ವನವಾಸಿಗಳ ಜತೆ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಣೆ

ಬೆಂಗಳೂರು/ ಚಾಮರಾಜನಗರ, ಮಾ, 8; ಪರಿಸರ ಅರ್ಥಶಾಸ್ತ್ರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೇಂದ್ರ ಹಾಗೂ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಸೆಕ್) ಸಹಯೋಗದಲ್ಲಿ ಸ್ವಾತಂತ್ರ್ಯೋವದ ಸುವರ್ಣ ಮಹವೋತ್ಸವದ ಅಂಗವಾಗಿ ಮಲೈಮಹದೇಶ್ವರ ಬೆಟ್ಟದ ಕಾಡಿನ ಖಾಧ್ಯಗಳು ಕುರಿತು ವಿನೂತನ ರಾಜ್ಯಮಟ್ಟದ ಕಾರ್ಯಾಗಾರವನ್ನು ಹನೂರಿನ ಕೆಂಚಳ್ಳಿಯಲ್ಲಿಂದು ಆಯೋಜಿಸಲಾಗಿತ್ತು. ಕಾಡಿನ ಮಹಿಳೆಯರು ಮತ್ತು ವನವಾಸಿಗಳ ಆದಾಯ ಹೆಚ್ಚಳ ಮತ್ತು ಜೀವನೋಪಾಯ ಸುಧಾರಿಸುವ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಈ ಕಾರ್ಯಾಗಾರ ಏರ್ಪಡಿಸಲಾಗಿತ್ತು. ವನವಾಸಿ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಶ್ರೇಯೋಭಿವೃದ್ಧಿ ಉದ್ದೇಶದ ಈ ಕಾರ್ಯಗಾರ ಮಹಿಳಾ ದಿನದಂದು ಅರ್ಥಪೂರ್ಣವಾಗಿ ನಡೆಯಿತು.

ಕಾಡಿನ ಖಾದ್ಯಗಳ ವೈಶಿಷ್ಟ್ಯಗಳು, ಅದರ ಆರೋಗ್ಯದ ಲಾಭಗಳ ಬಗ್ಗೆ ತಜ್ಞರು ಬೆಳಕು ಚೆಲ್ಲಿದರು. ಕಾಡಿನ ಉತ್ಪನ್ನಗಳಿಂದ ವನವಾಸಿಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಉಂಟಾಗಲಿರುವ ಲಾಭಗಳ ಕುರಿತು ಮಾಹಿತಿ ನೀಡಿದರು. ತುಮಕೂರು ವಿಶ್ವವಿದ್ಯಾಲಯ, ತಂತ್ರಜ್ಞಾನ ಮಾಹಿತಿ – ಮುನ್ಸೂಚನೆ ಮತ್ತು ಮೌಲ್ಯಮಾಪನ ಮಂಡಳಿ, ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕೆಂಚಳ್ಳಿ ಸುತ್ತಮುತ್ತ 200 ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು, ಕಾಡಿನ ವಾಸಿಗಳು ಪಾಲ್ಗೊಂಡಿದ್ದರು. ಇವರಿಗೆ ಕಾಡಿನ ಸುಸ್ಥಿರ ನಿರ್ವಹಣೆ ಹೆಚ್ಚಿಸಲು ಕಾಡು ಖಾದ್ಯ ಸಸ್ಯಗಳ ಸಂಪನ್ಮೂಲಗಳ ಮೌಲ್ಯ ವರ್ಧನೆ ವ್ಯಾಪ್ತಿ ಹೆಚ್ಚಿಸುವ, ಜನರ ಜೀವನೋಪಾಯ ಸುಧಾರಣೆ, ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನ ಸಂಪತ್ತಿನ ವಿನಿಯೋಗ ಮಾಡಿಕೊಳ್ಳುವುದು ಈ ಕಾರ್ಯಾಗಾರದ ಮೂಲ ಉದ್ದೇಶವಾಗಿತ್ತು.

ಇದೇ ಸಂದರ್ಭದಲ್ಲಿ ಕಾಡು ಸಂಪನ್ಮೂಲಗಳಿಂದ ಆದಾಯಗಳಿಸಲು ಸ್ವಸಹಾಯ ಗುಂಪುಗಳಿಗೆ ಪಲ್ಪರ್, ಹಣ್ಣಿನ ಗಿರಣಿ, ಜ್ಯೂಸ್ ತೆಗೆಯುವ ಯಂತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಐಸೆಕ್ ಪ್ರಾಧ್ಯಾಪಕ ಪ್ರೊಫೆಸರ್ ಸುನಿಲ್ ನೌಟಿಯಾಲ್, ಐಸೆಕ್ ನಿರ್ದೇಶಕ ಪ್ರೊಫೆಸರ್ ಡಿ. ರಾಜಶೇಖರ್ ಕಾರ್ಯಾಗಾರದ ಉದ್ದೇಶದ ಬಗ್ಗೆ ಮಾತನಾಡಿದರು. ಐಸೆಕ್ ಸಂಶೋಧಕ ಡಾ. ಉಮೇಶ್ ಬಾಬು ಕಾಡಿನ ಖ್ಯಾದ್ಯಗಳ ವೈಶಿಷ್ಟ್ಯತೆ ಕುರಿತು ಸಮಗ್ರ ಮಾಹಿತಿ ನೀಡಿದರು. ಮೈಸೂರು ವಿಶ್ವವಿದಾಯನಿಲಯದ ಪ್ರೊ.ಎಸ್. ಶ್ರೀಕಂಠ ಸ್ವಾಮಿ, ತುಮಕೂರು ವಿಶ್ವವಿದಾಯನಿಲಯದ ಡಾ.ಆರ್.ಜಿ.ಶರತ್ ಚಂದ್ರ, ಅರಣ್ಯ ಇಲಾಖೆಯ ಅಧಿಕಾರಿ ಯೆಡುಕೊಂಡಲು, ಚಾಮರಜನಗರದ ಸಿ.ಎಫ್‌.ಟಿ.ಆರ್.ಐ ನ ಡಾ. ಇಬೋಯೈಮಾ ಸಿಂಗ್, ಅತ್ತರ್ ಸಿಂಗ್ ಚೌಹಾಣ್, ಡಾ. ಶ್ರೀಧರ್ ಆರ್.ವಿ. ಡಾ.ಪ್ರದೀಪ್ ಸಿಂಗ್ ನೇಗಿ, ಎಂ.ಆರ್. ವಿಜಯ ಲಕ್ಷ್ಮಿ, ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top