ರಾಯಚೂರು : ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ವತಿಯಿಂದ ರಾಜೀವಗಾಂಧಿ ಸೂಪರ್ ಸ್ಷೆಷಾಲಿಟಿ ಒಪೆಕ್ ಆಸ್ಪತ್ರೆಯ ಸಹಯೋಗದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.ರಾಜೀವಗಾಂಧಿ ಸೂಪರ್ ಸ್ಷೆಷಾಲಿಟಿ ಒಪೆಕ್ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ|| ನಾಗರಾಜ ಗದ್ವಾಲ್ ಪತ್ರಕರ್ತರ ಆರೋಗ್ಯ ತಪಾಸಣೆಗೆ ವಿಶೇಷ ಕೋಣೆ ವ್ಯವಸ್ಥೆ ಕಲ್ಪಿಸಿ ಉಚಿತ ಆರೋಗ್ಯ ತಪಾಸಣೆಗೆ ಚಾಲನೆ ನೀಡಿ, ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಆರೋಗ್ಯದ ಕಡೆ ಗಮನಹರಿಸಬೇಕು ಮತ್ತು ಇಂತಹ ಶಿಬಿರದ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಉಚಿತ ಆರೋಗ್ಯ ತಪಾಸಣೆ ವೇಳೆ ರಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ|| ಬಸವರಾಜ ಪೀರಾಪುರೆ ಭೇಟಿ ನೀಡಿ ಪತ್ರಕರ್ತರ ಆರೋಗ್ಯ ಸಮಸ್ಯೆ ಕುರಿತು ವಿಚಾರಿಸಿ ರಿಮ್ಸ್ ಮತ್ತು ಒಪೆಕ್ ಆಸ್ಪತ್ರೆಯ ಸೌಲಬ್ಯ ಪಡೆಯಲು ಪತ್ರಕರ್ತರಿಗೆ ಸಲಹೆ ನೀಡಿದರು.
ಉಚಿತ ಆರೋಗ್ಯ ತಪಾಸಣೆ ವೇಳೆಡಾ|| ಅರುಣ ಮಸ್ಕಿ, ಡಾ|| ಭಾಸ್ಕರ್ ಮತ್ತಿತರ ವೈದ್ಯರು ಪತ್ರಕರ್ತರ ರಕ್ತದೊತ್ತಡ, ಮಧುಮೇಹ, ಇಸಿಜಿ,ಎಕೋನಂತಹ ಪರೀಕ್ಷೆಗಳು ಮತ್ತು ಅಗತ್ಯ ಇರುವವರಿಗೆ ಸ್ಕ್ಯಾನಿಂಗ್ ನಂತಹ ತಪಾಸಣೆ ಮತ್ತು ಚಿಕಿತ್ಸೆ ನೀಡಿದರು. ಪತ್ರಕರ್ತರ ಉಚಿತ ಆರೋಗ್ಯ ತಪಾಸಣೆ ಉಸ್ತುವಾರಿಯಾದ ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್ ಕಾರ್ಯಕ್ರಮ ನಿರ್ವಹಿಸಿದರು. ರಾಯಚೂರು ರಿಪೋರ್ಟ್ ರ್ಸ್ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ, ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ , ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ,ಜಗನ್ನಾಥ ದೇಸಾಯಿ,ಶಿವಮೂರ್ತಿ ಹಿರೇಮಠ, ನಾಗರಾಜ ಚಿನಗುಂಡಿ ಸೇರಿದಂತೆ 45 ಕ್ಕೂ ಹೆಚ್ಚು ಪತ್ರಕರ್ತರು ಉಚಿತ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡರು.