ :
ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಯುದ್ಧದ ಪರಿಸ್ಥಿತಿ
ಎರಡು ದೇಶಗಳ ನಡುವೆ ಮಿಸೈಲ್ ದಾಳಿಗಳು ನಡೆಯುತ್ತಿವೆ
ಇರಾನ್ ಹಾಗೂ ಇಸ್ರೇಲ್ ನಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ

ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ ನಡುವೆ ರಣಭೀಕರ ಯುದ್ಧ ನಡೆಯುತ್ತಿದೆ. ಎರಡು ದೇಶಗಳ ನಡುವಿನ ಮಿಸೈಲ್ ದಾಳಿಗೆ ಜನರು ಬಲಿಯಾಗುತ್ತಿದ್ದಾರೆ. ಈ ನಡುವೆ ಕರ್ನಾಟಕದ ವಿದ್ಯಾರ್ಥಿಗಳು ಇರಾನ್ ನಲ್ಲಿ ಸಿಕ್ಕಾಕೊಂಡಿದ್ದು, ಪೋಷಕರು ಆತಂಕ ಗೊಂಡಿದ್ದಾರೆ. ಅವರನ್ನು ಕೂಡಲೇ ಅಲ್ಲಿಂದ ಸ್ಥಳಾಂತರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಟೆಹ್ರಾನ್ ನಲ್ಲಿ 9 ವಿದ್ಯಾರ್ಥಿಗಳು
ಇಸ್ರೇಲ್ ಮತ್ತು ಇರಾನ್ ನಡುವೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯು ಆ ದೇಶಗಳಲ್ಲಿ ನೆಲೆಸಿರುವ ವಿದೇಶಿಗರಿಗೆ ಆತಂಕ ಉಂಟು ಮಾಡಿದೆ. ಕರ್ನಾಟಕದ ಸುಮಾರು 9 ವಿದ್ಯಾರ್ಥಿಗಳು ಇರಾನ್ ದೇಶದ ರಾಜದಾನಿಯಾದ ಟೆಹರಾನ್ ನಲ್ಲಿರುವ ಶಾಹಿದ್ ಭಸ್ತಿ ಮೆಡಿಕಲ್ ಯುನಿವರ್ಸಿಟಿ ಯಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದರು

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿದ್ಯಾರ್ಥಿಗಳ ಪೋಷಕರು ಆತಂಕಗೊಂಡಿರುತ್ತಾರೆ. ಈ ವಿದ್ಯಾರ್ಥಿಗಳ ಪೈಕಿ ಒರ್ವ ವಿದ್ಯಾರ್ಥಿಯಾದ ನದೀಮ್ ಹುಸೇನ್ ರವರು ಹಾಗೂ ಬೆಂಗಳೂರಿನಲ್ಲಿರುವ ಅವರ ಪೋಷಕರು ಅನಿವಾಸಿ ಭಾರತೀಯ ಸಮಿತಿ, ಬೆಂಗಳೂರು ಕಛೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದು ಆತಂಕ ತೋಡಿಕೊಂಡಿದ್ದಾರೆ. ಕೂಡಲೇ ದೇಶಕ್ಕೆ ಹಿಂದಿರುಗಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಸ್ಪಂದಿಸಿದ ಅನಿವಾಸಿ ಭಾರತೀಯ ಇಲಾಖೆ
ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕದ ಹಿನ್ನೆಲೆಯಲ್ಲಿ ಅನಿವಾಸಿ ಭಾರತೀಯ ಸಮಿತಿ, ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ರವರು ಕೂಡಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಇರಾನ್ ನಲ್ಲಿ ನೆಲೆಸಿರುವ ಈ ಮೇಲ್ಕಂಡ ವಿದ್ಯಾರ್ಥಿಗಳನ್ನು ಕೂಡಲೇ ಕರೆತರಲು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿರುತ್ತಾರೆ. ಇದಲ್ಲದೇ ದೂರವಾಣಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಖುದ್ದು ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

ನೆಟ್ವರ್ಕ್ ಬ್ಲಾಕ್!
ಇರಾನ್‌ ನಲ್ಲಿ ರಾತ್ರಿ ಹೊತ್ತು ಮೊಬೈಲ್ ನೆಟ್ವರ್ಕ್ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಇರಾನ್ ನಲ್ಲಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗ ನಿಮಿತ್ತ ಹೋದವರು ಕುಟುಂಬದ ಸದಸ್ಯರ ಜೊತೆಗೆ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪೋಷಕರು ಮತ್ತು ಕುಟುಂಬದ ಸದಸ್ಯರು ಆತಂಕಗೊಂಡಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇಸ್ರೇಲ್ ನಲ್ಲೂ ಕನ್ನಡಿಗರು ಆತಂಕದಲ್ಲಿ
ಇನ್ನು ಇಸ್ರೇಲ್ ನಲ್ಲೂ ಕನ್ನಡಿಗರು ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ಹಲವಾರು ಕನ್ನಡಿಗರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು “ ಪ್ರಸ್ತುತ ಸಂಘರ್ಷದ ವೇಳೆ ಇಸ್ರೇಲ್‌ನಲ್ಲಿ ಸಿಲುಕಿರುವ ಹಲವಾರು ಕನ್ನಡಿಗರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅವರ ಕ್ಷೇಮ, ಸುರಕ್ಷತೆ ಬಗ್ಗೆ ವಿಚಾರಿಸಿದೆ. ಅವರೆಲ್ಲರೂ ತಾಯ್ನಾಡಿಗೆ ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಮರಳುವುದಕ್ಕೆ ತುರ್ತು ಕ್ರಮ ವಹಿಸಿ, ವಿದೇಶಾಂಗ ಇಲಾಖೆಯೊಂದಿಗೆ ಮಾತುಕತೆ ನಡೆಸುವ ಭರವಸೆ ನೀಡಿದ್ದೇನೆ” ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರಕಾರವು ಸಂಘರ್ಷಪೀಡಿತ ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಬಗ್ಗೆ ಎಲ್ಲಾ ರೀತಿಯ ತುರ್ತು ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದೇನೆ. ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ನಾಗರಿಕರಿಗೆ ಸಕಾಲಿಕ ನೆರವು ನೀಡಿದ್ದಕ್ಕಾಗಿ ಇಸ್ರೇಲ್‌ನಲ್ಲಿರುವ ಭಾರತೀಯ ಅಧಿಕಾರಿಗಳ ಪ್ರಯತ್ನಗಳು ಶ್ಲಾಘನೀಯ ಎಂದಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";