UPSC ಪರೀಕ್ಷೆ ಪಾಸ್ ಆಗಲು ಇಲ್ಲಿವೆ ನೋಡಿ ಟಿಪ್ಸ್​

ಯುಪಿಎಸ್‌ಸಿ ಪರೀಕ್ಷೆಗಳೆಂದರೆ ಸ್ಪರ್ಧಾರ್ಥಿಗಳಿಗೆ ದೂರದ ಬೆಟ್ಟವೇ ಸರಿ ಮನಸಲ್ಲಿ ಎಲ್ಲಿಲ್ಲದ ಭಯ ತಲೆಯಲ್ಲಿ ಕಾಡುವ ನೂರಾರು ಆಲೋಚನೆಗಳು ನಾವು ಪಾಸ್ ಆಗ್ತೀವ ಅನ್ನು ನಂಬಿಕೆನೇ ಇಲ್ಲದೆ ಬೇರೆಯವರ ಒತ್ತಾಯಕ್ಕೆ ಅರ್ಜಿ ಸಲ್ಲಿಸಿ ನಾನು ಪರೀಕ್ಷೆ ಬರೆಯುತ್ತೇನೆ ಎಂಬ ಕಾರಣಕ್ಕೆ ಪರೀಕ್ಷೆಯನ್ನು ಬರೆದು ಅನುತ್ತೀರ್ಣರಾಗಿ ನಂತರ ಇದು ನಮಗಲ್ಲ ಅಂತ ಯುಪಿಎಸ್ಸಿ ಯನ್ನು ಬಹುದೂರ ದುಡುವವರೇ ಹೆಚ್ಚು. ಇಂದಿನ ಯುವಕರಲ್ಲಿ ಯುಪಿಎಸ್ಸಿ ಯ ಬಗ್ಗೆ ಆಸಕ್ತಿ ಮೂಡಿ ಅವರು ಉತ್ತೀರ್ಣರಾಗಲು ಅವರಿಗೆ ಪ್ರೇರಣೆಯ ಮಹಾಪೂರವೇ ಬೇಕಾಗುತ್ತದೆ ಆದರೆ ಒಬ್ಬ ವಿದ್ಯಾರ್ಥಿ ಅಥವಾ ಅಭ್ಯರ್ಥಿ ನಾನು ಯುಪಿಎಸ್ಸಿ ಮಾಡಬಲ್ಲೆ ಎಂದು ಸ್ವಯಂ ಪ್ರೇರಿತವಾಗಿ ಸ್ಪೂರ್ತಿಗೊಂಡಾಗ ಹಾಗೂ ಈ ಕೆಳಗಿನ ಕೆಲವು ಸಲಹೆಗಳನ್ನು ಬಳಸಿಕೊಂಡಾಗ ನಿಜವಾಗಲೂ ಅವನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸುವುದು ಕಷ್ಟವೇನಲ್ಲ.

ಸಾಮಾನ್ಯವಾಗಿ ಯುಪಿಎಸ್‌ಸಿಯಂಥ ಪರೀಕ್ಷೆಗಳು ಹೆಚ್ಚಿನ ಪರಿಶ್ರಮವನ್ನು ಕೇಳುತ್ತವೆ. ವ್ಯಾಪಕವಾದ ಪಠ್ಯಕ್ರಮವನ್ನು ಒಳಗೊಂಡಂಥ ಈ ಪರೀಕ್ಷೆಗಳು ಕಠಿಣವಾದವುಗಳಾಗಿವೆ. ಅದಕ್ಕಾಗಿ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಯುಪಿಎಸ್‌ಸಿ (UPSC)  ಪರೀಕ್ಷೆಯ ಅಭ್ಯರ್ಥಿಗಳು ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುವಂಥ ಅಂಶಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

          ಸಕ್ರಿಯ ಕಲಿಕೆ : ನಿಮ್ಮ ನೆನಪನ್ನು ಹೆಚ್ಚಿಸಲು ಸಕ್ರಿಯ ಕಲಿಕೆಯ ತಂತ್ರಗಳ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಿ. ನಿಷ್ಕ್ರಿಯವಾಗಿ ಓದುವ ಅಥವಾ ಕೇಳುವ ಬದಲಾಗಿ ಸಾರಾಂಶ, ಇತರರಿಗೆ ಕಲಿಸುವುದು ಅಥವಾ ಫ್ಲ್ಯಾಷ್‌ಕಾರ್ಡ್‌ಗಳನ್ನು (Flashcard) ರಚಿಸುವಂತಹ ತಂತ್ರಗಳನ್ನು ಬಳಸಿ.

 

          ವಿಷುಯಲ್ ಅಂಶಗಳು ಬಳಸಿ:  ವಿಷಯಗಳನ್ನು ನೆನಪಿಟ್ಟುಕೊಳ್ಳಲು ವಿಷುಯಲ್ ಅಂಶಗಳು ಅಥವಾ ಚಿತ್ರಗಳು ಸಹಾಯ ಮಾಡುತ್ತವೆ. ಕಠಿಣವಾದ ಮಾಹಿತಿಯನ್ನು ಪ್ರತಿನಿಧಿಸಲು ರೇಖಾಚಿತ್ರಗಳು, ಮೈಂಡ್ ಮ್ಯಾಪ್‌ಗಳು ಮತ್ತು ಚಾರ್ಟ್‌ಗಳಂತಹ ದೃಶ್ಯ ಸಾಧನಗಳನ್ನು ಅಧ್ಯಯನದಲ್ಲಿ ಸೇರಿಸಿ. ಇದರಿಂದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

ಸಣ್ಣ ಭಾಗಗಳಾಗಿ ವಿಭಜಿಸಿ : ನೀವು ಓದಲು ಹೆಚ್ಚಿನ ವಿಷಯವನ್ನು ಹೊಂದಿದ್ದರೆ, ಅದನ್ನು ಸಣ್ಣ ಮತ್ತು ನಿರ್ವಹಿಸಬಹುದಾದ ಭಾಗಗಳಾಗಿ ವಿಭಜಿಸಿ. ಎಲ್ಲದರ ಮೇಲೆ ಕೇಂದ್ರೀಕರಿಸುವ ಬದಲು, ಒಂದೊಂದೇ ಭಾಗವನ್ನು ಸರಿಯಾಗಿ ಅಧ್ಯಯನ ಮಾಡಿ.

          ನೆನಪಿನ ಸಾಧನಗಳು: ಯುಪಿಎಸ್‌ಸಿ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತೊಂದು ತಂತ್ರವೆಂದರೆ ಪ್ರಾಸಗಳು, ಸಂಕ್ಷಿಪ್ತ ರೂಪಗಳು ಅಥವಾ ದೃಶ್ಯೀಕರಣದಂತಹ ಜ್ಞಾಪಕ ತಂತ್ರಗಳನ್ನು ಬಳಸುವುದಾಗಿದೆ.

          ರಿವಿಶನ್‌ ಮಾಡುವುದು:  ಓದಿದ್ದನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಉತ್ತಮ ವಿಧಾನವೆಂದರೆ ನೀವು ಹಿಂದೆ ಕಲಿತ ವಿಷಯಗಳನ್ನು ರಿವಿಶನ್‌ ಮಾಡುವುದಾಗಿದೆ. ಇದು ದೀರ್ಘಾವಧಿಯಲ್ಲಿ ನೆನಪಿಟ್ಟುಕೊಳ್ಳುವ ಪರಿಣಾಮಕಾರಿ ತಂತ್ರವಾಗಿದೆ.

 

          ಹಳೆಯ ಪ್ರಶ್ನೆ ಪತ್ರಿಕೆ  ಬಿಡಿಸುವುದು : ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ವಿಷಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ವಿಧಾನವು ಪರಿಣಾಮಕಾರಿಯಾಗಿದೆ.

ಪರಿಕಲ್ಪನೆಗಳನ್ನು ಗಟ್ಟಿಯಾಗಿ ವಿವರಿಸಿ: ಪರಿಕಲ್ಪನೆಯನ್ನು ನೀವೇ ಗಟ್ಟಿಯಾಗಿ ವಿವರಿಸುವುದು ಅಥವಾ ಇನ್ನೊಬ್ಬ ವ್ಯಕ್ತಿಗೆ ಕಲಿಸುವುದು ಬಹಳಷ್ಟು ಪ್ರಯೋಜನಕಾರಿ ಅಭ್ಯಾಸವಾಗಿದೆ.

          ಪರಿಕಲ್ಪನೆಗಳನ್ನು ಮೌಖಿಕವಾಗಿ ವ್ಯಕ್ತಪಡಿಸುವುದು ನಿಮ್ಮ ತಿಳುವಳಿಕೆಯನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಹಾಗೆಯೇ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ಸುಧಾರಿಸುತ್ತದೆ.

          ತಂತ್ರಜ್ಞಾನವನ್ನು ಬುದ್ಧಿವಂತಿಕೆಯಿಂದ ಬಳಸಿ: ಅಧ್ಯಯನದಲ್ಲಿ ತಂತ್ರಜ್ಞಾನದ ಸಹಾಯವನ್ನು ಪಡೆದುಕೊಳ್ಳಿ. ಇದು ಸಮಯವನ್ನು ಉಳಿಸುತ್ತದೆ. ನಿಮ್ಮ ಅಧ್ಯಯನ ಪ್ರಕ್ರಿಯೆಯನ್ನು ಹೆಚ್ಚಿಸಲು ಟಿಪ್ಪಣಿ-ತೆಗೆದುಕೊಳ್ಳುವಿಕೆ, ಫ್ಲ್ಯಾಷ್‌ಕಾರ್ಡ್‌ಗಳು ಮತ್ತು ಸಮಯ ನಿರ್ವಹಣೆಗಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್ ಉಪಕರಣಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಿ.

 

          ಟಿಪ್ಪಣಿ ಮಾಡುವುದು : ನೀವು ಅಧ್ಯಯನ ಮಾಡುವಾಗ, ಸಣ್ಣ ಟಿಪ್ಪಣಿಗಳನ್ನು ನೆನಪಿಟ್ಟುಕೊಳ್ಳಲು ಸಹಕಾರಿಯಾಗಿವೆ. ಪ್ರಮುಖ ಅಂಶಗಳನ್ನು ಸ್ಪಷ್ಟವಾಗಿ ಮತ್ತು ಸಂಕ್ಷಿಪ್ತವಾಗಿ ಬರೆಯುವುದರಿಂದ ನೆನಪಿನ ಜೊತೆಗೆ ಅವುಗಳನ್ನು ಅರ್ಥ ಮಾಡಿಕೊಳ್ಳಲೂ ಸುಲಭವಾಗುತ್ತದೆ.

ಅಣಕು ಪರೀಕ್ಷೆಗಳು: ನೀವು ನಿಜವಾದ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವಂತೆಯೇ ಅಣಕು ಪರೀಕ್ಷೆಯನ್ನು ಮಾಡಿ. ನಿಮ್ಮ ಸ್ಮರಣೆಯು ಎಷ್ಟು ಉತ್ತಮವಾಗಿದೆ ಮತ್ತು ಪರೀಕ್ಷೆಯ ಸಮಯದಲ್ಲಿ ನಿಮ್ಮ ಸಮಯವನ್ನು ನೀವು ಎಷ್ಟು ಚೆನ್ನಾಗಿ ಬಳಸಬಹುದು ಎಂಬುದನ್ನು ನೋಡಲು ಇದರಿಂದ ಸಾಧ್ಯವಾಗುತ್ತದೆ.

          ಹೀಗೆ ಮೇಲಿನ ಸಲಹೆಗಳೊಂದಿಗೆ ಒಂದಿಷ್ಟು ನಿರಂತರ ಪ್ರಯತ್ನ ಇದ್ದರೆ ಯುಪಿಎಸ್ಸಿಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಇದರೊಂದಿಗೆ ನಿಮ್ಮ ಹಿರಿಯರ ಅನುಭವಿಗಳ ಮಾತುಗಳನ್ನು ಪಾಲಿಸಿ  ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಾಗ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಯು ತಾನು ಪರೀಕ್ಷೆಯನ್ನು ಪಾಸ್ ಮಾಡುತ್ತೇನೆ ಎಂಬ ಸ್ಪಷ್ಟವಾದ ಮನಸ್ಸಿನಿಂದ ಗುರಿಯಿಂದ ಏಕಾಗ್ರತೆಯಿಂದ ನಿರಂತರ ಅಭ್ಯಾಸ ಮಾಡಿದರೆ ಯಾವುದು ಅಸಾಧ್ಯವಾದುದಿಲ್ಲ ಎಲ್ಲವೂ ಸಾಧ್ಯ.

 

ವೆಂಕಟೇಶ್ ಬಾಬು ಎಸ್ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top