ಭರತ್ರೆಡ್ಡಿಯವರಿನ್ನು “ಗಾಂಜಾ ಗಿರಾಕಿ”
ಬಳ್ಳಾರಿ: ಬಳ್ಳಾರಿ ನಗರ ಶಾಸಕ ಭರತ್‌ರೆಡ್ಡಿಯವರಿಗೆ ನಾವು ಹೊಸ ಹೆಸರನ್ನು ನಾಮಕರಣ ಮಾಡುತ್ತಿದ್ದೇವೆ. ಭರತ್‌ರೆಡ್ಡಿಯವರಿನ್ನು ಗಾಂಜಾ ಗಿರಾಕಿ ಎಂದು ಕೆಆರ್‌ಪಿಪಿ ಮುಖಂಡ ಜನಾರ್ದನರೆಡ್ಡಿಯವರ ಆಪ್ತ ಸಹಾಯಕರಾದ ಅಲಿಖಾನ್ ಅವರು ನಗರ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೆಆರ್‌ಪಿಪಿ ಪ್ರಧಾನ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ ನಗರ ಶಾಸಕ ಭರತ್‌ರೆಡ್ಡಿಯವರು ಯಾವಾಗಲೂ ಗಾಂಜಾ ಮತ್ತಿನಲ್ಲಿದ್ದು, ಏನೇನೋ ಮಾತನಾಡುತ್ತಾರೆ. ಅವರಿಗೆ ಯಾರ ಬಗ್ಗೆ ಏನು ಮಾತನಾಡುತ್ತಿದ್ದೇನೆ ಎಂಬುದು ಕೂಡ ತಿಳಿಯದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಅವರಿಗೆ ಗಾಂಜಾ ಗಿರಾಕಿ ಎಂಬ ಹೆಸರು ನಾಮಕರಣ ಮಾಡುತ್ತಿದ್ದೇವೆ ಎಂದರಲ್ಲದೆ, ಕಳೆದ ಹಲವು ದಿನಗಳ ಹಿಂದೆ ನಡೆದ ಕೆಆರ್‌ಪಿಪಿ ಕಾರ್ಯಕರ್ತನ ಕೊಲೆ ವಿಚಾರವಾಗಿ ಮಾತನಾಡಿ, ಸಚಿವ ನಾಗೇಂದ್ರ ಅವರು ಜನಾರ್ದನರೆಡ್ಡಿಯವರು ಭ್ರಮೆಯಲ್ಲಿದ್ದಾರೆ ಎಂಬ ಹೇಳಿಕೆ ನೀಡಿದ್ದು, ನಿಜಕ್ಕೂ ಭ್ರಮಯಲ್ಲಿರುವವರು ಸಚಿವರೇ, ಶಾಸಕ ಭರತ್‌ರೆಡ್ಡಿಯವರ ಬೆಂಬಲಿಗನೇ ಕೆಆರ್‌ಪಿಪಿ ಕಾರ್ಯಕರ್ತನ ಕೊಲೆ ಮಾಡಿರುವುದು. ಇದಕ್ಕೆ ಕಾಂಗ್ರೆಸ್ ನಾಯಕರ ಬೆಂಬಲ ಇರುವುದಕ್ಕೇ ಈ ಕೊಲೆ ನಡೆದಿದೆ ಎಂದು ತಿಳಿಸಿದರು.
ಕೆಆರ್‌ಪಿಪಿ ಮುಖಂಡ ಮಾಜಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಂವಿಧಾನದ ಪ್ರಕಾರ ಕ್ಷೇತ್ರಕ್ಕೆ ಒಬ್ಬರೇ ಶಾಸಕರಿರುತ್ತಾರೆ. ಆದರೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಐವರು ಶಾಸಕರಿದ್ದಾರೆ. ಭರತ್‌ರೆಡ್ಡಿ, ಸೂರ್ಯನಾರಾಯಣ ರೆಡ್ಡಿ, ಪ್ರತಾಪ್‌ರೆಡ್ಡಿ, ಶರತ್‌ರೆಡ್ಡಿ, ಚಾನಾಳ್ ಶೇಖರ್ ಈ ಐವರು ಶಾಸಕರಾಗಿದ್ದಾರೆ,. ಇದರಿಂದ ಇಲಾಖೆಗಳಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಕೆಲ ಅಧಿಕಾರಿಗಳು ತಮ್ಮ ಅಳಲನ್ನು ನಮ್ಮ ಬಳಿ ತೋಡಿಕೊಂಡಿದ್ದಾರೆ. ಇಂತಹವರಿಂದ ಅಭಿವೃದ್ಧಿ ಹೇಗೆ ಸಾಧ್ಯ. ಅಲ್ಲದೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‌ಗಳ ಗಾಳಿಯಿಂದ ಗೆದ್ದು ಬಂದಿದ್ದಾರೆ ಹೊರತು ಸಾಮಾನ್ಯನಾಗಿ ಸ್ಪರ್ಧೆ ಮಾಡಿದ್ದಿದ್ದರೆ ಗೆಲ್ಲುವುದು ಅಸಾಧ್ಯದ ಮಾತು. ಈಗಲೂ ನಗರ ಶಾಸಕರಿಗೆ ಚಾಲೆಂಜ್ ಮಾಡುತ್ತೇನೆ. ಶಾಸಕರು ಈಗಲೇ ರಾಜಿನಾಮೆ ನೀಡಿ ನನ್ನ ವಿರುದ್ಧವೇ ಗೆಲ್ಲಲಿ ನೋಡೋಣ. ನಾನು ಜನಾರ್ದನರೆಡ್ಡಿಯವರ ಫೋಟೋ ಇಟ್ಟುಕೊಂಡು ಸ್ಪರ್ಧೆ ಮಾಡುತ್ತೇನೆ. ಅವರು ಪಕ್ಷೇತರರಾಗಿ ಯಾರ ಫೋಟೋವನ್ನಾದರೂ ಇಟ್ಟುಕೊಂಡು ಸ್ಪರ್ಧೆ ಮಾಡಲಿ. ನಾನು ಅವರ ವಿರುದ್ಧ ಸೋತರೆ ಶಾಸಕರ ಮನೆಗೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಲು ಸಿದ್ದನಿದ್ದೇನೆ ಅವರು ಸೋತರೆ ಏನು ಮಾಡುತ್ತಾರೆ ಎಂದು ಹೇಳಲಿ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕೆಆರ್‌ಪಿಪಿ ಪಕ್ಷದ ಸಿರುಗುಪ್ಪ ಕ್ಷೇತ್ರದ ಮುಖಂಡ ಧರೆಪ್ಪನಾಯಕ, ಮಹಿಳಾ ಘಟಕದ ಅಧ್ಯಕ್ಷೆ ಹಂಪಿರಮಣ, ಮಲ್ಲಿಕಾರ್ಜುನ್ ಆಚಾರಿ, ಸಂಜುಬೆಟಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Jai janardana Reddy sir
Jai janardana Reddy sir i am saporing sir