ಅಂತರರಾಷ್ಟ್ರೀಯ ವಸ್ತುಪ್ರದರ್ಶನ  ಅಂತರಾಷ್ಟ್ರೀಯ ಮಟ್ಟದ ಪಾಲಿಮರ್ಸ್ ಬೃಹತ್ ಪ್ರದರ್ಶನ

ಬೆಂಗಳೂರು:  ಕರ್ನಾಟಕ ರಾಜ್ಯ ಪಾಲಿಮರ್ಸ್ ಅಸೋಸಿಯೇಷನ್ ನಿಂದ ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಈ ತಿಂಗಳ 29 ರವರೆಗೆ ನಡೆಯುತ್ತಿರುವ ಮೂರನೇ ಅಂತರಾಷ್ಟ್ರೀಯ ಪಾಲಿಮರ್ಸ್ ಪ್ರದರ್ಶನ – ಕೆಪ್ಲೆಕ್ಸ್‌ ನಲ್ಲಿ ಪ್ಯಾಸ್ಟಿಕ್ ತ್ಯಾಜ್ಯದಿಂದ ಉತ್ಪಾದಿಸಿರುವ ನವನವೀನ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ. 

ಪ್ಯಾಸ್ಟಿಕ್ ತ್ಯಾಜ್ಯದಿಂದ ಟೈಲ್ಸ್, ಕ್ಲಾಡಿಂಗ್, ಮನೆ ನಿರ್ಮಾಣ ವಸ್ತುಗಳು, ಖುರ್ಚಿ, ಗೃಹ ಬಳಕೆಯ ಬಕೆಟ್ ಹೀಗೆ ನಾನಾ ರೀತಿಯ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಮರು ಸಂಸ್ಕರಣಾ ಉತ್ಪನ್ನಗಳು, ತಂತ್ರಜ್ಞಾನ, ಯಂತ್ರೋಪಕರಣಗಳ ಹೊಸ ಲೋಕವೇ ಅನಾವರಣಗೊಂಡಿದೆ. ಪ್ಯಾಸ್ಟಿಕ್ ತ್ಯಾಜ್ಯದಿಂದ ಮರು ಬಳಕೆ ಉತ್ಪನ್ನಗಳನ್ನು ಉತ್ಪಾದಿಸಲು ನವೋದ್ಯಮಗಳ ಜೊತೆಗೆ ದೈತ್ಯ ಕಂಪೆನಿಗಳು ಸಹ ಲಗ್ಗೆ ಇಟ್ಟಿವೆ.

 

ಇದೇ ಮೊದಲ ಬಾರಿಗೆ ಕರ್ನಾಟಕ – ಕೇರಳ ಪಾಲಿಮರ್ ಅಸೋಸಿಯೇಷನ್ ನಿಂದ  ಕೆಪ್ಲಕ್ಸ್ ಮೇಳ ನಡೆಯುತ್ತಿದೆ. ಮೇಳದಲ್ಲಿ ಗೇಲ್, ಎಚ್.ಎಂ.ಇ.ಎಲ್, ಐತಾನ್, ಶಿಬುರ ಸೇರಿದಂತೆ ದೇಶದ ಅತಿ ದೊಡ್ಡ ಕಂಪೆನಿಗಳಿಂದ ಸಣ್ಣ ಸಣ್ಣ ನವೋದ್ಯಮಗಳ ವರೆಗೆ ಹತ್ತಾರು ಕಂಪೆನಿಗಳು ಪಾಲ್ಗೊಂಡಿವೆ. 

ಇದೇ ಮೊದಲ ಬಾರಿಗೆ ಕರ್ನಾಟಕ – ಕೇರಳ ಪಾಲಿಮರ್ ಅಸೋಸಿಯೇಷನ್ ನಿಂದ  ಕೆಪ್ಲಕ್ಸ್ ಮೇಳ ನಡೆಯುತ್ತಿದೆ. ಮೇಳದಲ್ಲಿ ಗೇಲ್, ಎಚ್.ಎಂ.ಇ.ಎಲ್, ಐತಾನ್, ಶಿಬುರ ಸೇರಿದಂತೆ ದೇಶದ ಅತಿ ದೊಡ್ಡ ಕಂಪೆನಿಗಳಿಂದ ಸಣ್ಣ ಸಣ್ಣ ನವೋದ್ಯಮಗಳ ವರೆಗೆ ಹತ್ತಾರು ಕಂಪೆನಿಗಳು ಪಾಲ್ಗೊಂಡಿವೆ.

 

ಕರ್ನಾಟಕ ರಾಜ್ಯ ಪಾಲಿಮರ್ಸ್ ಅಸೋಸಿಯೋಷನ್ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಸುರೇಶ್ ಸಾಗರ್ ಮಾತನಾಡಿ, ಚುನಾವಣೆ ದಿನವಾದ ಶುಕ್ರವಾರ ಕೂಡ ಸಾಕಷ್ಟು ಮಂದಿ ಮೇಳದಲ್ಲಿ ಭಾಗವಹಿಸಿದ್ದು, ಇಂದು ಜನ ಕಾಲಿಡಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಆಸಕ್ತರು, ಪರಿಸರ ಪ್ರೇಮಿಗಳು, ನವೋದ್ಯಮಿಗಳು, ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ಲಾಸ್ಟಿಕ್ ಬಳಸಿ ಸಂಸ್ಕೃರಿಸಿದ ಉತ್ಪನ್ನಗಳನ್ನು ಉತ್ಪಾದಿಸುವುದು ಇದೀಗ ಹೊಸ ಟ್ರೆಂಡ್ ಆಗಿದ್ದು, ಈ ವಲಯಕ್ಕೆ ಹೆಚ್ಚಿನ ಹೂಡಿಕೆಯಾಗುತ್ತಿದೆ ಎಂದರು. 

ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಇದೀಗ ಬೇಡಿಕೆ ಬಂದಿದ್ದು, ನೀರಿನ ಖಾಲಿ ಪ್ಲಾಸ್ಟಿಕ್ ಬಾಟೆಲ್ ಗಳಿಗೆ ಪ್ರತಿ ಕೆ.ಜಿ.ಗೆ 28 ರೂ ದೊರೆಯುತ್ತಿದೆ. ಪ್ಲಾಸ್ಟಿಕ್ ಬಾಟೆಲ್ ಗಳನ್ನು ಇದೀಗ ಬೀದಿ ಬದಿಯಲ್ಲಿ ನೋಡಲು ಸಾಧ್ಯವಿಲ್ಲ. ಮೇಳದಲ್ಲಿ ಪ್ಲಾಸ್ಟಿಕ್‌ ಮರು ಬಳಕೆ, ಅತ್ಯಾಧುನಿಕ ತಂತ್ರಜ್ಞಾನ ಪ್ರದರ್ಶನ ಗಮನ ಸೆಳೆಯುತ್ತಿದೆ. ಕಸದಿಣದ ರಸ ಮಾಡುವ ಚಮತ್ಕಾರಿ ಪ್ರದರ್ಶನ ಇದಾಗಿದೆ. ಬಿಬಿಎಂಪಿ, ರಾಜ್ಯ ಪರಿಸರ ಮಾಲೀನ್ಯ ಮಂಡಳಿ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಸಹ ಮೇಳದಲ್ಲಿ ಭಾಗಿಯಾಗುತ್ತಿದ್ದು, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಮರು ಸಂಸ್ಕರಣಾ ವಲಯದಲ್ಲಿ ಇದು ಹೊಸ ಭಾಷ್ಯ ಬರೆಯಲಿದೆ ಎಂದರು.

 

ಮೇಳದಲ್ಲಿ, ಸಂಘದ ಕಾರ್ಯದರ್ಶಿ ಸುರೇಶ್ ಸಾಗರ್, ಸಂಯೋಜಕರಾದ ಹರಿರಾಮ್ ಟಕ್ಕರ್, ಶ್ರೇಯಾನ್ಸ್ ಜೈನ್  ಪದಾಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top