ವಿಜಯನಗರ: ಹೊಸಪೇಟೆ ನಗರ ಸಭೆ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಕಡ್ಡಿರಾಂಪುರದಲ್ಲಿ ನಡೆದಿದೆ.
ಕಡ್ಡಿರಾಂಪುರದ ಖಾಸಗಿ ಹೊಂಸ್ಟೇನಲ್ಲಿ ಹೊಸಪೇಟೆ ನಗರ ಸಭೆ ಸಿಬ್ಬಂದಿಯೊಬ್ಬರು ಮಂಜುನಾಥ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಆತ್ಮಹತ್ಯೆಗೆ ಮೇಲಧಿಕಾರಿಗಳ ಕಿರುಕುಳ ಕಾರಣವಾ ಅಥವಾ ಕೆಲಸದ ಒತ್ತಡ ಹಾಗೂ ಮಾನಸಿಕ ಒತ್ತಡಕ್ಕೊಳಗಾಗಿ ಜೀವ ಕಳೆದುಕೊಳ್ಳುವ ನಿರ್ಣಯಕ್ಕೆ ಮಂಜುನಾಥ್ ಬಂದನಾ ಎಂಬ ಕುರಿತು ಅನುಮಾನಗಳಿವೆ. ಈ ಕುರಿತು ತನಿಖೆಯ ನಂತರ ಉತ್ತರ ಸಿಗಬೇಕಾಗಿದೆ.
ನಗರಸಭೆ ನೌಕರ ಮಂಜುನಾಥ್, ಈ ಹಿಂದೆಯೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಕುರಿತು ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಗರಸಭೆ ಪೌರಾಯುಕ್ತ ಮತ್ತು ಇತರರ ಹೆಸರು ಬರೆದಿಟ್ಟು ಆಗ ಆತ್ಮಹತ್ಯೆಗೆ ಯತ್ನಿಸಿದ್ದ, ಮಂಜುನಾಥ್‌ನಿಗೆ ಚಿಕಿತ್ಸೆ ಕೊಡಿಸಿ, ನಗರಸಭೆ ಸಿಬ್ಬಂದಿಗಳು ಮಂಜುನಾಥನಿಗೆ ಸಮಾಧಾನ ಪಡಿಸಿದ್ದರು. ಇನ್ನೆನು ಎಲ್ಲವೂ ಸರಿಹೋಯ್ತು ಎನ್ನುವಷ್ಟರಲ್ಲಿ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಂಪಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.