ಕೊಪ್ಪಳ,ಮಾ,9 : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೊಪ್ಪಳ ಇವರಿಗೆ ೨೦೧೮ ಮತ್ತು ೨೦೧೯ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಲ್ಲಿಸಿದ ರೈತ ಫಲಾನುಭವಿಗಳು ಸರಕಾರದ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಂಡು ಡಿ.ದೇವರಾಜ ಅರಸು ಇಲಾಖೆ ಕೊಟ್ಟ ಪೈಪು ಮೋಟಾರ್ ಗಳನ್ನು ಬೇರೆಯವರಿಗೆ ಮಾರಾಟ ಮಾಡದೆ ನಿಮ್ಮ ಹೊಲಗಳಿಗೆ ಉಪಯೋಗ ಮಾಡಿಕೊಂಡು ರೈತರು ತಮ್ಮ ಆರ್ಥಿಕ ಮಟ್ಟವನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಡಿ.ದೇವರಾಜ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕುಷ್ಟಗಿ ತಾಲೂಕಿನ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ೨೬ ಫಲಾನುಭಗಳ ರೈತರಿಗೆ ಪೈಪು ಮೋಟಾರು ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ರೈತರ ಆರ್ಥಿಕ ಮಟ್ಟ ಸುಧಾರಣೆ ಆಗಲೆಂದು ಸರಕಾರ ಸಾಕಷ್ಟು ಅನುದಾನದ ಮೂಲಕ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಮೂಲಕ ನೀರಾವರಿ ಜಮೀನು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಆದ್ದರಿಂದ ಈ ಯೋಜನೆ ಬೇರೆಯವರಿಗೆ ಮಾರಾಟವಾಗಬಾರದು ತಮ್ಮ ರೈತನ ಒಳಿತಿಗಾ ಉಪಯೋಗವಾಗಬೇಕು ಎಂದರು.
ನಂತರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮಾತನಾಡಿ ಈ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ೧.೫ ಲಕ್ಷದ ಘಟಕದ ವೆಚ್ಚ ಇರುತ್ತದೆ ಇದರಲ್ಲಿ ಬೋರವೇಲ್ಸ್ ಗೆ ಬೇಕಾದ ಎಲ್ಲಾ ಸಾಮಾಗ್ರಿಗಳು ಇರುತ್ತವೆ ಕುಷ್ಟಗಿ ತಾಲೂಕಿನಲ್ಲಿ ೨೬ ಫಲಾನುಭಗಳು ಆಯ್ಕೆಯಾಗಿದ್ದು ಒಟ್ಟು ಘಟಕದ ವೆಚ್ಚು ೪೧ ಲಕ್ಷವಾಗಿದೆ ೨೦೧೮-೧೯ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಈ ಒಂದು ಸಲಕರಣೆಗಳು ಮಾತ್ರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಆದರೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಫೇಲಾದ ಬೋರವೇಲ್ಸ್ ಗಳಿಗೆ ಸಲಕರಣೆಗಳನ್ನು ನೀಡಲಾಗುದಿಲ್ಲ ಯಾವ ಕೊಳವೆಬಾವಿ ಬೋರ್ ಕೊರೆಸುವ ಮುನ್ನ ಬೋರನಲ್ಲಿ ನೀರು ಬಿದ್ದಿದ್ದರೆ ಮಾತ್ರ ಅಂತಹ ಫಲಾನುಭವಿಗಳಿಗೆ ಸಲಕರಣೆ ನೀಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ.ದೇವರಾಜ ಅರಸು ಇಲಾಖೆ ಸಿಬ್ಬಂದಿ ಗುಂಡಪ್ಪ ಸೇರಿದಂತೆ ಸಿಬ್ಬಂದಿಗಳು ಹಾಗೂ ರೈತರು ಉಪಸ್ಥಿತರಿದ್ದರು.