ಅಂತರರಾಷ್ಟ್ರೀಯ ಅಂಗವಿಕಲರ ದಿನಾಚರಣೆ: ದಿವ್ಯಾಂಗ ಮಕ್ಕಳ ಪ್ಯಾಷನ್ ಶೋ ಆಯೋಜನೆ

ಬೆಂಗಳೂರು :  ಅಂತರರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಹಿನ್ನೆಲೆಯಲ್ಲಿ ಆರ್ಟ್ ಕಲ್ಚರ್ ಎಜುಕೇಷನ್ ಎನ್ ಲೈಟ್ ಫೌಂಡೇಷನ್,  ಅರುಣಿ ರಾಯಲ್ ಐಕಾನ್ ಸಂಸ್ಥೆಯಿಂದ ದಿವ್ಯಾಂಗರ ಪ್ಯಾಷನ್ ಶೋ, ವಿಶೇಷ ನೃತ್ಯ, ನಾಟಕ, ಸಂಗೀತ ಒಳಗೊಂಡಂತೆ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 

ಬೆಂ.ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ವಿಶೇಷ ಚೇತನ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಬೆರೆತು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಪ್ಯಾಷನ್ ಶೋನಲ್ಲಿ ವೇದಿಕೆ ಮೇಲೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದವು. ಯೋಗ, ಕ್ಲಿಷ್ಟಕರವಾದ ಗಣಿತ ಸೂತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ಗಮನ ಸೆಳೆದವು. ಇದೇ ಸಂದರ್ಭದಲ್ಲಿ ಸಾಧನೆಗೈದ ವಿಕಲಚೇತನರನ್ನು ಗೌರವಿಸಲಾಯಿತು.

 

ಪತ್ರಕರ್ತ, ನಿರೂಪಕ ನಂಜುಂಡಪ್ಪ ಅವರು ಮಾತನಾಡಿ, ವಿಶೇಷ ಮಕ್ಕಳಿಗೆ ಇದು ಅತ್ಯುತ್ತಮ ವೇದಿಕೆ. ನಿಜಕ್ಕೂ ಇದು ಸಾರ್ಥಕ ಕಾರ್ಯಕ್ರಮ ಎಂದರು.

ನಟ, ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಎಜುಕೇಶನ್ ಗ್ರೂಪ್  ಮುಖ್ಯಸ್ಥರಾದ ಅರ್ಪಿತ ಪಟೇಲ್, ಅರುಣಿ ರಾಯಲ್ ಐಕಾನ್ ಸಂಸ್ಥೆ ಮುಖ್ಯಸ್ಥೆ ಮತ್ತು ಅಂಬಿಕ ಜಗದೀಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top