ಗೃಹ ಸಚಿವ ಪರಮೇಶ್ವರ್ ರಿಂದ ಹಸಿರು ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು: ತಾಲೂಕಿನ ಹುಲಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌರಗನಹಳ್ಳಿ ಗ್ರಾಮದ ರಂಗನಾಥ ಸ್ವಾಮಿ ಬೆಟ್ಟದಲ್ಲಿ, 600 ಕ್ಕೂ ಹೆಚ್ಚು ಸಸಿಗಳ ನೆಡುವ ಕಾರ್ಯಕ್ರಮಕ್ಕೆ ಗಿಡ ನೆಡುವ ಮುಖೇನ ಕಾರ್ಯಕ್ರಮಕ್ಕೆ ಗೃಹ ಸಚಿವ ಪರಮೇಶ್ವರ್ ರಿಂದ ಉದ್ಘಾಟಿಸಿದರು.

ಪ್ರತಿ ಪಂಚಾಯತಿಗೆ ಸಾವಿರ ಸಸಿಗಳ ನೆಡುವ ಹಸಿರು ಗ್ರಾಮಕ್ಕೆ ಬುನಾದಿ,ದೇಶದಲ್ಲಿ ಶೇಕಡಾ 20 ರಷ್ಟು  ಅರಣ್ಯ ಉಳಿದಿದೆ, ಮಳೆ ಬರಬೇಕು ಉತ್ತಮ ಗಾಳಿ ಸಿಗಬೇಕು ಎಂದರೆ ಅರಣ್ಯ ಪ್ರದೇಶವನ್ನು ಹೆಚ್ಚಿಸಬೇಕು.

ಆದ್ದರಿಂದ ಜಿಲ್ಲೆಯಾದ್ಯಂತ  ಈ ಹಸಿರು ಗ್ರಾಮ  ಎನ್ನುವ ನೂತನ ಕಾನೂನು ಜಾರಿ,ಪ್ರತಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದನ್ನ ಕಾರ್ಯರೂಪಕ್ಕೆ ತರಲೇಬೇಕು.

ತಾಲೂಕು ಶಿಕ್ಷಣಾಧಿಕಾರಿ ಸರ್ಕಾರಿ ಶಾಲೆಗಳಲ್ಲಿ ಸಸಿಗಳನ್ನು ಬೆಳೆಸುವುದರಲ್ಲಿ ಮುಖ್ಯ ಪಾತ್ರ ವಹಿಸಬೇಕು  ಎಂದು ಗೃಹ ಸಚಿವ ಪರಮೇಶ್ವರ ಅಧಿಕಾರಿಗಳಿಗೆ ಕಿವಿಮಾತು.ಮುಂದಿನ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಹಸಿರು ಕ್ರಾಂತಿಯಲ್ಲಿ ಏಳಿಗೆ ಕಾಣಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಈ ಹಸಿರು ಗ್ರಾಮ ಕಾರ್ಯಕ್ರಮ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ  ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ 32 ಬಗೆಯ  ವಿವಿಧ ಜಾತಿಯ ಒಂದು ಸಾವಿರ ಸಸಿಗಳನ್ನ  ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನೆಟ್ಟು ಪೋಷಿಸಬೇಕು  ಎಂದು ಗೃಹ ಸಚಿವ ಪರಮೇಶ್ವರ್ ಅವರು  ಅಧಿಕಾರಿಗಳು ಹಾಗೂ ಶಾಲಾ ಮಕ್ಕಳಿಗೆ ತಿಳಿಸಿದರು.

 

 ಇದೇ ಸಂದರ್ಭದಲ್ಲಿ  ಜಿಲ್ಲಾಧಿಕಾರಿ ಶುಭಕಲ್ಯಾಣ, ಜಿಲ್ಲಾ ಪಂಚಾಯತಿ ಸಿಇಒ  ಪ್ರಭು, ಜಿಲ್ಲಾ  ಅರಣ್ಯ ಅಧಿಕಾರಿಗಳು, ತಾಲೂಕು ದಂಡಾಧಿಕಾರಿ ಮಂಜುನಾಥ್, ತಾಲೂಕು ಅರಣ್ಯ ಅಧಿಕಾರಿ ರವಿಕುಮಾರ್, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಶಿಲ್ಪ, ಗ್ರಾಮ ಪಂಚಾಯಿತಿಯ ಪಿಡಿಒ, ಅಧ್ಯಕ್ಷರು, ಸದಸ್ಯರುಗಳು, ವಿದ್ಯಾರ್ಥಿಗಳು, ಹಾಗೂ ಗ್ರಾಮಸ್ಥರು ಆಚರಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top