ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆ KRS ಡ್ಯಾಂಗೆ ಭಾರೀ ಪ್ರಮಾಣದ ನೀರಿನ ಒಳ ಹರಿವು ಹೆಚ್ಚಳ ಕಂಡಿದೆ.
ಒಂದೇ ರಾತ್ರಿಯಲ್ಲಿ 3 ಅಡಿ ನೀರು ಶೇಖರಣೆಗೊಳ್ಳುವ ಮೂಲಕ KRS ಡ್ಯಾಂನ ನೀರಿನ ಮಟ್ಟ 116 ಅಡಿ ದಾಟಿದೆ. ಅಂತೆಯೇ 44,000 ಕ್ಯೂಸೆಕ್ ಗೂ ಅಧಿಕ ಒಳ ಹರಿವಿನ ಪ್ರಮಾಣವಿದ್ದು, ಇದೇ ರೀತಿ ಒಳ ಹರಿವಿನ ಪ್ರಮಾಣ ಬಂದರೆ ಒಂದೇ ವಾರದಲ್ಲಿ ಡ್ಯಾಂ ಭರ್ತಿ ಆಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪುನರ್ವಸು ಮಳೆಗೆ ಈ ಬಾರೀ ಬಹುತೇಕ ಡ್ಯಾಂಗಳು ಭರ್ತಿಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವಾಯುಗುಣ ಇಲಾಖೆ ಮಾಹಿತಿ ನೀಡಿದೆ.
ಅಂತೆಯೇ KRS ಡ್ಯಾಂನ ಇಂದಿನ ನೀರಿನ ಮಟ್ಟ ನೋಡುವುದಾದರೆ,
ಗರಿಷ್ಠ ಮಟ್ಟ 124.80 ಅಡಿಗಳಷ್ಟಿದ್ದು, ಇಂದಿನ ಮಟ್ಟ 116.60 ಅಡಿ ಇದೆ.
ಗರಿಷ್ಠ ಸಾಂದ್ರತೆ 49.453 ಟಿಎಂಸಿಗಳಷ್ಟಿದ್ದು, ಇಂದಿನ ಸಾಂದ್ರತೆ 38.900 ಟಿಎಂಸಿ ಇದೆ. ಹಾಗೆಯೇ ಒಳ ಹರಿವು 44,617 ಕ್ಯೂಸೆಕ್ಸ್‍ನಷ್ಟಿದೆ. 2,566 ಕ್ಯೂಸೆಕ್ಸ್‍ನಷ್ಟು ಹೊರ ಹರಿವು ಇದೆ.
Facebook
Twitter
LinkedIn
Telegram
WhatsApp
Email
Print