ಬೆಂಗಳೂರು,ಜನವರಿ, 14 : ರೈತರು ತಮ್ಮ ಇಡೀ ಜೀವನವನ್ನು ಬೇರೆಯವರಿಗಾಗಿ ತ್ಯಾಗ ಮಾಡುತ್ತಿದ್ದಾರೆ. ಅವರ ಬೆಳೆ ಉತ್ತಮವಾಗಲಿ. ಬದುಕು ಹಸನಾಗಲಿ. ಅವರು ಆರೋಗ್ಯದಿಂದಿರಲಿ ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ತುಂಬು ಹೃದಯದಿಂದ ಹಾರೈಸುತ್ತೇನೆ. ಪುಣ್ಯವಶಾತ್ ಕೋವಿಡ್ ಮಹಾಮಾರಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಹರಡಿಲ್ಲ. ಆದರೆ ರೈತರು ಮುನ್ನೆಚ್ಚರಿಕೆ ವಹಿಸಬೇಕು. ಈಗಿನಿಂದಲೇ ಅವರು ಪೌಷ್ಟಿಕ ಆಹಾರ ಸೇವಿಸುತ್ತಾ ಈ ಸೋಂಕು ಎದುರಿಸಲು ಸಿದ್ಧರಾಗಬೇಕು. ಅವರ ಬೆಳೆಗೆ ಸರಿಯಾದ ಬೆಲೆ ನಿಗದಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅವರ ಬದುಕು ಹಸನಾಗಲಿ ಎಂದು ಆಶಿಸುತ್ತೇನೆ.

ಪಾದಯಾತ್ರೆಯಿಂದ ಕಾಂಗ್ರೆಸ್ ಹಿಂದೆ ಸರಿದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಾದಯಾತ್ರೆ ಬಗ್ಗೆ ಬಿಜೆಪಿ ನಾಯಕರು ಹತಾಶೆಯಿಂದ ಮಾತಾಡುತ್ತಿದ್ದಾರೆ, ಮಾತನಾಡಲಿ. ಇವತ್ತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ, ನ್ಯಾಯಾಲಯದ ಅಭಿಪ್ರಾಯ ಬರಲಿ ನಂತರ ಮಾತನಾಡೋಣ’ ಎಂದರು.