ಕಾರ್ಯಾಂಗ ಶಾಸಕಾಂಗ ಒಗ್ಗೂಡಿ ಕರ್ತವ್ಯ ಮಾಡಿದರೆ ಸಮಸ್ಯೆ ಇರುವುದಿಲ್ಲಾ

ದೇವನಹಳ್ಳಿ,ಜ,7 : ಸರ್ಕಾರಿ ಅಧಿಕಾರಿಗಳು ಪ್ರತಿ ದಿನ ಒಂದಲ್ಲಾ ಒಂದು ಒತ್ತಡದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ ಮೇಲಾಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಒತ್ತಡದ ಜಂಜಾಟದಲ್ಲಿ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಒತ್ತಡಗಳನ್ನು ಬದಿಗೊತ್ತಿ ಆರೋಗ್ಯಕರ ಕ್ರೀಡಾ ಪ್ರೋತ್ಸಾಹ ಮೆರೆದು ತೀರ್ಪುಗಾರರು ಪಕ್ಷಪಾತ ಮಾಡದೇ ಕ್ರೀಡಾ ಸ್ಪೂರ್ತಿ ತೋರಬೇಕೆಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಸಲಹೆ ನೀಡಿದರು. ದೇವನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟ ಸಮಿತಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ 2021-22 ನೇ ಸಾಲಿನ ತಾಲ್ಲೂಕು ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕಾರ್ಯಾಂಗ ಶಾಸಕಾಂಗ ಒಗ್ಗೂಡಿ ಕರ್ತವ್ಯ ನಿರ್ವಹಿಸಿದರೆ ಸಾರ್ವಜನಿಕರ ಸಮಸ್ಯೆ ಇಲ್ಲವಾಗುತ್ತದೆ ಹಾಗೂ ಉತ್ತಮ ಆಡಳಿತ ನೀಡಬಹುದು. ಸರ್ಕಾರಿ ನೌಕರರು ಸಹೋದರ ರೀತಿಯಲ್ಲಿ ಸಂಬಂಧ ಹೊಂದಿದ್ದು ಯಾವುದೇ ಅಧಿಕಾರಿಗಳಿಗೆ ಒತ್ತಡ ಹಾಕಿಲ್ಲಾ . ಸಾರ್ವಜನಿಕರ ರೈತರ ಬಡವರ ಕೆಲಸ ಮಾಡದಿದ್ದರೆ ಮಾತ್ರ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅವರಿಂದಲೇ ಕೆಲಸ ಮಾಡಿಸುತ್ತಿದ್ದೆ ಎಂದು ತಿಳಿಸಿದರು.

ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದೇ ಕೆಲಸದ ಒತ್ತಡದಲ್ಲೇ ಮುಳುಗಿರುವ ಸರ್ಕಾರಿ ನೌಕರರು ಇಂದಿನಿಂದ ನಡೆಯುತ್ತಿರುವ ಮೂರು ದಿನಗಳ ಕ್ರೀಡಾಕೂಟದಲ್ಲಿ ಹೆಚ್ಚಾಗಿ ಭಾಗವಹಿಸಿ ತಮ್ಮ ಸಾಮರ್ಥ್ಯವನ್ನು ತೋರಿ ಜಿಲ್ಲಾ ಮಟ್ಟಕ್ಕೆ ನಂತರ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಬೇಕೆಂದು ಸಲಹೆ ನೀಡಿ, ಪ್ರತಿಯೊಬ್ಬರು ಆರೋಗ್ಯವಾಗಿರಲು ದಿನದ ಒಂದು ತಾಸಾದರೂ ತಮ್ಮ ದೇಹ ದಂಡಿಸಿ ಕ್ರೀಡೆಗಳಲ್ಲಿ ತೊಡಗಬೇಕು. ಸೋಲುವ ಭಯ ಇದ್ದರೆ ಗೆಲುವು ದೂರದ ಬೆಟ್ಟವಾಗುತ್ತದೆ ಇಂದಿನ ಸೋಲೆ ಮುಂದಿನ ಗೆಲುವಿನ ಮೆಟ್ಟಿಲು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ ತಿಳಿಸಿದರು. ತಾಲ್ಲೂಕಿನಲ್ಲಿ ಸುಮಾರು 15 ಸಾವಿರ ವಿವಿಧ ಇಲಾಖೆಯ ಸರ್ಕಾರಿ ನೌಕರರಿದ್ದು ನೌಕರರ ಮನರಂಜನೆಗಾಗಿ ಸಂಘದ ವತಿಯಿಂದ ಆಯೋಜಿಸಿರುವ ಕ್ರೀಡಾಕೂಟಕ್ಕೆ ಕೇವಲ ಬೆರಳೆಣಿಕೆಯಷ್ಟು ಭಾಗವಹಿಸಿರುವುದು ಬೇಸರದ ಸಂಗತಿ, ನೌಕರರು ಕ್ರೀಡೆಯಲ್ಲು ಭಗವಹಿಸಿ ದೈಹಿಕವಾಗಿಯೂ ತೊಡಗಿಸಿಕೊಳ್ಳಬೇಕೆಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರಪ್ಪ ತಿಳಿಸಿದರು.

ಕಾರ್ಯಕ್ರಮವನ್ನು ಶಾಸಕ ನಿಸರ್ಗ ನಾರಾಯಣಸ್ವಾಮಿ ಧ್ವಜಾರೋಹಣ ಮಾಡಿವ ಮೂಲಕ ಚಾಲನೆ ನೀಡಿದರು.ನಾಯ್ಡು ಮತ್ತು ಕಲಾ ತಂಡದಿಂದ ನಾಡಗೀತೆ, ರೈತಗೀತೆ ಹಾಡಿದರು, ಕ್ರೀಡಾ ಪ್ರತಿಜ್ಞೆ ಮಾಡಲಾಯಿತು. ಕ್ರೀಡಾ ಕೂಟ ಸಮಾರಂಭದಲ್ಲಿ ದೇವನಹಳ್ಳಿ ಪುರಸಭಾ ಅಧ್ಯಕ್ಷೆ ರೇಖಾವೇಣುಗೋಪಾಲ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಅನಿಲ್ ಕುಮಾರ್, ತಾಲ್ಲೂಕು ಪಂಚಾಯತಿ, ಎ.ಡಿ.ಸಿ.ಸುನೀಲ್ ಕುಮಾರ್, ನೆಲಮಂಗಲ ತಾಲೂಕು ಅಧ್ಯಕ್ಷ ವಾಸುದೇವಮೂರ್ತಿ, ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಆದರ್ಶ್, ಹಾಗೂ ಉಪಾಧ್ಯಕ್ಷರುಗಳು, ನಿರ್ದೇಶಕರುಗಳು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top