ಭಾರತದ ಮೊದಲ LICE ಇಂಟರ್ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್

ಬೆಂಗಳೂರು : ಕರ್ನಾಟಕ ಆಗಸ್ಟ್ 4, 2023 –ಹೆಲ್ತ್ ಕೇರ್ ಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಅಂಡ್ ಸ್ಕಿನ್ ಕ್ಲಿನಿಕ್, ಹೆಡ್ ಲೈಸ್ (ಹೇನು) ಸೋಂಕನ್ನು ಎದುರಿಸಲು ಭಾರತದಲ್ಲಿ ಮೊಟ್ಟಮೊದಲ LICE ಕ್ಲಿನಿಕ್ ಅನ್ನು ಆರಂಭಿಸಿದೆ. ಹೇನು, ಅಥವಾ ಪೆಡಿಕ್ಯುಲೋಸಿಸ್ ಕ್ಯಾಪಿಟಿಸ್, ಶಾಲೆಗಳು ಮತ್ತು ಸಾಮಾಜಿಕ ವಾತಾವರಣಗಳ ನಿಕಟ ಸಂಪರ್ಕದಿಂದ ಪೋಷಕರು ಮತ್ತು ಮಕ್ಕಳಲ್ಲಿ ಬಹು ಬೇಗ ಕಾಣಿಸಿಕೊಳ್ಳುತ್ತದೆ. ಇದರಿಂದ ನೆತ್ತಿಯಲ್ಲಿ ತುರಿಕೆ ಉಂಟಾಗಬಹುದು. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದೆ ಹೋದಲ್ಲಿ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಬಹುದು, ಇದು ಪೀಡಿತ ವ್ಯಕ್ತಿಗಳು ಮತ್ತು ಪೋಷಕರಿಗೆ ಸಮಾನವಾಗಿ ತೊಂದರೆ ಉಂಟುಮಾಡುತ್ತದೆ.

 

LICE ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಬಾನಿ ಆನಂದ್, “ಸಾಂಪ್ರದಾಯಿಕವಾಗಿ, ಹೇನುಗಳ ನಿರ್ವಹಣೆಯು ಟಾಪಿಕಲ್ ಮತ್ತು ಓರಲ್ ಪೆಡಿಕ್ಯುಲಿಸೈಡ್ ಏಜೆಂಟ್‌ಗಳ ಮುಖಾಂತರ ಇಲ್ಲವೇ ಕೆಲವು ಶಾಂಪೂಗಳ ಮೂಲಕ ಸಾಧ್ಯವಾಗುತ್ತದೆ. ನಾವು ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್‌ನಲ್ಲಿ ರಾಸಾಯನಿಕ ಮುಕ್ತ ಎಲೆಕ್ಟ್ರಾನಿಕ್ ಸಾಧನವನ್ನು ಪರಿಚಯಿಸುವುದರೊಂದಿಗೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಇದು ಕೇವಲ 2 ಸೆಷನ್‌ಗಳಲ್ಲಿ ತಲೆಯಲ್ಲಿರುವ ಹೇನುಗಳನ್ನು ತೊಡೆದುಹಾಕುವ ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವನ್ನು ಅನುಸರಿಸುತ್ತದೆ ಎಂದರು.

ಬೆಂಗಳೂರಿನ ಕೋರಮಂಗಲದಲ್ಲಿರುವ ಚಿಕಿತ್ಸಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕರಾದ ಗೌರವಾನ್ವಿತ ಎನ್ ಎ ಹ್ಯಾರಿಸ್ ಉದ್ಘಾಟಿಸಿ, ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ LICE ಕ್ಲಿನಿಕ್ ಅನ್ನು ಪ್ರಾರಂಭಿಸುವ ಮುಂದಾಳತ್ವವನ್ನು ಶ್ಲಾಘಿಸಿದರು. ಇದು ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು. ಇದು ನಮ್ಮ ಸಮುದಾಯದ ಮೇಲೆ ಪರಿಣಾಮ ಬೀರುವ ಸಾಮಾನ್ಯ ಮತ್ತು ಆಗಾಗ್ಗೆ ಕಡೆಗಣಿಸಲ್ಪಡುವ ಸಮಸ್ಯೆಯನ್ನು ಪರಿಹರಿಸುತ್ತದೆ. ವಿಶೇಷವಾದ ಆರೈಕೆಯನ್ನು ನೀಡುವ ಅವರ ಅಚಲ ಬದ್ಧತೆಗಾಗಿ ನಾನು ಹೇರ್‌ಲೈನ್ ಇಂಟರ್‌ನ್ಯಾಶನಲ್ ಅನ್ನು ಶ್ಲಾಘಿಸುತ್ತೇನೆ ಮತ್ತು ಭಾರತದ ಮೊದಲ LICE ಕ್ಲಿನಿಕ್ ಅನ್ನು ಸ್ಥಾಪಿಸಿದ್ದಕ್ಕಾಗಿ ಅವರನ್ನು ಶ್ಲಾಘಿಸುತ್ತೇನೆ” ಎಂದು ಅವರು ಹೇಳಿದರು.

 

ಹೊಸ ಕ್ರಾಂತಿಕಾರಿ ಚಿಕಿತ್ಸೆಯ ಕುರಿತು ವಿವರಿಸುತ್ತಾ, ಹೇರ್‌ಲೈನ್ ಇಂಟರ್‌ನ್ಯಾಶನಲ್‌ನ ಡರ್ಮಟೊಸರ್ಜನ್ ಡಾ. ದಿನೇಶ್ ಜಿ ಗೌಡ ಮತ್ತು ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಮತ್ತು ಕಾಸ್ಮೆಟಾಲಜಿಸ್ಟ್ ಡಾ. ಕಲಾ ವಿಮಲ್, “ಹೇರ್‌ಲೈನ್ ಇಂಟರ್‌ನ್ಯಾಶನಲ್‌ನಲ್ಲಿ, ಹೇನುಗಳ ವಿರುದ್ಧ ಕ್ರಾಂತಿಕಾರಿ ಚಿಕಿತ್ಸೆ ನೀಡಿ ಬದಲಾವಣೆಗಳನ್ನು ತರಲು ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿದ್ದೇವೆ. ಸುಧಾರಿತ ಹೀರಿಕೊಳ್ಳುವ ಈ ಸಾಧನವನ್ನು ಹೇನುಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವಂತೆ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ಅನುಭವಿ ಚರ್ಮಶಾಸ್ತ್ರಜ್ಞರ ಮೇಲ್ವಿಚಾರಣೆಯಲ್ಲಿ ನಾವು ಕೇವಲ ಎರಡು ಸೆಷನ್ ಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸುವ ಖಚಿತತೆ ನೀಡುತ್ತೇವೆ ಎಂದು ಹೇಳಿದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top