ವಮೊಗ್ಗ : ಸುರಭಿ ಗೋಶಾಲೆ ಮತ್ತು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ (ರಿ) ಪ್ರಾಯೋಜಿತ ಮಂಡೇನಕೊಪ್ಪ ಎನ್ ಆರ್ ಪುರ ರಸ್ತೆಯಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಜಿಲ್ಲಾ ಬ್ರಾಹ್ಮಣ ಮಹಾಸಭೆಯು ಗೋ ಸಂರಕ್ಷಣೆಯ ಮಹತ್ಕಾರ್ಯದಲ್ಲಿ ತೊಡಗಿರುವುದು ಹಾಗೂ ಸುರಭಿ ಗೋಶಾಲೆಯೊಂದಿಗೆ ಕೈ ಜೋಡಿಸಿರುವುದು ಪ್ರಶಂಸನೀಯ. ಗೋವಿನ ಸಂರಕ್ಷಣೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಇದರೊಂದಿಗೆ ಗೋ ಸಂರಕ್ಷಣೆ ಮಾಡುವಂತಹ ಗೋಶಾಲೆಗಳಿಗೆ ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕಾರ್ಯಕ್ರಮದಲ್ಲಿ ಹಿರಿಯರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಮಕ ಗಂಧರ್ವ ವೇ” ಬ್ರ”ಶ್ರೀ” ಹೆಚ್ ಆರ್ ಕೇಶವಮೂರ್ತಿಗಳು ಮತ್ತು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ. ಪಕ್ಷದ ಹಿರಿಯರು ಮಾರ್ಗದರ್ಶಕರಾದ ಶ್ರೀ ಎಂ ಬಿ ಭಾನುಪ್ರಕಾಶ್. ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರಶಿಕ್ಷಕ ಪ್ರಮುಖರಾದ ಶ್ರೀ ಮಧುಸೂದನ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಶ್ರೀ ಎಸ್ ದತ್ತಾತ್ರಿ. ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ರುದ್ರೆ ಗೌಡರು. ಸನ್ಮಾನ್ಯ ಶ್ರೀ ಆಯನೂರು ಮಂಜುನಾಥ್ . ಸನ್ಮಾನ್ಯ ಶ್ರೀ ಡಿ.ಎಸ್ ಅರುಣ್. ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ನಟರಾಜ್ ಭಾಗವತ್.ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಸನ್ಮಾನ್ಯ ಶ್ರೀ ಕೆಎಸ್ ಗುರುಮೂರ್ತಿ. ಮತ್ತು ಗ್ರಾಮಸ್ಥರು ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೋ ಸೇವಾ ನಿರತರಾದ ಶ್ರೀ ಮನೋಹರ ನೆಲ್ಲಿ. ಶ್ರೀ ಮಧುಕರ ನೆಲ್ಲಿ. ಶ್ರೀ ಜಗದೀಶ್. ಶ್ರೀಗುರು ಶೇಟ್. ಶ್ರೀ ನಾಗೇಶ್. ಶ್ರೀ ದೀನದಯಾಳ್. ಶ್ರೀ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
