ಶ್ರೀ ಮಹಾಗಣಪತಿ ದೇವರ ರಥೋತ್ಸವ

ಸಾಗರ : ಪ್ರತಿ ಚಾಂದ್ರಮಾನ ಯುಗಾದಿಯಾದ ನಂತರ ಬರುವ ಚೈತ್ರ ಶುದ್ಧ ಚತುರ್ಥಿಯಂದು ಇತಿಹಾಸ ಪ್ರಸಿದ್ಧ ಸಾಗರದ ಗಣಪನ ಜಾತ್ರೆ ನಡೆಯುತ್ತದೆ. ಸುಮಾರು ನಾಲ್ಕು ಶತಮಾನದಷ್ಟು ದೊಡ್ಡ ಇತಿಹಾಸ ಇರುವ ಈ ಜಾತ್ರೆಯಲ್ಲಿ ರತ್ನ ಖಚಿತ ಸ್ವರ್ಣ ಕವಚ ಮಹಾಗಣಪತಿಯನ್ನು ರಥದ ಮೇಲೆ ಕುಳ್ಳಿರಿಸಿ ರಾಜ ಬೀದಿ ಉತ್ಸವ ಮಾಡಲಾಗುತ್ತದೆ.

ಕೆಳದಿ ಸಾಗರದ ರಕ್ಷಣೆ ಮತ್ತು ಅಭಿವೃದ್ದಿಗಾಗಿ 1623 ರಲ್ಲಿ ಕೆಳದಿಯ ಅರಸ ಹಿರಿಯ ವೆಂಕಟಪ್ಪ ನಾಯಕರಿಂದ ದಶಭುಜ ಮಹಾಗಣಪತಿಯ ಪ್ರತಿಷ್ಠಾಪನೆಗೊಂಡ ಬಳಿಕ ಪ್ರತಿವರ್ಷವೂ ಜಾತ್ರೆ ನಡೆಯುತ್ತಿದೆ.

Leave a Comment

Your email address will not be published. Required fields are marked *

Translate »
Scroll to Top