ಉಚಿತ ಕೈ, ಕಾಲು ಜೋಡಣಾ ಶಿಬಿರ: ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕು!
ಬೆಂಗಳೂರು : 09/7/2025 ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಕೈ, ಕಾಲು ಜೋಡಣಾ ಶಿಬಿರವನ್ನು ದಿನಾಂಕ: 10-07-2025 ರಿಂದ 20-07-2025 ರವರೆಗೆ ಹಮ್ಮಿಕೊಳ್ಳಲಾಗಿದೆ.
ಕೈಕಾಲು ಅಂಗ ಊನರಾಗಿರುವ, ಅಪಘಾತಗಳಿಂದ, ಹಾವುಗಳ ಕಡತದಿಂದ ಮತ್ತಿತರೆ ಕಾರಣಗಳಿಂದ ಕೈಕಾಲು ಕಳೆದುಕೊಂಡವರು ಮೊಬೈಲ್ ನಂ.9945558579/
9632834071/ 7975102982 ಕ್ಕೆ ಸಂಪರ್ಕಿಸಬಹುದಾಗಿದೆ.ಕೃತಕ ಕೈಕಾಲುಗಳ ಜೋಡಣೆ ಕಾರ್ಯ ಸಂಪೂರ್ಣ ಉಚಿತವಾಗಿರುತ್ತದೆ. ಚಿಕಿತ್ಸೆ ವ್ಯವಸ್ಥೆ, ಔಷಧಿಗಳನ್ನು ಉಚಿತವಾಗಿ ಆಸ್ಪತ್ರೆಯಿಂದ ಕೊಡಲಾಗುತ್ತದೆ.ಊಟ ಉಪಹಾರವನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ. ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಮುಂದಾಗಬೇಕೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.