ಶ್ರೀ ವಾಸವಿ ವೇದ ನಿಧಿ ಟ್ರಸ್ಟ್ ನ 45ರ ಸಂಭ್ರಮದಲ್ಲಿ ಸಾಮಾಜಿಕ ಸೇವಾ ಚಟುವಟಿಕೆ
ಬೆಂಗಳೂರು : ಶ್ರೀ ವಾಸವಿ ವೇದ ನಿಧಿ ಟ್ರಸ್ಟ್ 45 ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು, ಬಡ ವಿದ್ಯಾರ್ಥಿಗಳಿಗೆ ಇಂದು ಉಚಿತ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಳೆದ 1979ರಲ್ಲಿ ಪ್ರಾರಂಭಗೊಂಡ ಶ್ರೀ ವಾಸವಿ ವೇದ ನಿಧಿ ಟ್ರಸ್ಟ್ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. 75 ಮಂದಿ ಬಡ ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುತ್ತಿದೆ. ವೈದಿಕ ಶಿಕ್ಷಣ, ಸಂಸ್ಕೃತ ಸಾಹಿತ್ಯ ಕಲಿಕೆಗಾಗಿ ಇಡೀ ದಕ್ಷಿಣ ಭಾರದಾದ್ಯಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಜಯನಗರ ಪೂರ್ವ 1ಬ್ಲಾಕ್ ನಲ್ಲಿ ಸುಸಜ್ಜಿತ ವಸತಿ ನಿಲಯಗಳಲ್ಲಿ ಉಚಿತ ಆಹಾರ, ಸಮಗ್ರ ಶಿಕ್ಷಣ, ಶೈಕ್ಷಣಿಕ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಟ್ರಸ್ಟ್ ನ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ, ಪ್ರಧಾನ ಕಾರ್ಯದರ್ಶಿ ಆರ್. ಪಿ. ರವಿಶಂಕರ್ ತಿಳಿಸಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ತಮ್ಮ ತಂದೆ ತಾಯಿ ಸಂಬಂಧಿಕರ ಸಮ್ಮುಖದಲ್ಲಿ ಬ್ರಹ್ಮೋಪದೇಶ ನಡಸಲಾಗಿದೆ. ಟ್ರಸ್ಟ್ ಪ್ರಸ್ತುತ ವಾಸವಿ ಮಠ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುತ್ತಿದೆ. ನವರಾತ್ರಿ, ವಾಸವಿ ಜಯಂತಿ, ಇತರ ಎಲ್ಲ ಪ್ರಮುಖ ಹಬ್ಬಗಳನ್ನು ಆಚರಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.