ಎನ್‍ಇಪಿ ರದ್ದುಗೊಳಿಸುವ ಸರ್ಕಾರದ ನಿರ್ಧಾರ ಖಂಡನೀಯ : ಎಬಿವಿಪಿ

 ಬಳ್ಳಾರಿ: ಸ್ವತಂತ್ರ ಭಾರತದ ಶಿಕ್ಷಣ ಪದ್ಧತಿಯ ಆರಂಭದಿಂದಲೂ ಬ್ರಿಟಿಷ್ ವಸಾಹತು ಶಿಕ್ಷಣ ಪದ್ಧತಿಯ ಮುಂದುವರಿದ ಭಾಗವಾಗಿದೆ. ಅದು ಜಡ್ಡು ಹಿರರು ಪರಿವರ್ತನ ರಹಿತವಾಗಿ ಹಲ ರಾಜ್ಯವಾಗಿದೆ, ಭಾರತೀಯತೆಯ ಅಂಶವನ್ನು ಕಳೆದುಕೊಂಡು ಬ್ರಿಟಿಷ್ ಗುಲಾಮಗಿರಿಯ ಪಳೆಯುಳಿಕೆಯಾಗಿದೆ ಎಂಬ ಮುಂತಾದ ಟೀಕೆಗಳನ್ನು ಎದುರಿಸುತ್ತಲೇ ಬಂದಿದೆ. ಆದರೆ, ಪ್ರಸ್ತುತ ಕೇಂದ್ರ ಸರ್ಕಾರವು ಈ ಕುರಿತು ಕಳೆದ ಗಂಭೀರವಾದ ನಿಲುವಿನಿಂದ ಹಾಗೂ ದೃಢ ನಿರ್ಧಾರದಿಂದ ಈ ಎಲ್ಲಾ ಟೀಕೆಗಳಿಗೆ ಉತ್ತರವಾದ ಹಾಗೂ ಈ ಕೊರತೆಗಳಿಂದ ಮುಕ್ತವಾಗಿರುವಂತದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP 2020) ರೂಪಿಸಿದ್ದು ಪ್ರಶಂಸಾರ್ಹವಾಗಿದೆ. ಅಲ್ಲದೆ, ಇಡೀ ದೇಶದಲ್ಲಿ ನಮ್ಮ ಕರ್ನಾಟಕವು, ಅದನ್ನು ಮೊದಲ ಬಾರಿಗೆ 2020-2021 ರಲ್ಲಿ ಜಾರಿಗೊಳಿಸಿದ ರಾಜ್ಯವಾಗಿದೆ ಎಂಬ ಹೆಮ್ಮೆಗೂ ಪಾತ್ರವಾಗಿದೆ. ಇಂತಹ ಶಿಕ್ಷಣ ನೀತಿ ಜಾರಿಗೊಳ್ಳುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ಶಿಕ್ಷಣ ವಿರೋಧಿಯಾಗಿದೆ. ಅಲ್ಲದೆ ಪ್ರರ್ವಾಗ್ರಹ ಪೀಡಿತವಾದುದು, ರಾಜಕೀಯ ಪ್ರೇರಿತವಾದುದು, ರಾಜ್ಯದ ವಿದ್ಯಾರ್ಥಿಗಳ ಹಿತಕ್ಕೆ ಮಾದಕವಾದುದು ಹಾಗಾಗಿ ಇದನ್ನು ಎಬಿವಿಪಿ ಖಂಡಿಸುತ್ತದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ಮನವಿ ಪತ್ರದಲ್ಲಿ ತಿಳಿಸಿದೆ. 

NEP ಯನ್ನು ಕೇಂದ್ರ ಸರ್ಕಾರ ಕೇವಲ ತನ್ನ ಮರ್ಜಿಯಂತೆ ರೂಪಿಸಿದ್ದಲ್ಲ, ದೇಶಾದ್ಯಂತ ಶಿಕ್ಷಣ ತಂದು ವಿವಿಧ ಸ್ವರಗಳಲ್ಲಿ ಶಿಕ್ಷಣ ರಂಗದ ಎಲ್ಲಾ ಬಾರಸ್ಥರ ಜೊತೆಗೆ ನಿರಂತರ – ಚರ್ಚೆ ನಡೆಸಿ ತಯಾರಿಸಿದ ನೀತಿ ಇದಾಗಿದೆ. (ಈಗ ಇದನ್ನು ವಿರೋಧಿಸುವವರು ಆಗಿನ ಚಿಂತನ – ಮಂತನದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನೇಕೆ ನೀಡಿರಲಿಲ್ಲ ?) ಈಗಿನ, NEP ಯು ಮೊದಲ ಬಾರಿಗೆ ವಿದ್ಯಾರ್ಥಿ ಕೇಂದ್ರಪರವಾಗಿದ್ದಾ ಬಹು ಶಿಸ್ತೀಯ ಅಧ್ಯಯನಕ್ಕೆ, ಕೌಶಲ್ಯಾಧಾರಿತ ಶಿಕ್ಷಣಕ್ಕೆ, ಭಾರತದ ಬಹುಭಾಷಿಕ ಹಾಗೂ ಸಾಂಸ್ಕೃತಿಕ ಬಹುತ್ವಕ್ಕೆ, ಪ್ರಾಂತೀಯ ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಸೂಕ್ತ ಮಾನ್ಯತೆ ಹಾಗೂ ಪ್ರಾಮುಖ್ಯ ನೀಡಿ ರೂಪಿಸಿರುವಂತಹದಾಗಿದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

 

NIP ಬಗೆಗಿನ ವಿರೋಧ ಏತಕ್ಕಾಗಿ? ಯಾವ ಶೈಕ್ಷಣಿಕ ಹಾಗೂ ತರ್ಕಬದ್ಧ ಕಾರಣಗಳಿಗಾಗಿ? ಈಗ ಜಾರಿಯಲ್ಲಿರುವ NEP ಬಗ್ಗೆ, ಅದರ ಸಾಧಕ-ಭಾದಕಗಳ ಬಗ್ಗೆ ಸೂಕ್ತ ವೇದಿಕೆಗಳಲ್ಲಿ ಚರ್ಚಿಸದೆ, ಆ ಕುರಿತು ಶಿಕ್ಷಣ ತಜ್ಞರ ಸೆಮಿನಾರ್ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡದೆ ಅದರ ರದ್ದತಿಯ ಘೋಷಣೆ ಅದೆಷ್ಟು ಸರಿ. NEP ಯ ರದ್ದತಿ ರಾಜಕೀಯ ಸೇಡು ತೀರಿಸುತ್ತಿರುವ ಅಸ್ತ್ರವಾಗಿದೆಯೇ ? ಹಾಗಿಲ್ಲವಾದಲ್ಲಿ ಅದನ್ನು ರದ್ದುಗೊಳಿಸುವ ತಿರ್ಮಾನವನ್ನು ಮೊದಲೇ ಪ್ರಕಟಿಸಿ, ಆನಂತರ, ರಾಜ್ಯದ ಉಪಕುಲಪತಿಗಳ ಸಭೆ ಕರೆದು ಅಭಿಪ್ರಾಯ ಕೇಳುವುದು… (ವ್ಯಕ್ತಿಯೋರ್ವನಿಗೆ ಮೊದಲೇ ಶಿಕ್ಷೆ ವಿಧಿಸಿ ಅನಂತರ ಅವನ ಅಪರಾಧಗಳೇನು ಎಂದು ಹುಡುಕುವ ಪ್ರಯತ್ನ ಮಾಡಿದಂತಲ್ಲವೇ?) ‘ಚುನಾವಣಾ ಪ್ರಣಾಳಿಕೆಯಲ್ಲಿಯೇ NEP ರದ್ದತಿ ಬಗ್ಗೆ ಹೇಳಿದ್ದೇವೆ ಎನ್ನುವವರು ಯಾವ ಯಾವ ಶಿಕ್ಷಣ ತಜ್ಞರ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಂಡಿರುವಿರಿ? NEP ಆಧಾರದ ಶಿಕ್ಷಣದಲ್ಲಿ, ಐ.ಐ.ಟಿ, ಐ.ಐ.ಎಂ, ಎ.ಐ.ಎಸ್ ಸಿ, ಕೇಂದ್ರೀಯ ವಿ.ವಿಗಳು ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ಎಲ್ಲೆಡೆಯ ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ, ಶಿಕ್ಷಣ ದೊರೆಯಲಾರಂಭಿಸಿದಾಗ ಕರ್ನಾಟಕದ ವಿದ್ಯಾರ್ಥಿಗಳು ಎಲ್ಲಿ ಹೋಗಬೇಕು ಏನು ಮಾಡಬೇಕು? ಅವರ ಸ್ಥಿತಿ ತ್ರಿಶಂಕುವಿನ ಸ್ಥಿತಿಯೇ? NEP ರದ್ದತಿಯ ನಿಲುವು ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡುವುದಿಲ್ಲವೇ?  ಎಲ್ಲಕ್ಕಿಂತ ಮುಖ್ಯವಾಗಿ, NEP ಯನ್ನು ರದ್ದುಗೊಳಿಸುವನೆಂದು ಹೇಳಿಕೊಳ್ಳುತ್ತಿರುವವರು ಅದನ್ನು ರೂಪಿಸಿದವರಾ? ಜೊತೆಯಲ್ಲಿ ಚರ್ಚಿಸಿ – ನಂತರ ತಿರ್ಮಾನಿಸುವ ಸವಾಲನ್ನೇ ಸ್ವೀಕರಿಸುತ್ತಿಲ್ಲ? ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪ್ರಶ್ನೆಗಳ ಸುರಿಮಳೆಗೈದು ಆಗ್ರಹ ವ್ಯಕ್ತಪಡಿಸಿದೆ.

ಕರ್ನಾಟಕದ ಪ್ರಸಕ್ತ ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತ ಸಂಕುಚಿತತೆಗಳಿಗೆ ಒಳಗಾಗದೆ, ಶಿಕ್ಷಣವನ್ನು ರಾಜಕೀಯ ಸ್ವಾರ್ಥ ಸಾಧನೆಯ ವಸ್ತುವಾಗಿಸದೆ, ಈಗಿನ NEP ಯನ್ನು ಅದರ ಗುಣಾಧಾರದಲ್ಲಿ ವಿರುದ್ಧ ಶೈಕ್ಷಣಿಕ ದೃಷ್ಟಿಯಿಂದ ಪರಾಮರ್ಶನ ನಡೆಸಬೇಕೆಂದು, ಅದರಲ್ಲಿ ವಾಸ್ತವಿಕವಾಗಿಯೂ ಸಣ್ಣ-ಪುಟ್ಟ ಕೊರತೆಗಳು ಹಾಗೂ ದೋಷಗಳು ಕಂಡು ಬಂದಲ್ಲಿ ಅವುಗಳನ್ನು ವಿದ್ಯಾರ್ಥಿಗಳ ಹಿತದ ಹಿನ್ನೆಲೆಯಲ್ಲಿ ಸರಿಪಡಿಸಿಕೊಂಡು NEP ವಿರೋಧದ ತನ್ನ ನಿಲುವನ್ನು ಕೈಬಿಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

 

ಈ ಸಂದರ್ಭದಲ್ಲಿ ಎಬಿವಿಪಿ ಬಳ್ಳಾರಿ ನಗರ ಕಾರ್ಯದರ್ಶಿ ಶ್ರೀನಿವಾಸ ಸೇರಿದಂತೆ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಕಳುಹಿಸಿಕೊಡಲಾಯಿತು. 

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top