ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಮೋಕಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭವ್ ಕಾರ್ಯಕ್ರಮದ ಅಡಿಯಲ್ಲಿ ಉಚಿತ ಆರೋಗ್ಯ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಹೀರಾಳು ಪಕೀರಮ್ಮ ವೆಂಕಟೇಶ್, ಹಾಗೂ ಮೋಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಭಾರತಿ ನೆರವೇರಿಸಿದರು.
ಈ ವೇಳೆ ಮಾತನಾಡಿದ ಡಾ.ಭಾರತಿ, ಪ್ರತಿ ವಾರ ಕ್ಷೇಮ ಕೇಂದ್ರಗಳಲ್ಲಿ ಉಚಿತ ಆರೋಗ್ಯ ಮೇಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿಯಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಹ ಪ್ರತಿ ವಾರ ನಿಗಧಿತ ಕಾರ್ಯಕ್ರಮಗಳ ಪ್ರಕಾರ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಮೋಕಾ ಕ್ಷೇತ್ರದ ಆರೋಗ್ಯ ಶಿಕ್ಷಣ ಅಧಿಕಾರಿ ಖುರ್ಶಿದ್ ಬೇಗಮ್ ಅವರು ಮಾತನಾಡಿ, ಅಭಾ ಮತ್ತು ಅಂಗಾಂಗ ನೋಂದಣಿ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ಫಕೀರಮ್ಮ ಮಾತನಾಡಿ, ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿರುವ ಆರೋಗ್ಯ ಮೇಳದಂತಹ ಕಾರ್ಯಕ್ರಮಗಳಿಗೆ ಪಂಚಾಯಿತಿಯ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.
ಮೋಕಾ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ವಂದನಾರ್ಪಣೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ದಂತ ವೈದ್ಯರಾದ ಡಾ.ಅರ್ಜುಮುನ್ನಿಸಾ. ಅರವಳಿಕೆ ತಜ್ಞ ವೈದ್ಯ ಡಾ.ನಿತೀಶ್ ಕುಮಾರ್, ಕಚೇರಿ ಅಧೀಕ್ಷಕ ಸಂತೋಷ ಕುಮಾರ್, ಶುಶ್ರೂಶಕರಾದ ಎಂ.ಉಷಾರಾಣಿ, ಚಿದಾನಂದ, ಆಸಾಂಕ್ರಾಮಿಕ ವಿಭಾಗದ ಜೈಕುಮಾರ್, ಶೋಭಾ, ಪದ್ಮ ಹಾಗು ಆರೋಗ್ಯ ಮಿತ್ರ ಶ್ರೀನಿವಾಸ್, ಆರೋಗ್ಯ ನಿರೀಕ್ಷಣಾ ಅಧಿಕಾರಿ ಮೊಹಮ್ಮದ್ ಇಶಾಕ್, ಗುರುಸಿದ್ದಪ್ಪ ಹಾಗು ಮಂಜುನಾಥ್, ಅಭಾ ದಾಖಲಾತಿ ಹಾಗು ಪ್ರಾಥಮಿಕ ಸುರಕ್ಷಾ ಅಧಿಕಾರಿ ಪಾರ್ವತಿ, ನಂದಿನಿ, ಎರ್ರಮ್ಮ ಹಾಗು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.