ಬೀದಿ ನಾಟಕದ ಮೂಲಕ ಬಂಜೆತನ ಮುಕ್ತ ಕರ್ನಾಟಕ ಘರ್ ಘರ್ ಗರ್ಭಗುಡಿ ಜನಜಾಗೃತಿ  ಅಭಿಯಾನ

ಬೆಂಗಳೂರು: ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಗರ್ಭಜ್ಞಾನ್ ಫೌಂಡೇಷನ್ ಮತ್ತು ಖ್ಯಾತ ಗರ್ಭಗುಡಿ ಐ.ವಿ.ಎಫ್ ಸೆಂಟರ್‌ ಸಹಯೋಗದಲ್ಲಿ ಬಂಜೆತನ ಮುಕ್ತ ಕರ್ನಾಟಕ ಅಭಿಯಾನಕ್ಕೆ ಇಂದು ಬೃಹತ್ ರಂಗೋಲಿ ಬಿಡಿಸಿ  ಚಾಲನೆ ನೀಡಲಾಯಿತು. ಬಂಜೆತನ ನಿವಾರಣೆಗಾಗಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು ಗರ್ಭಗುಡಿ ಐವಿಎಫ್‌ ಸೆಂಟರ್‌ನ ಕೋ ಫೌಂಡರ್‌ ಅಂಡ್‌ ಡೈರೆಕ್ಟರ್‌ ಹರೀಶ್‌ ಶ್ರೀನಿವಾಸನ್‌ ಮತ್ತು ಅಸೋಸಿಯೇಟ್‌ ವೈಸ್‌ ಪ್ರೆಸಿಡೆಂಟ್‌ ಜಯರಾಮ್‌ ಆರ್‌. ಅಭಿಯಾನಕ್ಕೆ ಚಾಲನೆ ನೀಡಿದರು. 

ಗರ್ಭಗುಡಿ ಐವಿಎಫ್‌ ಸೆಂಟರ್‌ ಆಯೋಜಿಸಿರುವ ಈ ಜನಜಾಗೃತಿ ಕಾರ್ಯಕ್ರಮ ವಾಹನ ಕಲಾ ತಂಡದೊಂದಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದ್ದು ದಂಪತಿಗಳಲ್ಲಿನ ಬಂಜೆತನಕ್ಕೆ ಕಾರಣ ಮತ್ತು ಅದರ ಪರಿಹಾರದ ಬಗ್ಗೆ ಅರಿವು ಮೂಡಿಸಲಿದೆ. ಮದುವೆ ಆಗಿ ಹಲವು ವರ್ಷಗಳಾಗಿದ್ದು ಮಕ್ಕಳಾಗದೆ ಇದ್ದಲ್ಲಿ, ದಾಂಪತ್ಯ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅಂಥ ದಂಪತಿಗಳು ಬೆಂಗಳೂರಿನ ಗರ್ಭಗುಡಿ ಐವಿಎಫ್‌ ಸೆಂಟರ್‌ಗೆ ಬಂದು ಉಚಿತ ಸೂಕ್ತ ಸಮಾಲೋಚನೆ ಪಡೆದುಕೊಳ್ಳಬಹುದು. ಹಾಗೆ ರಿಯಾಯಿತಿ ದರದಲ್ಲಿ ರಕ್ತ ಪರೀಕ್ಷೆಯ ಸೌಕರ್ಯವೂ ಇರುತ್ತದೆ.

ಬಂಜೆತನ ಮುಕ್ತ ಅಭಿಯಾನವು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ,ಉಡುಪಿ ಉತ್ತರ ಕನ್ನಡ, ಹಾವೇರಿ, ಕೊಪ್ಪಳ, ವಿಜಯಪುರ, ಗದಗ್, ರಾಯಚೂರು, ಗುಲ್ಬರ್ಗ, ಬಳ್ಳಾರಿ,ಬೀದರ್ ಹಾವೇರಿ,ಯಾದಗಿರಿ ಜಿಲ್ಲೆಗಳಲ್ಲಿ ಸಂಚರಿಸಲಿದೆ.  

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕೋ ಫೌಂಡರ್‌ ಅಂಡ್‌ ಡೈರೆಕ್ಟರ್‌ ಹರೀಶ್‌ ಶ್ರೀನಿವಾಸನ್‌ ಮದುವೆ ಒಂದು ಸುಂದರ ಕನಸು. ಆ ಕನಸು ಸುಂದರ ಕುಟುಂಬಕ್ಕೆ ನಾಂದಿ ಹಾಡುತ್ತದೆ. ಮದುವೆ ನಂತರ ಮಗು ಪಡೆಯುವುದು ಪ್ರತಿಯೊಂದು ದಂಪತಿಯ ಆಸೆ ಆಗಿರುತ್ತದೆ. ಅದು ಹಲವು ಕಾರಣದಿಂದ ನೆರವೇರದೆ ಇರಬಹುದು. ಆಗ ಧೃತಿಗೆಡದೆ , ಸಂಕೋಚ ಪಡದೆ ಗರ್ಭಗುಡಿ ಐವಿಎಫ್‌ ಸೆಂಟರ್‌ಗೆ ಬಂದು ಚೆಕ್‌ ಮಾಡಿಸಿಕೊಳ್ಳಿ ಅನ್ನೋ ಸಲಹೆ ನೀಡಿದರು. ಸಮಾರಂಭದಲ್ಲಿ ಗರ್ಭಗುಡಿ ಐವಿಎಫ್‌ ಸೆಂಟರ್‌ನ ವೈದ್ಯಕೀಯ ನಿರ್ದೇಶಕಿ ಆಶಾ ವಿಜಯ್‌ ಮತ್ತು ಸಿಎಒ ವಿಜಯ್‌ ಕುಮಾರ್‌ ಉಪಸ್ಥಿತಿರಿದ್ದರು

Facebook
Twitter
LinkedIn
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top