ಕನ್ನಡನಾಡು ವಾರ್ತೆ ಪಾವಗಡ, ಡಿ.೧೯: ಹನುಮದ್ ವ್ರತ ಪ್ರಯುಕ್ತ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಎರಡು ದಿನಗಳಿಂದ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಲಾಗಿತ್ತು. ಎರಡನೆ ದಿನವಾದ ಇಂದು ತೈಲಭಿಷೇಕ, ತುಪ್ಪದ ಅಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು. ಶ್ರೀ ಆನಂದ ಚಾರ್ಯ ಗುಮಾಸ್ತ ವಿದ್ವಾನ್ ಅವರು ಮದ್ವಾ ಸಿದ್ದಾಂತ ಪ್ರಚಾರ ಮಾಡುವ ಇವರು ಇಂದು ಪ್ರವಚನ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಪ್ರವಚನದಲ್ಲಿ ಶ್ರೀಗಳು ಪೂಜೆ ಮಾಡಲು ನಿರ್ದಿಷ್ಟ ಪ್ರದೇಶ, ಯೋಗ, ಶ್ರೇಷ್ಠ ಕಾಲ ಇರಬೇಕು. ಈ ಕಾಲದಲ್ಲಿ ನಡೆಸುವ ಪೂಜೆಗಳಿಂದ ಮೋಕ್ಷ ಸಿಗುತ್ತದೆ. ಇತ್ತೀಚಿಗೆ ಅಷ್ಟೇ ಹನುಮ ಜಯಂತಿ ಆಚರಣೆ ಮಾಡಲಾಗಿದ್ದು, ವಾಯು ದೇವರಿಗೆ ಇರುವ ಹನುಮದ್ ವ್ರತ ವನ್ನು ಆಚರಣೆ ಮಾಡುವುದು ಪುಣ್ಯದ ಕೆಲಸ ಆಗಿದೆ ಎಂದು ತಿಳಿಸಿದರು.

ವಾಯು ದೇವರಿಗೆ ಶ್ರಮ ಎಂಬುದೇ ಇಲ್ಲ. ಸಂಜೀವಿನಿ ಪರ್ವತವನ್ನೇ ಎತ್ತುಕೊಂಡು ಬಂದ ವಾಯು ದೇವರು ಅನಯಾಸವಾಗಿ ತಂದ ಸ್ವಾಮಿಗೆ ಯಾವುದೇ ಶ್ರಮ ಎಂಬುದೇ ಕಂಡು ಬಂದಿಲ್ಲ ವಂತೆ. ಅಂತಹ ಶ್ರೇಷ್ಠವಾದ ವಾಯುದೇವರ ಪೂಜೆ ಸಲ್ಲಿಕೆ ಮಾಡುವುದು ನಮ್ಮ ಸುಕೃತವೇ ಸರಿ ಎಂದು ತಿಳಿಸಿದರು. ಇನ್ನೂ ಶ್ರೀ ಹನುಮ ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಪೂಜೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಅರ್ಚಕರಾದ ಶ್ಯಾಮ್ ಸುಂದರ್ ಅವರ ಕುಟುಂಬ ಸೇರಿದಂತೆ ಇನ್ನಿತರರು ಪೂಜೆಯಲ್ಲಿ ಭಾಗವಹಿಸಿದ್ದರು.