ರೀಲ್ಸ್ ಮಾಡಿ ಬಹುಮಾನ ಗೆಲ್ಲಿ
ಬೆಂಗಳೂರು: ರಾಜ್ಯದ ಕುಟುಂಬದ ಯಜಮಾನಿಯರಿಗೆ ಸಂತಸದ ಸುದ್ಧಿ.. ‘ಗೃಹಲಕ್ಷ್ಮೀ’ ಯೋಜನೆಯ ಫಲಾನುಭವಿಗಳಾದ ಯಜಮಾನಿಯರು ರೀಲ್ಸ್ ಮಾಡಿ ಬಹುಮಾನ ಗೆಲ್ಲಲು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅತ್ಯುತ್ತಮ ಅವಕಾಶ ಕಲ್ಪಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯು ಜಾರಿಗೆ ಬಂದು ಇಲ್ಲಿಗೆ ಒಂದು ವರ್ಷವಾಗಿದೆ. ಈ ಸಂದರ್ಭದಲ್ಲಿ ಕುಟುಂಬದ ಎಲ್ಲ ಯಜಮಾನಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಭಾಶಯ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಯಜಮಾನಿಯರಿಗೆ ಒಂದು ಬಹುಮಾನವನ್ನೂ ಘೋಷಿಸಿದ್ದಾರೆ.
ಇಲ್ಲಿಯವರೆಗೆ ಗೃಹಲಕ್ಷ್ಮೀ ಫಲಾನುಭವಿಗಳಾದ ತಮ್ಮ ಜೀವನದಲ್ಲಿ ಏನೆಲ್ಲ ಬದಲಾವಣೆಯನ್ನು ಈ ಒಂದು ವರ್ಷದಲ್ಲಿ ತಂದಿದೆ ಎನ್ನುವುದನ್ನು ಯಜಮಾನಿಯರು ಹಂಚಿಕೊಳ್ಳಲು ಸಚಿವರು ಕೋರಿದ್ದಾರೆ.
ರೀಲ್ಸ್ ಮಾಡಿ
ಸಾಮಾಜಿಕ ಜಾಲ ಜಾಲತಾಣಗಳಾದ ಯುಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಶೇರ್ ಮಾಡುವ ಮೂಲಕ ಅದನ್ನು ಹಂಚಿಕೊಳ್ಳುವಂತೆ ಕೋರಿದ್ದಾರೆ.
ಯಾವ ಯಜಮಾನಿಯರು ಮಾಡಿದ ರೀಲ್ಸ್ ಗೆ ಹೆಚ್ಚು ವಿವರ್ಸ್ ಬಂದಿದೆಯೋ ಅಂತಹ ಯಜಮಾನಿಯರಿಗೆ ಒಂದು ಬಹುಮಾನ ಘೋಷಿಸಿದ್ದಾರೆ. ಇಲ್ಲಿಂದ ಒಂದು ತಿಂಗಳು ಅಂದರೆ ಸೆಪ್ಪಂಬರ್ 30ನೇ ತಾರೀಖಿನವರೆಗೆ ಯಜಮಾನಿಯರು ತಮ್ಮ ರೀಲ್ಸ್ ಗಳನ್ನು ಯುಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಹಂಚಿಕೊಳ್ಳಬೇಕಿದೆ. ಜಾಸ್ತಿ ವಿವರ್ಸ್ ಸಿಕ್ಕಿದ ಯಜಮಾನಿಯರಿಗೆ ಸಚಿವರು ವೈಯಕ್ತಿಕವಾಗಿ ಒಂದು ಬಹುಮಾನವನ್ನು ನೀಡಲಿದ್ದಾರೆ.
ಮೊದಲ 50 ಯಜಮಾನಿಯರ ರೀಲ್ಸ್ ಹಾದಿಯನ್ನು ಎದುರು ನೋಡುತ್ತಿದ್ದೇನೆ; ಈ ಒಂದು ಗೃಹಲಕ್ಷ್ಮೀ ಯೋಜನೆಯಿಂದ ಜೀವನದಲ್ಲಿ ಆದ ಬದಲಾವಣೆಯನ್ನು ನಮ್ಮೆಲ್ಲ ಕರ್ನಾಟಕದ ಜನರ ಮುಂದೆ ಹಂಚಿಕೊಳ್ಳಬೇಕೆಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗೃಹಲಕ್ಷ್ಮೀ ಯೋಜನೆಯ ಎಲ್ಲ ಯಜಮಾನಿಯರಲ್ಲಿ ಮನವಿ ಮಾಡಿದ್ದಾರೆ.