ಉಚಿತ ಹಿಂದೂಸ್ತಾನಿ ಸಂಗೀತ ತರಗತಿಗಳು ಇದೇ 15 ರಿಂದ ಪ್ರಾರಂಭ

ಕುಷ್ಟಗಿ: ಸಂಗಮೇಶ್ವರ ಸ್ವಾದಿಮಠ ಸಂಗೀತ ವಿದ್ವತ್ ಎಂ.ಎ ಸಂಗೀತ ಶಿಕ್ಷಕ ಹುಬ್ಬಳ್ಳಿ ಇವರ | ಸಯೋಗದಲ್ಲಿ
ಉಚಿತವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬೇಸಿಕ್ ತರಗತಿಗಳು 15-10-2021 ಶುಕ್ರವಾರ ರಂದು ಬೆಳಿಗ್ಗೆ 10 ಗಂಟೆಗೆ
ಪ್ರಾರಂಭ ಮಾಡಲಾಗುತ್ತದೆ ಎಂದು ಸಂಗಮೇಶ್ವರ ಸ್ವಾದಿಮದ ಹುಬ್ಬಳ್ಳಿ ಇವರು ತಿಳಿಸಿದರು. ಕುಷ್ಟಗಿ ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ನಗರದಲ್ಲಿ ಇದೇ ಪ್ರಥಮ ಬಾರಿಗೆ ವಯಸ್ಸಿನ ಮಿತಿಯಿಲ್ಲದೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಾಠ ಶಾಲೆಯನ್ನು ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಅಂತರಾಷ್ಟ್ರೀಯ ಪ್ರತಿಷ್ಠಾನ (ರಿ) ಹುಬ್ಬಳ್ಳಿ ವತಿಯಿಂದ ಕೊಪ್ಪಳ ರಸ್ತೆಯ ವಿವೇಕ ಸಂಗೀತ ವಿದ್ಯಾಲಯದಲ್ಲಿ ಪ್ರಾರಂಭ
ಮಾಡಲಾಗುತ್ತಿದೆ. ಆದ್ದರಿಂದ ಆಸ್ತಕರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲೆಯಬೇಕು ಎನ್ನುವವರು ಕೂಡಲೇ ಉಚಿತ
ಪ್ರವೇಶವನ್ನು ಪಡೆಯಬಹುದಾಗಿದೆ. ಅ.15 ಶುಕ್ರವಾರ ವಿಜಯ ದಶಮಿ ಶುಭ ದಿನದಂದು ಉದ್ಘಾಟನೆಗೊಳ್ಳಲಾಗುತ್ತಿದ್ದು ನಮ್ಮ
ವಿವೇಕ ಸಂಗೀತ ಪಾಠ ಶಾಲೆಯಿಂದ ಜಿ. ಕನ್ನಡ ಟಿವಿ ಚಾನಲ್‌ನಲ್ಲಿ ಹಾಡಿದ್ದಾರೆ ಆದ್ದರಿಂದ ಈ ಒಂದು ಸದುಪಯೋಗವನ್ನು
ಪಡೆದುಕೊಳ್ಳಬೇಕು ಎಂದರು.


ಸ್ಥಳೀಯ ಪ.ಬ,108 ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ, ಕುಷ್ಟಗಿ ಇವರು ಕಾರ್ಯಕ್ರಮ
ಉದ್ಘಾಟಿಸುವವರು, ಆಧ್ಯಕತೆಯನ್ನು ಶಾಸಕ ಆಮರೇಗೌಡ ಪಾಟೀಲ ಬಯಷದ ವಹಿಸಿಕೊಳ್ಳುವವರು. ಮುಖ
ಆಥಿಗಳಾಗಿ ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಸುರಸಭೆ ಅಧ್ಯಕ್ಷರಾದ
ಕೆ.ಗಂಗಾಧರಯ ಹಿರೇಮಠ, ಪುರಸಭೆ ಸದಸ್ಯ ನಾಗರಾಜ ಹಿರೇಮಠ, ನಟರಾಜ ಸೊನಾರ್, ವೀರೇಶ ಬಂಗಾರ ಶೆಟ್ಟರ್‌.
ಎ.ವಾಯ್ ಲೂಕರೆ ಸೇರಿದಂತೆ ಹಲವಾರರು ಭಾಗವಹಿಸಲಿದ್ದಾರೆ. ಆದ್ದರಿಂದ ಕುಷ್ಟಗಿ ಪಟ್ಟಣದ ಜನತೆ ತಮ್ಮ ಮಕ್ಕಳನ್ನು
ಸಂಗೀತ ಪಾಠ ಶಾಲೆಗೆ ಕಳಿಸಬಹುದಾಗುದೆ ಎಂದು ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top