ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಬುಧವಾರ ಸಂಜೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಚಾಗನೂರು ಗ್ರಾಮದಲ್ಲಿ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಅವರು ಪರವಾಗಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತ ಯಾಚನೆ ಮಾಡಿದರು.
ರೋಡ್ ಶೋ ನಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವ ಮೂಲಕ ಗಮನ ಸೆಳೆದರಲ್ಲದೆ. ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಬಿ.ನಾಗೇಂದ್ರ ಅವರ ಮೇಲೆ ಜೆಸಿಬಿ ಗಳ ಮೂಲಕ ಹೂವಿನ ಮಳೆ ಗೈದು, ಪಟಾಕಿ ಸಿಡಿಸಿ ಸಂಭ್ರಮಿಸಿ ಬರ ಮಾಡಿಕೊಂಡರು.
ಇದೇ ವೇಳೆ ಸಚಿವ ಬಿ.ನಾಗೇಂದ್ರ ಅವರು ಮಾತನಾಡಿ, ನಾನು ಚಾಗನೂರು ಗ್ರಾಮದ ಜನರ ಆಶೀರ್ವಾದದಿಂದ ಗೆದ್ದು ಶಾಸಕನಾಗಿ, ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದೇನೆ.
ಕಾಂಗ್ರೆಸ್ ಪಕ್ಷ ಕಡೆವರೆಗೂ ನಿಮ್ಮ ಜೊತೆ ನಿಮ್ಮ ಕಷ್ಟ, ಸುಖಗಳಲ್ಲಿ ಭಾಗಿಯಾಗಿ ನಿಮ್ಮೊಟ್ಟಿಗೆ ಇರುತ್ತೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೆ ಒಂದು ಕುಟುಂಬಕ್ಕೆ ಒಂದು ಲಕ್ಷ ಗ್ಯಾರೆಂಟಿ ಯೋಜನೆಯ ಹಣ ದೊರೆಯಲಿದೆ.
ವಿಧಾನ ಸಭಾ ಚುನಾವಣೆಯಲ್ಲಿ ನೀಡಿದ ಮಾತಿನಂತೆ ಪಂಚ ಗ್ಯಾರೆಂಟಿಗಳನ್ನ ನೀಡುವ ಮೂಲಕ ಮಹಿಳೆಯರು, ಬಡವರು, ದೀನ ದಲಿತರ ಧ್ವನಿಯಾಗಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡ ವ್ಯೆಕ್ತಿ ಯಾರಾದ್ರು ಇದ್ರೆ ಅದು ನಮ್ಮ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರು ಮಾತ್ರ ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷದ ಜನರು ಬರುತ್ತಾರೆ ಅವರ ಅಮಿಷಕ್ಕೆ ಬಲಿಯಾಗದೆ.
ಈ ಬಾರಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಈ.ತುಕಾರಾಂ ಅವರು ಸೋಲಿಲ್ಲದ ಸರದಾರರು, ನಾಲ್ಕು ಬಾರಿ ಶಾಸಕರಾಗಿ ಹಲವಾರು ಹುದ್ದೆಗಳನ್ನ ಅಲಂಕರಿಸಿರುವವರು ಹಾಗೂ ಯಾವುದೇ ಕಳಂಕವಿಲ್ಲದಂತಹ ಸಂಸತ್ತಿನಲ್ಲಿ ಬಳ್ಳಾರಿ ಜಿಲ್ಲೆಯ ಜನರ ಪರ ಧ್ವನಿಯಾಗುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕರಾಂ ಅವರನ್ನ ಹೆಚ್ಚಿನ ಬಹುಮತದಿಂದ ಗೆಲ್ಲಿಸುವಂತೆ ಸಚಿವ ಬಿ.ನಾಗೇಂದ್ರ ಅವರು ಮನವಿ ಮಾಡಿದರು.
ಈ ಪ್ರಚಾರ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್, ಕಾಂಗ್ರೆಸ್ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಶ್ರೀನಿವಾಸ್ ರೆಡ್ಡಿ, ಮಲ್ಲಿಕಾರ್ಜುನಗೌಡ, ಅಸುಂಡಿ ಹೊನ್ನೂರಪ್ಪ, ಶೇಷರೆಡ್ಡಿ, ಅಣ್ಣಾ ನಾಗರಾಜ್, ಗೋವರ್ಧನ್ ರೆಡ್ಡಿ, ಬಗರ್ ಹುಕುಂ ಕಮೀಟಿ ಅಧ್ಯಕ್ಷರಾದ ಹೆಚ್.ತಿಮ್ಮನಗೌಡ, ಎಲ್.ಮಾರೆಣ್ಣ, ಬೆಣಕಲ್ಲು ಬಸವರಾಜ ಗೌಡ, ಯರ್ರಗುಡಿ ಮುದಿಮಲ್ಲಯ್ಯ, ದುರುಗಣ್ಣ, ಶ್ರೀನಾಥ್, ಪರುಶುರಾಮ ಅವರು ಸೇರಿದಂತೆ ಗ್ರಾಮದ ಪ್ರಮುಖ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.