ಸಂಸ್ಥಾಪನಾ ದಿನಾಚರಣೆ

ದೇವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ತಾಲ್ಲೂಕು ಅಧ್ಯಕ್ಷ ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿಯಲ್ಲಿ ನಡೆಯಿತು. ತಾಲ್ಲೂಕು ಬಿಜೆಪಿ ಪಕ್ಷದ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಮೊದಲಿಗೆ ಒಂದೇ ಮಾತರಂ ಗೀತೆ ಹಾಡುವ ಮೂಲಕ ಆಚರಿಸಿ ರಾಷ್ಟ್ರ ಧ್ವಜ ಹಾಗೂ ಬಿಜೆಪಿ ಬಾವುಟ ಹಿಡಿದು ಕೇಸರಿ ಶಾಲು ಧರಿಸಿ ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಜೈಕಾರ ಹಾಕುವ ಮೂಲಕ ಮೋದಿಯವರ ಕರೆಗೆ ಧ್ವನಿಗೂಡಿಸಿದರು.

ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮಾತನಾಡಿ, ಭಾರತೀಯ ಜನತಾ ಪಕ್ಷವು ಏಪ್ರಿಲ್ 6 42 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಪ್ರಸ್ತುತ ಭಾರತದ ಅತಿದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿಯು 1980 ರ ದಶಕದ ಆರಂಭದಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದೆ ಇದೀಗ ಪ್ರಮುಖ ರಾಷ್ಟ್ರೀಯ ಪಕ್ಷವಾಗಿ ಬೆಳೆದು ನಿಂತಿದೆ. ಶ್ಯಾಂಪ್ರಸಾದ್ ಮುಖರ್ಜಿ ರವರ ತ್ಯಾಗಬಲಿದಾನದ ಫಲವಾಗಿ ಏಪ್ರಿಲ್ 6 ರಂದು ಸಂಸ್ಥಾಪನಾ ದಿನವನ್ನಾಗಿ ಆಚರಿಸಿ ರಾಷ್ಟ್ರೀಯತೆ ಮತ್ತು ಪಕ್ಷದ ಸಂಘಟನೆ ಮೂಲಕ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ಬುದ್ಧಿ ಜೀವಿಗಳ ಮುಖಂಡರು ಮನಸ್ಸು ಮಾಡಿದ್ದಾರೆ ಎಂದರು.

ಜನಸಂಘದ ಮೂಲಕ ಉದಯವಾದ ಭಾರತೀಯ ಜನತಾ ಪಕ್ಷ ಕಮಲದ ಚಿನ್ಹೆ ಮೂಲಕ ತನ್ನ ಚಾಪನ್ನು ಮೂಡಿಸಿ ಇಂದು ನರೇಂದ್ರ ಮೋದಿ ನೇತೃತ್ವದ ಬಿ.ಜೆ.ಪಿ.ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಪಾರದರ್ಶಕ ಆಡಳಿತ ನೀಡುತ್ತಿದ್ದು ಇಂದು ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದು ಪಕ್ಷದ ಕಚೇರಿಯಿಂದ ಶೋಭಾಯಾತ್ರೆ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರು ಅರ್ಧ ಕಿಲೋ ಮೀಟರ್ ದೂರ ಕ್ರಮಿಸಿ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಸಿಹಿ ಹಂಚಿ ಹಂಚುವ ಮೂಲಕ ಸಂಭ್ರಮಿಸುತ್ತಿರುವುದಾಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್ ತಿಳಿಸಿದರು. ಈ ಸಂದರ್ಭದಲ್ಲಿ ಬಿ.ಜೆ.ಪಿ ರೈತ ಮೋರ್ಚಾ ಜಿಲ್ಲಾಧ್ತಕ್ಷ ರವಿಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರವಿಕುಮಾರ್, ಮುಖಂಡರಾದ ಓಬ್ದೇನಹಳ್ಳಿ ಮುನಿಯಪ್ಪ, ವಕೀಲ ನಾರಾಯಣಸ್ವಾಮಿ, ಚಂದ್ರಸಾಗರ್, ಪುನೀತ, ಇನ್ನು ಹಲವು ಮೋರ್ಚಾಗಳ ಪದಾಧಿಕಾರಿಗಳು, ಮುಖಂಡರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top