ಬೆಂಗಳೂರು : ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಜನ್ಮ ದಿನವನ್ನು ಡಾ. ಆನಂದ್ ಕುಮಾರ್ ಅಭಿಮಾನಿ ಬಳಗದಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಬೆಂಗಳೂರಿನ ಸದಾಶಿವ ನಗರದ ಅವರ ಗೃಹ ಕಚೇರಿಯಲ್ಲಿ ಡಾ. ಆನಂದ್ ಕುಮಾರ್ ಅಭಿಮಾನಿ ಬಳಗದ ಸದಸ್ಯರು ಪರಮೇಶ್ವರ್ ಅವರಿಗೆ ಶುಭ ಕೋರಿದರು.
ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕೆಸಿಡಿಸಿ ಮಾಜಿ ಅಧ್ಯಕ್ಷ ಡಾ. ಆನಂದಕುಮಾರ್ ಅವರು ಡಾ. ಜಿ ಪರಮೇಶ್ವರ್ ಅವರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಷ್ಠಾವಂತ ಕಾಂಗ್ರೆಸ್ ಕಟ್ಟಾಳು, ಶೋಷಿತ ಪರ ನಾಯಕರಾಗಿದ್ದು, ಅವರಿಗೆ ರಾಜಕೀಯದಲ್ಲಿ ಮತ್ತಷ್ಟು ಉನ್ನತ ಸ್ಥಾನಮಾನಗಳು ದೊರೆಯಲಿ ಎಂದರು.
Facebook
Twitter
LinkedIn
WhatsApp
Email
Print
Telegram