ಜಯಂತಿಗಳು ಬರಿ ಆಚರಣೆಗಳಾಗಿ ಉಳಿಯಬಾರದು

ಕೊಪ್ಪಳ : ಜಿಲ್ಲೆ ಕುಷ್ಟಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಕುಷ್ಟಗಿ, ಸಮಾಜ ಕಲ್ಯಾಣ ಇಲಾಖೆ ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಾಬು ಜಗಜೀವನರಾಂರವರ ೧೧೫ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಾ.ಬಾಬು ಜಗಜೀವನರಾಂರವರು ಶಿಕ್ಷಣದಿಂದ ಸಂಘಟಿತರಾಗಿ ಸಾಕಷ್ಟು ಶ್ರಮವಹಿಸಿ ಕಷ್ಟಗಳ ಮದ್ಯದಲ್ಲಿ ಶಿಕ್ಷಣ ಕಲಿತು ಈ ದೇಶವನ್ನು ಕಟ್ಟುವಲ್ಲಿ ಯಶಸ್ವಿಯಾದರು ಆದರೆ ಹಸಿರು ಕ್ರಾಂತಿ ಹರಿಕಾರ ಎಂದು ಹೆಸರು ಪಡೆಯಬೇಕಾದರೆ ಯಾವ ಭೂಮಿಯಲ್ಲಿ ಬೀಜ ಬಿತ್ತಿದರೆ ಫಲ ಕೊಡುತ್ತದೆ ಎಂಬುದನ್ನು ಹರಿತುಕೊಂಡು ಯೋಜನೆ ರೂಪಿಸಿ ರೈತರಿಗೆ ಹಸಿರು ಕ್ರಾಂತಿಯಾಗಿದ್ದರು ಎಂದರು.ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಮೇಣೆದಾಳ ಸಿ.ಆರ್.ಪಿ ಶರಣಪ್ಪ ತುಮರಿಕೊಪ್ಪ ಡಾ.ಬಾಬು ಜಗಜೀವರಾಂ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದರು.

ತಹಶಿಲ್ದಾರರ ಎಂ ಸಿದ್ದೇಶ ಪ್ರಾಸ್ಥವಿಕವಾಗಿ ಮಾತನಾಡಿದರು. ಕಲ್ಯಾಣ ಇಲಾಖೆ ಅಧಿಕಾರಿ ಬಾಲಚಂದ್ರಪ್ಪ ಸಂಗನಾಳ ಸ್ವಾಗತಿಸಿದರು. ಜೀವನಸಾಬ ಬಿನ್ನಾಳ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಇಒ ಹನಮಂತಗೌಡ ಪಾಟೀಲ, ಸಿ.ಪಿ.ಐ ನಿಂಗಪ್ಪ ರುದ್ರಕೊಳ್ಳ, ಬಿಓ ಸುರೇಂದ್ರ ಕಾಂಬಳೆ, ಬಿ.ಆರ್.ಸಿ ಶ್ರೀ ಶೈಲಾ ಸೋಮನಕಟ್ಟಿ, ಜಿಲ್ಲಾ ಪಂಚಾಯತ ಎಇಇ ಕೈಲಾಸ್, ಪುರಸಭೆ ಸದಸ್ಯರಾದ ವಸಂತ ಮೇಲಿನಮನಿ, ಸುಂಕರಾಜ ತಾಳಕೇರಿ, ಗ್ರಾ.ಪಂ ಸದಸ್ಯರಾದ ರಾಯಪ್ಪ, ಕೃಷ್ಣಮೂರ್ತಿ ಟೆಂಗುಂಟಿ, ರಮೇಶ ಮೇಲಿನಮನಿ, ಗ್ಯಾನಪ್ಪ ಹಿರೇಮನಿ, ಬಾಳಪ್ಪ ಬೇವಿನಕಟ್ಟಿ, ಶಿವಪುತ್ರಪ್ಪ ಗುಮಗೇರಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top