ಬೆಂಗಳೂರು; ಆಧುನಿಕ ಜಗತ್ತಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಸೂಕ್ತ ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ರಿಲಸಿ ಹೆಲ್ತ್ ಕೇರ್ ನಿರ್ದೇಶಕಿ ಡಾ.ನೀತು ಕುಮಾರಿ ಸಿಂಗ್ ಹೇಳಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ಸಂಸ್ಥೆಯಾದ ಇನ್‌ಸ್ಮಿಟ್ಯೂಟ್ ಆಫ್ ಹೆಲ್ ಮ್ಯಾನೇಜ್‌ಮೆಂಟ್ ರೀಸರ್ಚ್ ಸೆಂಟರ್ – ಐಐಎಚ್‌ಎಂಆರ್ ನ 19ನೇ ಸಂಸ್ಕಾಪನಾ ದಿನ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಆರೋಗ್ಯ ವಲಯದಲ್ಲಿ ಸಾಕಷ್ಟು ಸವಾಲುಗಳು ಎದುರಾಗುವ ಸಂಭವವಿದ್ದು, ಆರೋಗ್ಯ ನಿರ್ವಹಣೆಯಲ್ಲಿ ಐಐಎಚ್‌ಎಂಆರ್ ಗಮನಾರ್ಹ ಸಾಧನೆ ಮಾಡುವ ನಿರೀಕ್ಷೆಯಿದೆ. ಆರೋಗ್ಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಉತ್ಕೃಷ್ಟತೆಯನ್ನು ತಲುಪಿಸುವಲ್ಲಿ ಸಂಸ್ಥೆಯು ಗಮನಾರ್ಹ ಸಾಧನೆ ಮಾಡಿದೆ ಎಂದರು.
ಅಪಲೋ ಆಸ್ಪತ್ರೆಯ ಉಪಾಧ್ಯಕ್ಷ ಡಾ.ಗೋವಿಂದಯ್ಯ ಯತೀಶ್ ಮಾತನಾಡಿ, ಮುಂಬರುವ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನುರಿತ ಪರಿಣಿತರನ್ನು ತಯಾರುವ ಮಾಡುವುದು ಅತ್ಯಂತ ಅಗತ್ಯವಾಗಿದೆ. ಐಐಎಚ್‌ಎಂಆರ್ ನಂತಹ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಆರೋಗ್ಯ ವಲಯಕ್ಕೆ ಮಹತ್ವದ ಕೊಡುಗೆ ನೀಡಬೇಕು ಎಂದರು.
ಐಐಎಚ್‌ಎಂಆರ್ ಸೊಸೈಟಿಯ ಟ್ರಸ್ಟಿ, ಕಾರ್ಯದರ್ಶಿ ಡಾ.ಉಷಾ ಮಂಜುನಾಥ್, ನಿರ್ದೇಶಕರಾದ ಡಾ.ಕೀರ್ತಿ ಉದಯ್, ಐಐಎಚ್‌ಎಂಆರ್ ಬೆಂಗಳೂರಿನ ಅಸೋಸಿಯೇಟ್ ಡೀನ್ ಅಕಾಡೆಮಿಕ್ಸ್ ಸಂಘದ ಅಧ್ಯಕ್ಷೆ ಡಾ. ಎಂ.ಆರ್. ದೀಪಶ್ರೀ ಮತ್ತಿತರರು ಉಪಸ್ಥಿರಿದ್ದರು