ನವದೆಹಲಿ, ಡಿ.೨೪- ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಇಂದು ತಮ್ಮ ವೃತ್ತಿ ಬದುಕಿಗೆ ವಿದಾಯವನ್ನು ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ೨೩ ವರ್ಷಗಳ ಸುಧೀರ್ಘ ಕ್ರಿಕೆಟ್ ಪಯಣದಲ್ಲಿ ಎಲ್ಲವನ್ನೂ ನೀಡಿರುವ ಕ್ರಿಕಟಿಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ. ೧೦೩ ಟೆಸ್ಟ್ ,೨೩೬ ಏಕದಿನ ಹಾಗೂ ೨೮ ಟಿ-೨೦ ಪಂದ್ಯಗಳನ್ನು ಆಡಿದ್ದಾರೆ. ಇದರ ಜತೆಗೆ ೧೬೩ ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
೧೯೯೮ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಲೋಕಾಪರ್ಣೆ ಮಾಡಿದ ಟರ್ಬಿನೇಟರ್, ಭಾರತಕ್ಕೆ ಹಲವು ಗೆಲುವುಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಟೆಸ್ಟ್ನಲ್ಲಿ ೪೧೭, ಏಕದಿನ ೨೬೯ ಹಾಗೂ ಟಿ-೨೦ ಅಂತಾರಾಷ್ಟ್ರೀಯ ಕ್ರಿಕಟ್ ನಲ್ಲಿ ೨೮ ವಿಕೆಟ್ ಗಳನ್ನು ಗಳಿಸಿದ್ದಾರೆ. ೮೪ ರನ್ ನೀಡಿ ಎಂಟು ವಿಕೆಟ್ ಪಡೆಯುವ ಮುಖೇನ ಟೆಸ್ಟ್ ಕ್ರಿಕೆಟ್ ನಲ್ಲಿ ಸರ್ವಶ್ರೇಷ್ಠ ಸಾಧನೆ ಮಾಡಿದ್ದಾರೆ ಹರ್ಭಜನ್. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಜತೆ ಇತ್ತೀಚೆಗೆ ಫೋಟೊ ತೆಗೆಸಿಕೊಳ್ಳುವ ಮೂಲಕ ಹರ್ಭಜನ್ ರಾಜಕೀಯ ಪ್ರವೇಶಿಸುವ ಸುಳಿವೊಂದನ್ನು ನೀಡಿದ್ದರು.