ಬಳ್ಳಾರಿ : ಈಶಾನ್ಯ ಪದವೀಧರರ ಕ್ಷೇತ್ರದ ಎಂಎಲ್’ಸಿ ಸ್ಥಾನದ ಆಕಾಂಕ್ಷಿಯಾಗಿದ್ದು, ಈಗಾಗಲೇ ಕೆಪಿಪಿಸಿಗೆ ಅರ್ಜಿ ಹಾಕಿದ್ದೇನೆ ಎಂದು ಬಳ್ಳಾರಿಯ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಹೇಳಿದರು.
ಬಳ್ಳಾರಿ ನಗರದ ಖಾಸಗಿ ಹೋಟಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮತಾನಾಡಿದರು. ಈಶಾನ್ಯ ಪದವೀಧರರ ಕ್ಷೇತ್ರದ ಎಂಎಲ್’ಸಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನಾನು ಈಗಾಗಲೇ ಅರ್ಜಿ ಹಾಕಿದ್ದೇನೆ. ಅಖಂಡ ಬಳ್ಳಾರಿ ಜಿಲ್ಲೆಯಿಂದ ಇದುವರೆಗೆ ಯಾರು ಗೆದ್ದಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಅಖಂಡ ಬಳ್ಳಾರಿ ಜಿಲ್ಲೆಗೆ ಪ್ರಾಶಸ್ತ್ಯ ಸಿಕ್ಕಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಬೇರೆ ಜಿಲ್ಲೆಗಳಿಗೆ ಆದ್ಯತೆ ಸಿಕ್ಕಿದೆ. ಈ ಭಾರಿ ಅಖಂಡ ಬಳ್ಳಾರಿ ಜಿಲ್ಲೆಗೆ ಆದ್ಯತೆ ನೀಡುವ ನಿರೀಕ್ಷೆಯಿದೆ ಎಂದರು.
ಮುಂಬರುವ 2024ರ ವರ್ಷದಲ್ಲಿ ಚುನಾವಣೆ ನಡೆಯಿಲಿದೆ. ಬೇರೆ ಕಡೆಗಳಲ್ಲಿ ಅರ್ಜಿಗಳು ಹಾಕಿದ್ದಾರೆ. ಆದರೆ ಅಖಂಡ ಬಳ್ಳಾರಿ ಜಿಲ್ಲೆಯಿಂದ ನಾನೊಬ್ಬನೆ ಅರ್ಜಿ ಹಾಕಿದ್ದೇನೆ. ಈ ಭಾರಿ ನನಗೆ ಟಿಕೇಟ್ ಸಿಗುವ ಭರವಸೆಯಿದೆ. ಕಳೆದ ಚುನಾವಣೆಯಲ್ಲಿ ಗೆಲುವಿನ ಸಮೀಪ ಬಂದು ನಾನು ಸೋತಿದ್ದೇನೆ. ಈ ಭಾರಿ ಗೆದ್ದೆ ಗೆಲ್ಲುತ್ತೇನೆ ಎಂಬ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪದವಿ ಮುಗಿಸಿದವರು ಕೂಡಲೇ ಮತ ಪಟ್ಟಿಯಲ್ಲಿ ಹೆಸರು ಸೇರಿಸಿ. ಆಧಾರ ಕಾರ್ಡ್, ಪದವಿ ಪ್ರಮಾಣಪತ್ರ, ವಿವಿಯಿಂದ ಪಡೆದ ಕಲ್ವಿಕೇಷನ್ ಯಾವುದಾದರೂ ಒಂದು ದಾಖಲಾತಿ ಕೊಟ್ಟರೆ ಮತ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗುತ್ತದೆ ಎಂದರು. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ 65ರಿಂದ 70ಸಾವಿರ ಪದವೀಧರರ ಮತಗಳು ಇದ್ದಾವು. ಈಗ ಹೊಸದು ಹಾಗೂ ಹಳೆದು ಸೇರಿ ಒಂದು ಲಕ್ಷ ಮತಗಳು ಮತಪಟ್ಟಿಯಲ್ಲಿ ಸೇರ್ಪಡೆಯಾಗಲಿವೆ ಎಂದು ಮಾಹಿತಿ ನೀಡಿದರು.