ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವ: ಸಾರ್ವಜನಿಕರ ಪಾಲ್ಗೊಳ್ಳುವಿಕೆ ನಿಷೇಧ

ಹೊಸಪೇಟೆ
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿರುವ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ರಥೋತ್ಸವವು ಇದೇ ಫೆ.25ರಂದು ಜರುಗಲಿದೆ
ಕೋವಿಡ್ -19 ಓಮಿಕ್ರಾನ್ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ದಂಡ ಪ್ರಕ್ರಿಯೆ ಸಂಹಿತ 1973 ಕಲಂ 144ರ ಅಡಿಯಲ್ಲಿ ಫೆ.24ರಿಂದ ಫೆ.25ರವರೆಗೆ ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ರಥೋತ್ಸವದಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಗೆ ನಿμÉೀಧವನ್ನು ಜಾರಿ ಮಾಡಿದ್ದಾರೆ ಎಂದು ದೇವಸ್ಥಾನದ ಪ್ರಧಾನ ಧರ್ಮಕರ್ತರಾದ ಸಿ.ಎಚ್.ಎಂ.ಗಂಗಾಧರಯ್ಯ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ಎಚ್.ಪ್ರಕಾಶರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಕೊಟ್ಟೂರು ಕ್ಷೇತ್ರಕ್ಕೆ ಬರುವುದಕ್ಕೆ ಅವಕಾಶ ಇರುವುದಿಲ್ಲ.ವಿವಿಧ ಜಿಲ್ಲೆಗಳಿಂದ ತಾಲೂಕುಗಳಿಂದ ಕೊಟ್ಟೂರು ಕ್ಷೇತ್ರಕ್ಕೆ ವಿಶೇಷ ಬಸ್ಸುಗಳ ವ್ಯವಸ್ಥೆಯು ಇರುವುದಿಲ್ಲ. ಕೊಟ್ಟೂರು ಕ್ಷೇತ್ರಕ್ಕೆ ಬರುವ ಎಲ್ಲಾ ಮುಖ್ಯ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಿ ಚೆಕ್‍ಪೆÇೀಸ್ಟ್ ನಿರ್ವಹಿಸಿ ವಾಹನಗಳನ್ನು ನಿಯಂತ್ರಣ ಮಾಡುವ ಕ್ರಮವನ್ನು ಪೆÇಲೀಸ್ ಇಲಾಖೆಯ ವತಿಯಿಂದ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಸಾರ್ವಜನಿಕರು/ಭಕ್ತಾಧಿಗಳು ಕೊಟ್ಟೂರು ಕ್ಷೇತ್ರಕ್ಕೆ ಫೆ.24ರಿಂದ ಫೆ.25ರವರೆಗೆ ಬರಬಾರದೆಂದು ಅವರು ಮನವಿ ಮಾಡಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top