ಆಮಂತ್ರಣ ನೀಡಿ ಮಾಧ್ಯಮದವರಿಗೆ ಹೊರಗಿಟ್ಟು ಘಟಿಕೋತ್ಸವ ಆಚರಣೆ

ರಾಯಚೂರು : ನಿಗದಿತ ಸಮಯಕ್ಕೆ ಬಾರದೆ ಇರುವ ಕಾರಣ ನೆಪ ಒಡ್ಡಿ ಮಾಧ್ಯಮದವರು ಮತ್ತು ಪಾಲಕರನ್ನು ಹೊರಗಿಟ್ಟು ಘಟಿಕೋತ್ಸವ ಆಚರಣೆ ಹಾಗೂ ಪದಕ ವಿಜೇತ ವಿದ್ಯಾರ್ಥಿಗಳ ಪಾಲಕರನ್ನು ಪ್ರವೇಶ ನೀಡದ ನವೋದಯ ಮೆಡಿಕಲ್ ಕಾಲೇಜ್. ಶುಕ್ರವಾರ ಬೆಳಗ್ಗೆ 10ಕ್ಕೆ ನಿಗದಿಯಾದ ಘಟಿಕೋತ್ಸವಕ್ಕೆ ಪತ್ರಕರ್ತರಿಗೆ ಆಹ್ವಾನ ನೀಡಲಾಗಿತ್ತು ಆದರೆ ಕೆಲ ನಿಮಿಷದಲ್ಲಿ ಪ್ರವೇಶದ್ವಾರ ಬಂದ್ ಮಾಡುವ ಮೂಲಕ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲಾಯಿತು.

ನಗರದ ಮಂತ್ರಾಲಯ ರಸ್ತೆಯಲ್ಲಿರುವ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಒಂದಿಲ್ಲೊಂದು ಆವಾಂತರಕ್ಕೆ ಕಾರಣವಾಗುತ್ತಿದೆ, ಆನೆ ನಡೆದಿದ್ದೇ ದಾರಿ ಎನ್ನುವಂತೆ ವರ್ತಿಸುತ್ತಿದೆ. ಈ ಹಿಂದೆ ಪರೀಕ್ಷೆ ಶುಲ್ಕ ಕಟ್ಟಲಿಲ್ಲವೆಂದು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡದೆ ಪರೀಕ್ಷೆಗೆ ಅವಕಾಶ ನಿರಾಕರಿಸಿತ್ತು ಈಪ್ರಕರಣ ಹೈಕೋರ್ಟ್ ಮೆಟ್ಟಿಲಿರಿತ್ತು ಕಳೆದ ಎರಡು ವರ್ಷದ ಕೆಳಗಡೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಂಸ್ಥೆಗೆ ಕುಂದು ತಂದಿತ್ತು ಹೀಗೆ ಹಲವಾರು ರೀತಿಯಲ್ಲಿ ತಪ್ಪು ಮಾಡುತ್ತಿರುವ ಕಾಲೇಜಿನ ಸಂಸ್ಥೆಯ ಆಡಳಿತ ಮಂಡಳಿಗೆ ಅಂಕುಶ ಹಾಕುವವರು ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರದ್ದು

ರಾಜಪಾಲರು, ಜಿಲ್ಲಾಡಳಿತ ನವೋದಯ ಸಂಸ್ಥೆಯ ನಡೆಗೆ ಕಡಿವಾಣ ಹಾಕಬೇಕು ಕಳೆದ 30 ವರ್ಷದಿಂದ ನಗರದಲ್ಲಿ ಅರಣ್ಯಭೂಮಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಜಮೀನನ್ನು ಖರೀದಿಸಿ ನಿಯಮ ಉಲ್ಲಂಘಿಸಿ ಕಾನೂನುಬಾಹಿರ ಚಟುವಟಿಕೆಗೆ ಸಮ್ಮತಿ ನೀಡುತ್ತಿದೆ ಎಂದು ಸಂಘ ಸಂಸ್ಥೆಗಳು ಆರೋಪಿಸಿ ಜಿಲ್ಲಾಡಳಿತ ಕ್ಕೆ ಮನವಿ ಸಲ್ಲಿಸಿವೆ ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವು ಸಾರ್ವಜನಿಕರ ಅರೋಪ.

Leave a Comment

Your email address will not be published. Required fields are marked *

Translate »
Scroll to Top