ರಾಯಚೂರು: ಸಿಂಧನೂರು–ರಾಯಚೂರು ಮುಖ್ಯ ರಸ್ಥೆಯಲ್ಲಿ ವೈಷ್ಣವಿದೇವಿ ದೇವಸ್ಥಾನದ ಸಮೀಪ ಮಂಗಳವಾರ ರಾತ್ರಿ ಕ್ರೂಸರ್ ಪಲ್ಪಿಯಾಗಿ ಚಾಲಕ ಹಾಗೂ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಾದ ಸುಜಯೇಂದ್ರ ಕೃಷ್ಣಮೂರ್ತಿ(22), ಬಳ್ಳಾರಿಯ ಹಯವದನ ಪ್ರಹ್ಲಾದಚಾರಿ(18), ಕೊಪ್ಪಳದ ಅಭಿಲಾಷ ಅಶ್ವತ್ ಓಲಿ (20) ಹಾಗೂ ಚಾಲಕ ಕಂಸಾಲಿಶಿವಾ ಸೋಮಣ್ಣ(20) ಮೃತಪಟ್ಟಿದ್ದಾರೆ.
ಬಳ್ಳಾರಿಯ ಶ್ರೀಹರಿ ರಾಘವೇಂದ್ರ, ಗಂಗಾವತಿಯ ವಿಜಯೇಂದ್ರ ಸುಶಿಲೇಂದ್ರ, ತಾಳಿಕೋಟೆಯ ಭರತ ರವಿ ಜೋಷಿ, ದೇವದುರ್ಗ ತಾಲ್ಲೂಕಿನ ಗಬ್ಬೂರಿನ ರಾಘವೇಂದ್ರ ರಾಜೇಂದ್ರರಾವ್, ಯಾದಗಿರಿಯ ತನಿಶ್ ಉಲ್ಲಾಸ, ಕುಷ್ಟಗಿಯ ಶ್ರೀಕರ ರಾಘವೇಂಧ್ರ ಆಚಾರಿ, ನಾರಾಯಣಪೇಟೆಯ ವಾಸುದೇವ ಮಂಜುನಾಥ, ರಾಘವೇಂದ್ರ ಸುಧೀಂದ್ರ, ತಿರುಪತಿಯ ಬಸಂತ ಜಗಧೀಶ ಶರ್ಮಾ, ಬಳ್ಳಾರಿಯ ಜಯಸಿಂಹ ರಾಘವೇಂದ್ರ ಗಾಯಗೊಂಡಿದ್ದಾರೆ.ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪದ ನರಹತಿ ತೀರ್ಥರ ಮೂರು ದಿನಗಳ ಆರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾತ್ರಿ ಮಂತ್ರಾಲಯದಿAದ ನಾಲ್ಕು ಕ್ರೂಸರ್‌ಗಳಲ್ಲಿ ಹೊರಟಿದ್ದರು. ವೇಗವಾಗಿ ಚಲಿಸುತ್ತಿದ್ದ ಕ್ರೂಸರ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರಿಗೆ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.