ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಇದೆ ತಾಯಿಯ ಸ್ಥಾನ

ದೇವನಹಳ್ಳಿ: ದಿನನಿತ್ಯದ ಚಟುವಟಿಕೆಗಳಲ್ಲಿ ಸಮಭಾಗಿಯಾಗಿದ್ದ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಸಂಸ್ಕೃತಿ ಬೆಳೆಯುತ್ತಾ ಬಂತು. ಮನುಷ್ಯರಿಗೆ ಅಮೃತ ಸದೃಶವಾದ ಹಾಲನ್ನು ನೀಡುವ ಕಾಮಧೇನುವಿಗೆ ಜನ್ಮಕೊಟ್ಟ ತಾಯಿಯ ಸ್ಥಾನವನ್ನು ನೀಡಿದ ಹಿರಿಮೆ, ನಮ್ಮ ಪರಂಪರೆ. ಹಾಗಾಗಿ ಭಾರತೀಯ ಆಹಾರ ಸಂಸ್ಕೃತಿ ಯಲ್ಲಿ ಹಾಲು, ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಖಾದ್ಯಗಳಿಗೆ ವಿಶೇಷ ಸ್ಥಾನಮಾನವಿದೆ  ಎಂದು ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ಮುನಿರಾಜು ತಿಳಿಸಿದರು.

 ಅವರು  ನಾಡಿನೆಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿ ಲಕ್ಷ್ಮಿ ಪೂಜೆಯನ್ನು ಜನರು ಭಕ್ತಿಯಿಂದ ಮಾಡಿದ್ದಾರೆ. ದೀಪಾವಳಿ ಹಬ್ಬದ ಅಂಗವಾಗಿ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. ಪೂಜೆಯ ದಿನ ಹಸುಗಳನ್ನು ದೇಗುಲಗಳಿಗೆ ಕರೆತರುವ ಹಾಗೂ ಗೋಪೂಜೆ ನೆರವೇರಿಸುವ ಕಾರ್ಯ ನವೆಂಬರ್ 5ರ ಬಲಿಪಾಡ್ಯಮಿಯಂದು ಪೂಜೆ ಸಲ್ಲಿಸಲು ಆದೇಶ ನೀಡಲಾಗಿದೆ ಅದರಂತೆ ಇಂದು ದೇವನಹಳ್ಳಿ ತಾಲ್ಲೂಕು ಸಾವಕನಹಳ್ಳಿ ಗ್ರಾಮದ ಶ್ರೀ ವೇಣುಗೋಪಾಲ ಸ್ವಾಮಿ ಮತ್ತು ಮುತ್ತುರಾಯಸ್ವಾಮಿ ದೇವಾಲಯದಲ್ಲಿ ಗೋಪೂಜೆ ನೆರವೇರಿಸಿ ಹಸುವಿಗೆ ಅಕ್ಕಿ ಬೆಲ್ಲ ತಿನಿಸಿ ಮಾತನಾಡಿ, ಗೋಮೂತ್ರಕ್ಕೆ ಔಷಧೀಯ ಹಾಗೂ ಕ್ರಮಿನಾಶಕ ಶಕ್ತಿಯಿದೆ. ಭಾರತೀಯ ವೈದ್ಯಪರಂಪರೆಯಾದ ಆರ್ಯುವೇದ ಪದ್ಧತಿಯಲ್ಲಿ ಗೋಮೂತ್ರ ಬಳಕೆ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ನಾರಾಯಣಾಚಾರ್, ಮುನಿರಾಜಪ್ಪ, ಮರಿಯಪ್ಪ, ಮುನಿಕೃಷ್ಣಪ್ಪ, ಕೆಂಪೇಗೌಡ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top