ಫ್ರೀಡಂ ಟು ವಾಕ್, ಸೈಕಲ್ ಅಭಿಯಾನ

ದಾವಣಗೆರೆ,ಡಿ,30 : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಫ್ರೀಡಂ ಟು ವಾಕ್ ಮತ್ತು ಸೈಕಲ್ ಅಭಿಯಾನ ಎಂಬ ಶೀರ್ಷಿಕೆಯಡಿಯಲ್ಲಿ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್ ನಗರಗಳ ನಡುವೆ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಪರ್ಧೆಯ ಮೂಲ ಉದ್ದೇಶ ಸಾರ್ವಜನಿಕ ಕಚೇರಿ, ಶಾಲೆ ಹಾಗೂ ಇನ್ನಿತರ ದಿನನಿತ್ಯದ ಕೆಲಸ ಕಾರ್ಯಗಳಿಗೆ ಕಾಲ್ನಡಿಗೆ ಮತ್ತು ಸೈಕಲ್‍ನ್ನು ಬಳಸುವುದರ ಮೂಲಕ ಆರೋಗ್ಯ ಗುಣಮಟ್ಟವನ್ನು ಹೆಚ್ಚುಸುವುದಾಗಿದೆ. ಇದರ ಅಂಗವಾಗಿ ಜಾಗೃತಿ ಮೂಡಿಸಲು ಜ.01 ರಿಂದ 26 ರವರೆಗೆ ಫ್ರೀಡಂ ಟು ವಾಕ್ ಮತ್ತು ಸೈಕಲ್ ಅಭಿಯಾನವನ್ನು ಸ್ಪರ್ಧಾತ್ಮಕವಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರ ದೇಶದ ಎಲ್ಲಾ ಸ್ಮಾರ್ಟ್ ಸಿಟಿಗಳಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ವೈಯಕ್ತಿಕವಾಗಿ ನೋಂದಣಿಕರಿಸುವುದರ ಮೂಲಕ ತಮ್ಮ ಬಿಡುವಿನ ವೇಳೆಯಲ್ಲಿ ತಮಗೆ ಲಭ್ಯವಿರುವ ಸ್ಥಳದಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಸ್ಮಾರ್ಟ್ ನಗರಗಳ ನಡುವಿನ ಸ್ಪರ್ಧೆಯಲ್ಲಿ ದಾವಣಗೆರೆ ನಗರವನ್ನು ವಿಜಯಶಾಲಿಯಾಗಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು allforsport.inಆ್ಯಪ್‍ನ್ನು ಗೂಗಲ್ ಪ್ಲೇ ಅಥವಾ ಆ್ಯಪ್ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಕೊಳ್ಳಬೇಕು. ವಾಕ್ ಮಾಡುವವರು http://www.allforsport.in/…/3c0730bo-5d72-11ec-b50a… http://www.allforsport.in/challenges/challenge/12d3d8e6-5d73-11ec-a53f-efaefa10d5dcಲಿಂಕ್ ಅಥವಾ ಕ್ಯೂಆರ್ ಕೋಡ್ ಮೂಲಕ ನೋಂದಾಯಿಸಿಕೊಳ್ಳಬಹುದೆಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ.

Leave a Comment

Your email address will not be published. Required fields are marked *

Translate »
Scroll to Top