‘ ಇಂಡಿಯಾ ಮಾರ್ಕೆಟ್ ಏನು ಅಂತ ಈಗ’ ಚಿತ್ರದಲ್ಲೇ ನಾನು ನೋಡ್ಬಿಟ್ಟೆ- ಕಿಚ್ಚ ಸುದೀಪ್
‘ಮ್ಯಾಕ್ಸ್’ ಬಳಿಕ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದ್ದು ಕ್ರಿಸ್‌ಮಸ್ ಹಬ್ಬಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ ಎಂದು ಸುದೀಪ್ ಹೇಳಿದ್ದಾರೆ. ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಸತ್ಯ ಜ್ಯೋತಿ ಫಿಲ್ಮ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆ.
ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಕನ್ನಡ ಮಾರ್ಕೆಟ್ ಬಿಟ್ಟು ಬೇರೆ ಕಡೆ ಮುಖ ಮಾಡುವುದು ಸರಿಯಲ್ಲ ಎನ್ನುವ ವಾದವೂ ಇದೆ. ಸದ್ಯ ಇದೇ ವಿಚಾರದ ಬಗ್ಗೆ ನಟ ಸುದೀಪ್ ಮಾತನಾಡಿದ್ದಾರೆ. ಹೊಸ ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಮಾತ್ರ ಬಿಡುಗಡೆ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ “ಈಗ’ ಚಿತ್ರದಲ್ಲೇ ನಾನು ಇಂಡಿಯಾ ಮಾರ್ಕೆಟ್ ನೋಡ್ಬಿಟ್ಟೆ” ಎಂದಿದ್ದಾರೆ.