ರೈತರು ರಾಜ್ಯದಲ್ಲಿ 2023ಕ್ಕೆ ನನಗೆ ಅವಕಾಶ ನೀಡಿದರೆ ಯಾವುದೇ ರೈತ ಸಾಲಮಾಡದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ: ಹೆಚ್.ಡಿ.ಕುಮಾರಸ್ವಾಮಿ:

ದೇವನಹಳ್ಳಿ :ರಾಜ್ಯದ ಜನತೆ ಹಾಗು ರೈತರು ನನನೆ 2023ಕ್ಕೆ ಮತ್ತೊಂದು ಅವಕಾಶ ನೀಡಿದರೆ ರಾಜ್ಯದಲ್ಲಿ ಯವುದೇ ರೈತ್ ಸಾಲ ಮಾಡದಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ. ರಾಜ್ಯದ 6.5 ಕೋಟಿ ಜನತೆಯ ಬದುಕು ಉಳಿಸಬೇಕಾದರೆ ಒಂದು ಅವಕಾಶ ನೀಡಿ ಇದು ಕೊನೆ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.ದೇವನಹಳ್ಳಿ ಪಟ್ಟಣದ ಜೆಡಿಎಸ್ ಪಕ್ಷದ ಭವನದ ಎರಡನೇ ಅಂತಸ್ಥಿನ ಹಾಗೂ ಪಿ.ಎಲ್.ಡಿ ಬ್ಯಾಂಕ್ ವಿಕಾಸ ಭವನದ ವಾಣಿಜ್ಯ ಮಳಿಗೆಯ ಮೊದಲ ಅಂತಸ್ಥಿನ ಕಟ್ಟಡದ ಉದ್ಘಾಟನೆಮಾಡಿ ಮಾತನಾಡಿದ ಅವರು 2023ಕ್ಕೆ ನಾನು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಪಕ್ಷದ ಮುಖಂಡರ ಒತ್ತಾಯವಾಗಿದೆ.ಅದು ನನ್ನ ವಯಕ್ತಿಕ ಆಸೆ ಆಮಿಶಗಳಿಗಲ್ಲ, ಕಳೆದ ಒಂದೂವರೆ ವರ್ಷದಲ್ಲಿ ಕೊರೊನದಿಂದ ಸಣ್ಣಪುಟ್ಟ ಉದ್ಯೋಗ ಮಾಡುವಂತಹವರ ಬದುಕು ಬೀದಿಪಾಲಾಗಿದೆ.

ರಾಜ್ಯದಲ್ಲಿ 39 ಸಾವಿರ ಕುಟುಂಬದಲ್ಲಿ ಕೊರೊನದಿಂದ ಮೃತಪಟ್ಟಿದ್ದಾರೆ. ಲಾಕ್‌ಡೌನ್‌ಸಮಯದಲ್ಲಿ ರೈತರು, ಬೀದಿಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ಸಾಗಿಸುವ ಜನ ನೋವುಅನುಭವಿಸುವಂತಾಗಿದೆ. ಸರಕಾರ ಅನೇಕ ಘೋಷಣೆಗಳನ್ನು ಮಾಡಿದೆ. ಅದು ಸಮರ್ಪಕವಾಗಿ ತಲುಪಿಲ್ಲ.ನಾನು ಅಧಿಕಾರದಲ್ಲಿದ್ದಾರ ಬೀದಿಬದಿವ್ಯಾಪಾರಿಗಳಿಗೆ ಬಡವರ ಬಂದು ಕಾರ್ಯಕ್ರಮ ಜಾರಿಗೆ ತಂದೆ ಇದು ರಾಜ್ಯದ 4.5 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಡವರ ಬಂದು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.ಸಣ್ಣಪುಟ್ಟವ್ಯಾಪಾರ ಮಾಡಲಿಕ್ಕೆ ವ್ಯಾಪಾರಸ್ಥರು ಮಾಡಿದಂತಹ ಕೈಸಾಲ ಆವರನ್ನು ಖುಣಮುಕ್ತರನ್ನಾಗಿಮಾಡಲಿಕ್ಕಾಗಿ ನಾನೆ ಖುದ್ದು ರಾಷ್ಟçಪತಿಗಳನ್ನು ಭೇಟಿ ಮಾಡಿ ಅವರಿಂದ ಅಂಕಿತಹಾಕಿಸಿದೆ ನಮ್ಮ ಸರಕಾರ ಪತನವಾಗುವ 2 ವಾರಗಳ ಮುಂಚೆ ಆದೇಶವಾಗಿತ್ತು. ನಂತರ ಬಂದ ಬಿಜೆಪಿ ಸರಕಾರ ಖುಣಮುಕ್ತ ಕಾಯಿದೆಯನ್ನು ಡಸ್ಟ್ಬಿನ್‌ಗೆ ಹಾಕಿದರು. ಅದು ಜಾರಿಗೆ ಬಂದಿದ್ದರೆ ಸಾವಿರಾರು ಕುಟುಂಬಗಳ 20 ಸಾವಿರ ಕೋಟಿ ಮನ್ನ ಆಗುತ್ತಿತ್ತು. 2018ರಲ್ಲಿ ಕಾಂಗ್ರೇಸ್ ನನಗೆ ಸರಿಯಾದ ರೀತಿ ಬೆಂಬಲ ನೀಡದಿದ್ದರು ಉತ್ತಮ ಕೆಲಸ ಮಾಡಿದೆ ಆದರೆ ಪ್ರಚಾರದೊರಕಲಿಲ್ಲ ಎಂದರು.ಸಿಂದಗಿ ಚುನಾವಣೆ ಸಮಯದಲ್ಲಿ ನಾವು ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಜನ ನಾವು ನೆಮ್ಮದಿಯಿಯಾಗಿ ಊಟಮಾಡುತ್ತಿದ್ದರೆ ಅದಕ್ಕೆ ಕಾರಣ ಹೆಚ್.ಡಿ ದೇವೇಗೌಡರು ಈ ಭಾಗಕ್ಕೆ ನೀರು ಹರಿಸಿದ್ದರಿಂದ ನಾವು ನೆಮ್ಮದಿಯಾಗಿದ್ದೇವೆ ಎಂದರು ಆದರೆ ಮತ ಆಕಲಿಲ್ಲ ಎಂದರು.

26 ಲಕ್ಷ ರೈತ ಕುಟುಂಬಗಳಿಗೆ 25 ಸಾವಿರ ಕೋಟಿ ಸಾಲ ಮನ್ನಾ ಕೇವಲ 14 ತಿಂಗಳ ಆಡಳಿತದಲ್ಲಿ ನೀಡಿದ್ದೇನೆ. ರೈತರ 25 ಸಾವಿರ ಕೋಟಿ ಸಾಲ ಮನ್ನ ಆಗುವವರೆಗೆ ಎಲ್ಲವನ್ನು ಸಹಿಸಿಕೊಂಡು ಕಾಂಗ್ರೇಸ್ ಜೊತೆ ಸರಕಾರ ನಡೆಸಿದೆ ರೈತರ ಸಾಲ ಮನ್ನ ಆದ ಮೇಲೆ ಸರಕಾರ ಪತನವಾದರು ಪರವಾಗಿಲ್ಲ ಎಂದು ಕೈಬಿಟ್ಟೆ ಎಂದರು. 2023ರ ಚುನಾವಣೆಗೆ ಪಂಚತಂತ್ರಗಳ ಕಾರ್ಯಕ್ರಮಗಳನ್ನು ಇಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸಮಾಡುತೇನೆ ಎಂದರು.ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ದೇವನಹಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಅನೇಕ ಅನುಧಾನಗಳನ್ನು ಬಿಡುಗಡೆ ಮಾಡಿ ಅಭಿವೃದ್ದಿಯು ಸಹ ನಡೆಯುತ್ತಿತ್ತು ಸಮ್ಮಿಶ್ರ ಸರ್ಕಾರ ಪತನವಾದ ನಂತರ ಎಲ್ಲಾ ಅನುಧಾನವನ್ನು ಸ್ಥಗಿತಮಾಡಿದ್ದು ಇದುವರೆಗೂ ಬಿಡುಗಡೆಯಾಗಿಲ್ಲ. 2023ರ ಚುನಾವಣೆಯಲ್ಲಿ ಜೆಡಿಎಸ್ ಪೂರ್ಣಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಜೆಡಿಎಸ್ ಪಕ್ಷದ ಕಾರ್ಯಕ್ರಮಗಳನ್ನು ರಾಜ್ಯದ ಮೂಲೆಮೂಲೆಗೆ ಪಕ್ಷದ ಕಾರ್ಯಕರ್ತರು ತಿಳಿಸುವ ಕೆಲಸ ಮಾಡಬೇಕು ಎಂದರು.ಇದೆ ವೇಳೆ ಮಾಜಿ ಸಚಿವ ಬಂಡೆಪ್ಪಕಾಶಂಪುರ್, ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಬೆಳ್ಳಿಪ್ರಕಾಶ್, ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ತಾಲ್ಲೂಕು ಅಧ್ಯಕ್ಷ ಆರ್.ಮುನೇಗೌಡ, ಬಮುಲ್ ಮಾಜಿ ಅಧ್ಯಕ್ಷ ಅಪ್ಪಯ್ಯಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಕಾರ್ಯಧ್ಯಕ್ಷ ಹನುಮಂತಪ್ಪ, ಟೌನ್ ಅಧ್ಯಕ್ಷ ಮುನಿನಂಜಪ್ಪ, ಪುರಸಭಾ ಉಪಾಧ್ಯಕ್ಷೆ ಪುಷ್ಪಾ ಲಕ್ಷ್ಮೀನಾರಾಯಣ್ , ಸ್ಥಾಯಿಸಮಿತಿ ಅಧ್ಯಕ್ಷ ನಾಗೇಶ್, ಸದಸ್ಯ ರುದ್ರೇಶ್, ಯುವ ಮುಖಂಡ ಆರ್.ಭರತ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಹೇಶ್, ವೆಂಕಟಗಿರಿಕೋಟೆ ಗ್ರಾಪಂ ಅಧ್ಯಕ್ಷ ಹುರಳಗುರ್ಕಿ ಶ್ರೀನಿವಾಸ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ತಾಲ್ಲೂಕಿನ ಜೆಡಿಎಸ್ ಮುಖಂಡರು ಕಾರ್ಯಕರ್ತರು ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top