ಜೋರು ಮಳೆ : ಕೊಚ್ಚೆ ನೀರಿನಿಂದ ತುಂಬಿ ಹರಿದ ರಸ್ತೆಗಳು

ಬಳ್ಳಾರಿ: ಬಳ್ಳಾರಿ ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಯಲ್ಲಿ ಸೋನೆ ಮಳೆ ಸುರಿಯುತ್ತಿತ್ತು, ನಿನ್ನೆಯಿಂದ ಎಡಬಿಡದೆ ಸೋನೆ ಮಳೆ ಸುರಿಯುತ್ತಿದ್ದು, ನಗರದಲ್ಲಿ ತಂಪಾದ ವಾತಾವರಣ ಇದ್ದುದು ಸಂತಸದ ವಿಷಯವೇ ಸರಿ. ಆದರೆ ಇಂದು ಮಧ್ಯಾಹ್ನ ಸುರಿದ ಜೋರಾದ ಮಳೆಗೆ ಕೊಳಚೆ ನೀರು ರಸ್ತೆ ಮೇಲೆ ನುಗ್ಗಿ ಕೆಲಕಾಲ ಜನರು ಪರದಾಡುವಂತಾಗಿತ್ತು.

ನಗರದ ವಿವಿಧೆಡೆ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿರುವ ದೃಶ್ಯಗಳು ಕಂಡು ಬಂದರೂ ಮಳೆ ನೀರಿನ ಜೊತೆಯಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದವು. ಕೆಲ ಕಡೆಗಳಲ್ಲಿ  ತಗ್ಗು ಗುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಮಳೆ ನೀರಿನಿಂದ ಪ್ರಮುಖ ರಸ್ತೆಗಳಲ್ಲಿ ಕೆಲ ಕಾಲ ಟ್ರಾಫಿಕ್ ಜಾಂ ಕೂಡ ಉಂಟಾಗಿತ್ತು.  ಕೆಳ ಸೇತುವೆಗಳಲ್ಲಿ ನೀರು ನಿಂತುಕೊಂಡು ಪಾದಾಚಾರಿಗಳಿಗೆ ಸಮಸ್ಯೆ ಉಂಟಾಗಿತ್ತು.

 

          ನಗರದ ಇನ್ಫೆಂಗಟ್ರಿ ರಸ್ತೆಯಲ್ಲಿರುವ ವಾಸವಿ ಶಾಲಾ ಮುಂಭಾಗ ರಸ್ತೆಯಲ್ಲಿ ನದಿಯಂತೆ ನೀರು ಹರಿದಾಡುತ್ತಿತ್ತು. ಈ ರಸ್ತೆಯಲ್ಲಿ ಓಡಾಡುವ ಬಸ್ಗಲಳು, ಲಾರಿ, ಕಾರ್‌ಗಳು ಬಂದರೆ ಅಕ್ಕ ಪಕ್ಕದಲ್ಲಿ ಹೋಗುವ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆ ಉಂಟಾಯಿತು. ಕೆಲ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಚರಂಡಿ ನೀರು ಸಮೇತ ಮಳೆ ನೀರು ಹರಿದಾಡಿದ್ದು, ಕೆಲ ಕಾಲ ಜನರು ದುರ್ವಾಸನೆಯಿಂದ ಪರದಾಡಬೇಕಾಯಿತು.  

ನಗರದ ರಾಯಲ್ ವೃತ್ತ, ಇಂದಿರಾ ಗಾಂಧಿ ವೃತ್ತ, ಕೋಲಾಚಲಂ ರಸ್ತೆ, ಬೋಯಗೇರಿ ವೃತ್ತದ ಬಳಿ ರಸ್ತೆಯ ಮಧ್ಯದಲ್ಲಿಯೇ ಬೃಹತ್ತಾದ ತಗ್ಗುಗಳಿದ್ದು, ಅದರಲ್ಲಿ ಮಳೆ ನೀರು ತುಂಬಿಕೊಂಡು ಸರಿಯಾಗಿ ರಸ್ತೆ ಕಾಣದೆ ದ್ವಿಚಕ್ರ ವಾಹನ ಸವಾರರು ಪರದಾಡಿದರು. ರಸ್ತೆಯ ಮಾಹಿತಿ ಇದ್ದವರು ತಗ್ಗು ಗುಂಡಿಗಳಿಂದ ಪಕ್ಕಕ್ಕೆ ಹೋದರೆ ರಸ್ತೆಯ ಮಾಹಿತಿ ಇಲ್ಲದವರು, ಸಮಸ್ಯೆ ಅನುಭವಿಸಬೇಕಾಯಿತು.

 

          ಅದೇ ರೀತಿ ಅಂಜಿನಪ್ಪ ವೃತ್ತದಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರಸರಣದಲ್ಲಿ ಕಿಡಿಕಾರುತ್ತಿದೆ. ಗಾಳಿ ಮಳೆ ಬಂದಾಗಲೆಲ್ಲಾ ಇದೇ ರೀತಿ ವಿದ್ಯುತ್ ವೈರ್ಗಳಲ್ಲಿ ಕಿಡಿಕಾರುತ್ತಿದ್ದು, ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ಬಗ್ಗೆ ಜೆಸ್ಕಾ ಅಧಿಕಾರಿಗಳು ಗಮನ ಹರಿಸಬೇಕಿದೆ. ಅದೇ ರೀತಿ ನಗರದ ಪ್ರಮುಖ ರಸ್ತೆಗಳಲ್ಲಿರುವ ತಗ್ಗು ಗುಂಡಿಗಳ ಬಗ್ಗೆ ಸಂಬಂಧಪಟ್ಟ  ಅಧಿಕಾರಿಗಳು ಗಮನ ಹರಿಸಬೇಕೆಂಬುದು ಕನ್ನಡನಾಡು ವಾಹಿನಿಯ ಕಳಕಳಿಯಾಗಿದೆ.

Facebook
Twitter
LinkedIn
Email
WhatsApp
Telegram

Leave a Comment

Your email address will not be published. Required fields are marked *

Translate »
Scroll to Top