ದಾವಣಗೆರೆ,29 : ದಾವಣಗೆರೆ ಜಿಲ್ಲಾ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಮೂವರು ಅಂತರ್ ರಾಜ್ಯ ಕಳ್ಳರ ಬಂಧಿಸಿದ್ದಾರೆ. ಬಂಧಿತರಿಂದ 22.92 ಲಕ್ಷ ಮೌಲ್ಯದ ಸ್ವತ್ತು ವಶ ಪಡಿಸಿಕೊಳ್ಳಲಾಗಿದೆ. ದಿನಾಂಕ 14-01-2021 ರಂದು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಹಾಗೂ ನಿಪ್ಪಾಣಿ, ಸಂಕೇಶ್ವರ, ಖಾನಾಪುರ, ಹಾವೇರಿ, ರಾಣೆಬೆನ್ನೂರು, ಹರಿಹರ ನಗರಗಳಲ್ಲಿ ಒಟ್ಟು 10 ಮನೆಗಳ್ಳತನ ಮಾಡಿದ್ದ 03 ಜನ ಆರೋಪಿತರನ್ನು ಬಂಧನ ಮಾಡಿದ್ದು, ಮಾಡಿದ್ದು, ಆರೋಪಿರಿಂದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 16,84,000/-ರೂ ಮೌಲ್ಯದ 421 ಗ್ರಾಂ ಬಂಗಾರದ ಆಭರಣ, 2,16,000/-ರೂ ಮೌಲ್ಯದ 3,600 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗೂ 1,00,000/- ರೂ ನಗದು ಹಣವನ್ನು ಫಾಸಿಲ್ ಕಂಪನಿಯ ವಾಚ್ ಬೆಲೆ ಸುಮಾರು 7000 ಹಾಗೂ 2,85,000/- ರೂ ಬೆಲೆಯ ಒಂದು ಮಾರುತಿ ಸುಜುಕಿ ಸ್ವಿಪ್ಟ್ ಕಾರ್ ಒಟ್ಟು 22,92,000/-ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಕೆ.ಎಸ್.ಪಿ.ಎಸ್, ಸಹಾಯಕ ಪೊಲೀಸ್ ಅಧೀಕಕ್ಷಕಿ ಕನ್ನಿಕಾ ಸಿಕ್ರಿವಾಲ್, ಪೊಲೀಸ್ ಉಪಾಧೀಕ್ಷಕ ಬಸವರಾಜ.ಬಿ.ಎಸ್ ಮತ್ತು ರುದ್ರೇಶ್ ರವರ ಮಾರ್ಗದರ್ಶನದಲ್ಲಿ ಸತೀಶ ಕುಮಾರ.ಯು ಸಿಪಿಐ ಹರಿಹರ ವೃತ್ತ ರವರ ನೇತೃತ್ವದಲ್ಲಿ ಸುನೀಲ ಬಿ ತೇಲಿ ಪಿ.ಎಸ್.ಐ(ಕಾ.ಸು & ಸಂಚಾರ), ಲತಾ ವಿ ತಾಳೇಕರ್ ಪಿ.ಎಸ್.ಐ(ತನಿಖೆ), ಮಂಜುನಾಥ ಕಲ್ಲೇದೇವರು ಪಿ.ಎಸ್.ಐ, ಯಾಸೀನ್ ವುಲ್ಲಾ ಎ.ಎಸ್.ಐ ಶ್ರೀ ನಾಗರಾಜ ಸುಣಗಾರ, ಹನುಮಂತ ಗೋಪನಾಳ, ಶಿವರಾಜ.ಎಂ.ಎಸ್, ಮಂಜುನಾಥ ಕ್ಯಾತಮ್ಮನವರ್, ಸಿದ್ದರಾಜು.ಎಸ್.ಬಿ, ಸಿದ್ದೇಶ.H, ಸತೀಶ.ಟಿ.ವಿ ರಾಘವೇಂದ್ರ, ಉಮೇಶ ಬಿಸ್ನಾಳ್, ಶಾಂತರಾಜ್, ಅಕ್ತರ್, ನಾಗರಾಜ ಕುಂಬಾರ, ವಿರೇಶ್, ಮಾರುತಿ ರವರುಗಳು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ತಂಡಕ್ಕೆ ಪೊಲೀಸ್ ಅಧೀಕ್ಷಕ ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ