ವಾಯವ್ಯ ಪದವೀಧರರ ಚುನಾವಣೆಗೆ ಹನಮಂತ ನಿರಾಣಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಪದವೀಧರರ ಕ್ಷೇತ್ರದಿಂದ ವಿಧಾನಪರಿಷನ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಹನಮಂತ ನಿರಾಣಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯಕ ನಾವಣಾಧಿಕಾರಿ ವಿ. ಪಾಟೀಲ ಅವರಿಗೆ 2 ಸೆಟ್ ನಾಮಪತ್ರಗಳನ್ನು ಶುಕ್ರವಾರ ಸಲ್ಲಿಸಿದರು. ಮನೆಗೆ ರಾಜ್ಯಸಭಾ ಸದಸ್ಯ ಆದ ಕರಾಡಿ, ಮುಖದ ಆರ್.ಎಸ್. ಮುತಾಲಿಕ್, ಪಕ್ಷದ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಮೊದಲಾದವರು ಸಾಥ್ಪ ಕ್ಷದ ನಾಯಕರು ಹಾಗೂ ಕಾರ್ಯಕರ್ತರ ಆಶೀರ್ವಾದದಿಂದ ಬಿಜೆಪಿ ಅಭ್ಯರ್ಥಿಯಾಗಿ ಒಳ್ಳೆಯ ಮುಹುರ್ತ ಸಿಕ್ಕಿದ್ದರಿಂದ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದ್ದೇನೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸೇರಿ ಮೇ 26ರಂದು ಮತ್ತೊಂದು ಜೀಶ್ ನಾಮಪತ್ರ ಸಲ್ಲಿಸುತ್ತೇವೆ. ಪಕ್ಷ 2ನೇ ಬಾರಿಗೆ ಅವನನ ನೀಡಿದೆ. ಕ್ಷೇತ್ರದಾದ್ಯಂತ ಸಂಚರಿಸಿ ಎಲ್ಲರ ವಿಶ್ವಾಸ ಗಳಿಸಿದ್ದೇನೆ ಮತ್ತೊಮ್ಮೆ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ’ ಎಂದು ಹಣಮಂತ ಹೇಳಿದರು.

ಕೇಂದ್ರ ಸಚಿವ ಪ್ರರಾದ ಜೋಶಿ ನೇತೃತ್ವದಲ್ಲಿ ಮೇ 21ರಂದು ನಗರದಲ್ಲಿ ಪಕ್ಷದ ಎಲ್ಲ ಹಿರಿಯರು, ನಾಯಕರ ಸಭೆ ಕರೆಯಲಾಗಿದೆ, ಚುನಾವಣೆ ಕುರಿತಂತೆ ಸಾರೀ ಚರ್ಚೆ ನಡೆಸಲಾಗುವುದು. ಪಕ್ಷದಲ್ಲಿ ಭಿನ್ನಮತವೇನಿಲ್ಲ ಜೋಶಿ ನೇತೃತ್ವದ ಸಭೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ನಾಯಕರೆಲ್ಲರೂ ಭಾಗವಹಿಸಲಿದ್ದಾರೆ. ಸಚಿವರು, ಶಾಸಕರು ಹಾಗೂ ಸಂಸದರು ಕೂಡ ಬರುತ್ತಾರೆ ಎಂದು ಪ್ರತಿಕ್ರಿಯಿಸಿದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಕ್ಷದ ಹಿರಿಯ ನಾಯಕ ನನಗೆ ವೈಯಕ್ತಿಕವಾಗಿ ಯಾಳ ಅವರೊಂದಿಗೆ ಏನಾದರೂ ಇರಬಹುದು. ಆದರೆ, ರಾಜಕೀಯವಾಗಿ ಅವರು ನಮ್ಮ ನಾಯಕರು, ಬಿಜೆಪಿಯಲ್ಲಿ ಯಾವುದೇ ರೀತಿಯ ಬಣ ರಾಜಕಾರಣವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ

ಈರಣ್ಣ ಕಡಾಡಿ ಮಾತನಾಡಿ, ಕ್ಷೇತ್ರಕ್ಕೆ ಸಂಬಂಧಿಸಿದವರೆಲ್ಲರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ, ಬಾರದಿದ್ದವರು ಚುನಾವಣೆ ಕಾರ್ಯಕ್ಕೆ ಅಡ್ಡಿಯಾಗದಂತೆ ಕಾರ್ಯತಂತ್ರ ಮಾಡಲಾಗುತ್ತದೆ ಎಂದರು. ‘ಬಿಜೆಪಿಯಲ್ಲಿ ಭಿನ್ನಮತವಾದರೆ ಲಾಭ ಪಡೆಯಬೇಕೆಂದು ಕಾಂಗ್ರೆಸ್‌ನವರು ಬಯಸುತ್ತಿದ್ದಾರೆ. ಸ್ವಸಾಮರ್ಥ್ಯದ ಆಧಾರ ಹಾಗೂ ಹೋರಾಟರ ಮೇಲೆ ಅವರು ಪಕ್ಷ ಕಟ್ಟಿಕೊಳ್ಳಲಿ, ನಮ್ಮ ಉಸಾಬರಿ ಅವರು ನೋಡುವುದು ಬೇಡ’ ಎಂದು ಟೀಕಿಸಿದರು.

Leave a Comment

Your email address will not be published. Required fields are marked *

Translate »
Scroll to Top