ಆ ಮನೆಯಲ್ಲಿ ನನ್ನ ಮಾನಭಂಗವಾಗಿದೆ, ಚಾರಿತ್ರ‍್ಯವಧೆ ನಡೆಸಿದ್ದಾರೆ, ನಾನು ಪಾಲಿಗ್ರಾಫ್​ ಪರೀಕ್ಷೆಗೆ ಸಿದ್ಧ : ಸ್ವಾತಿ ಮಲಿವಾಲ್

ನವದೆಹಲಿ: ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ನನ್ನ ಚಾರಿತ್ರ‍್ಯ ವಧೆ ನಡೆದಿದೆ, ನಾನು ಎಫ್ಐಆರ್ನಲ್ಲಿ ಹೇಳಿರುವುದೆಲ್ಲವೂ ನಿಜ, ನಾನು ಪಾಲಿಗ್ರಾಫ್ ಹಾಗೂ ನಾರ್ಕೊಪರೀಕ್ಷೆಗೆ ಸಿದ್ಧನಿದ್ದೇನೆ ಎಂದು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ಅವರು ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಅವರ ಆಪ್ತ ಕಾಯರ‍್ಶಿ ವಿಭವ್ ಕುಮಾರ್ ತಮ್ಮ ಮೇಲೆ ನಡೆಸಿದ ಹಲ್ಲೆ ಕುರಿತು ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಆ ಮನೆಯಲ್ಲಿ ನನ್ನ ಮಾನಭಂಗ ನಡೆದಿದೆ, ಚಾರಿತ್ರ‍್ಯ ವಧೆಯಾಗಿದೆ, ಎಫ್‌ಐಆರ್‌ನಲ್ಲಿ ತಾನು ಹೇಳಿರುವುದು ನಿಜ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ನರ‍್ಕೋ ಪರೀಕ್ಷೆ ಮತ್ತು ಪಾಲಿಗ್ರಾಫ್‌ಗೆ ಒಳಗಾಗಲು ಸಿದ್ಧ ಎಂದು ಅವರು ಹೇಳಿದ್ದಾರೆ.

ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ವಾತಿ ಮಲಿವಾಲ್ ಸ್ಪಷ್ಟಪಡಿಸಿದ್ದಾರೆ. ಅವರಿಗೆ ನನ್ನ ರಾಜ್ಯಸಭಾ ಸ್ಥಾನ ಬೇಕಿದ್ದರೆ ಪ್ರೀತಿಯಿಂದ ಕೇಳಿದ್ದರೆ ನನ್ನ ಪ್ರಾಣವನ್ನು ಬೇಕಿದ್ದರೂ ಬಿಡುತ್ತಿದ್ದೆ, ಸಂಸದೆ ಎಂಬುದು ಸಣ್ಣ ವಿಷಯ, ಆದರೆ ಈಗ ನನ್ನ ಮೇಲೆ ಹಲ್ಲೆ ನಡೆದಿದೆ, ಪ್ರಪಂಚದ ಯಾವೊಂದು ಶಕ್ತಿ ಬಂದು ಹೇಳಿದರೂ ನಾನು ರಾಜೀನಾಮೆ ನೀಡುವ ಮಾತೇ ಇಲ್ಲ ಎಂದಿದ್ದಾರೆ.

ನನ್ನನ್ನು ಟ್ರೋಲ್ ಮಾಡಲಾಗುತ್ತಿದೆ, ನಾನು ಒತ್ತಡಕ್ಕೆ ಮಣಿದು ಈ ಪ್ರಕರಣವನ್ನು ಇಲ್ಲಿಗೆ ಬಿಡುತ್ತೇನೆ ಎಂದುಕೊಂಡಿದ್ದಾರೆ, ಆದರೆ ನಾನು ಎಫ್ಐಆರ್ನಲ್ಲಿ ಹೇಳಿರುವುದೆಲ್ಲವೂ ನಿಜ, ನಾನು ಪಾಲಿಗ್ರಾಫ್ ಹಾಗೂ ನರ‍್ಕೊ ಪರೀಕ್ಷೆ ಸಿದ್ಧನಿದ್ದೇನೆ, ನಾನು ಹೋರಾಡುತ್ತೇನೆ ಎಂದರು.

ಇಷ್ಟೆಲ್ಲ ಆದರೂ, ಇಲ್ಲಿಯವರೆಗೆ ನಾನು ಅರವಿಂದ್ ಜಿಯಿಂದ ಯಾವುದೇ ಕರೆ ಸ್ವೀಕರಿಸಿಲ್ಲ ಅಥವಾ ಅವರು ನನ್ನನ್ನು ಭೇಟಿ ಮಾಡಿಲ್ಲ ಎಂಬುದು ಸಹ ನಿಜ. ಅರವಿಂದ್ ಜಿ ಆರೋಪಿಯನ್ನು ರಕ್ಷಿಸುತ್ತಿದ್ದಾರೆ.

ನಾನು ಎಫ್‌ಐಆರ್‌ನಲ್ಲಿ ನನ್ನ ಬಟ್ಟೆ ಹರಿದಿದೆ ಎಂದು ಯಾವಾಗ ಹೇಳಿದ್ದೇನೆ, ನನ್ನ ತಲೆಗೆ ಗಾಯವಾಗಿದೆ ಎಂದು ನಾನು ಎಫ್‌ಐಆರ್‌ನಲ್ಲಿ ಹೇಳಿದ್ದೇನೆ. ನನಗೆ ಏನಾಯಿತು ಎಂದು ನಾನು ನಿಖರವಾಗಿ ಬರೆದಿದ್ದೇನೆ, ನಾನು ಅದಕ್ಕಿಂತ ಹೆಚ್ಚಿನದನ್ನು ಬರೆದಿಲ್ಲ ಎಂದರು.

 

ತಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ಸಾಬೀತುಪಡಿಸಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top